ಬುಧವಾರ, ಸೆಪ್ಟೆಂಬರ್ 22, 2021
27 °C

Factcheck: ಕೋವ್ಯಾಕ್ಸ್ ಒಪ್ಪಂದದಂತೆ ಭಾರತಕ್ಕೆ ವಿದೇಶಗಳಿಂದ ಬಂದ ಲಸಿಕೆ ಎಷ್ಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೋವ್ಯಾಕ್ಸ್‌ ಒಪ್ಪಂದದ ಪ್ರಕಾರ ಭಾರತವು ವಿದೇಶಗಳಿಗೆ 198 ಲಕ್ಷ ಡೋಸ್ ಕೋವಿಡ್ ಲಸಿಕೆ ರಫ್ತು ಮಾಡಿದೆ. ಇದಕ್ಕೆ ಪ್ರತಿಯಾಗಿ ಕೋವ್ಯಾಕ್ಸ್ ಮೂಲಕ 97 ದಶಲಕ್ಷ (9.7 ಕೋಟಿ) ಡೋಸ್‌ ಕೋವಿಡ್‌ ಲಸಿಕೆ ವಿದೇಶಗಳಿಂದ ಭಾರತಕ್ಕೆ ಬಂದಿದೆ’ ಎಂದು ಪೋಸ್ಟ್‌ಕಾರ್ಡ್ ಕನ್ನಡ ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟರ್‌ ಪ್ರಕಟಿಸಿದೆ.

ಕೋವ್ಯಾಕ್ಸ್‌ ಒಪ್ಪಂದದ ಅಡಿ 2021ರ ಏಪ್ರಿಲ್‌ 16ರ ಅಂತ್ಯಕ್ಕೆ ಭಾರತವು ವಿವಿಧ ದೇಶಗಳಿಗೆ 1.98 ಕೋಟಿ ಡೋಸ್‌ಗಳಷ್ಟು ಕೋವಿಶೀಲ್ಡ್ ಲಸಿಕೆಯನ್ನು ಪೂರೈಕೆ ಮಾಡಿದೆ. ಕೋವ್ಯಾಕ್ಸ್‌ ಒಪ್ಪಂದದಲ್ಲಿ ಆಸ್ಟ್ರಾಜೆನೆಕಾದ ಕೋವಿಶೀಲ್ಡ್ ಮತ್ತು ಫೈಝರ್- ಬಯೋಎನ್‌ಟೆಕ್‌ನ ಲಸಿಕೆಯನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಈ ಒಪ್ಪಂದದ ಅಡಿ ಭಾರತಕ್ಕೆ ಬೇರೆ ಯಾವ ದೇಶವೂ ಲಸಿಕೆಯನ್ನು ಪೂರೈಕೆ ಮಾಡಿಲ್ಲ. ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಕೋವ್ಯಾಕ್ಸ್‌ ಒಪ್ಪಂದದಲ್ಲಿ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಪೋಸ್ಟ್‌ಕಾರ್ಡ್ ಕನ್ನಡ ತನ್ನ ಫೇಸ್‌ಬುಕ್‌ ಪುಟದಲ್ಲಿ ಸುಳ್ಳು ಮಾಹಿತಿ ಹಂಚಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು