Fact Check: ಪಾಕಿಸ್ತಾನದ ಈ ವಿಡಿಯೊ ನಾಲ್ಕು ತಿಂಗಳು ಹಳೆಯದ್ದು

ಒಂದಿಷ್ಟು ಜನರ ಗುಂಪು ಗೋಧಿ ಹಿಟ್ಟಿನ ಚೀಲಕ್ಕಾಗಿ ಬೀದಿಯಲ್ಲಿ ಬಡಿದಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನದಲ್ಲಿ ಜನರಿಗೆ ತಿನ್ನಲೂ ಅನ್ನವಿಲ್ಲ ಎಂಬುದನ್ನು ಈ ವಿಡಿಯೊ ಸೂಚಿಸುತ್ತದೆ ಎಂದು ಜಾಲತಾಣ ಬಳಕೆದಾರರು ಉಲ್ಲೇಖಿಸಿದ್ದಾರೆ. ಉತ್ತರ ಪ್ರದೇಶದ ಶಾಸಕ ಶಲಭ್ ಮಣಿ ತ್ರಿಪಾಠಿ ಸೇರಿದಂತೆ ಹಲವರು ಈ ವಿಡಿಯೊವನ್ನು ಹಂಚಿಕೊಂಡಿದ್ದು, ಶ್ರೀಲಂಕಾದಂತೆ ಪಾಕಿಸ್ತಾನದ ಸ್ಥಿತಿಯೂ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಭಾರತದ ಸ್ಥಿತಿ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ, ಈ ವಿಡಿಯೊ ಹಳೆಯದು.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ಈ ವಿಡಿಯೊ ಪಾಕಿಸ್ತಾನದ ಈಗಿನ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ್ದಲ್ಲ ಎಂದು ‘ಆಲ್ಟ್ ನ್ಯೂಸ್’ ವೆಬ್‌ಸೈಟ್ ವರದಿ ಮಾಡಿದೆ. ಪಾಕಿಸ್ತಾನವು ಈ ಹಿಂದೆ ಭೀಕರ ಪ್ರವಾಹಕ್ಕೆ ಒಳಗಾದ ಸಮಯದಲ್ಲಿ ನೀಡಲಾಗಿದ್ದ ಆಹಾರದ ಪೊಟ್ಟಣಗಳಿಗಾಗಿ ಸಂತ್ರಸ್ತರು ಮುಗಿಬಿದ್ದಿದ್ದರು. ಈ ವಿಡಿಯೊ ಕನಿಷ್ಠ ನಾಲ್ಕು ತಿಂಗಳು ಹಳೆಯದಾಗಿದ್ದು, ಈಗಿನ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟನ್ನು ಕುರಿತದ್ದು ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ವೆಬ್‌ಸೈಟ್ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.