ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್: ಪಾಕ್ ಮುಸ್ಲಿಂ ಸ್ತ್ರೀಯರನ್ನು ಮದುವೆಯಾಗಬಾರದು ಎಂದಿದೆಯೇ ಸೌದಿ?

Last Updated 25 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್‌ನ ಮುಸ್ಲಿಂ ಮಹಿಳೆಯರನ್ನು ಮದುವೆಯಾಗಬಾರದು ಎಂದು ಸೌದಿ ಅರೇಬಿಯಾ ಸರ್ಕಾರ ಆದೇಶ ಹೊರಡಿಸಿದೆ. ಈ ದೇಶಗಳ 5 ಲಕ್ಷ ಮುಸ್ಲಿಂ ಮಹಿಳೆಯರು ಸೌದಿ ಅರೇಬಿಯಾದಲ್ಲಿ ಇದ್ದಾರೆ. ಅವರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹೀಗಾಗಿಯೇ ಸೌದಿ ಸರ್ಕಾರ ಈ ನಿಷೇಧ ಹೇರಿದೆ ಎಂದು ಪೋಸ್ಟ್‌ಕಾರ್ಡ್‌ ಕನ್ನಡ ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್‌ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಇಂತಹ ಪೋಸ್ಟ್‌ಗಳು ಸಾವಿರಾರು ಸಂಖ್ಯೆಯಲ್ಲಿ ಹಂಚಿಕೆಯಾಗಿವೆ.

ಇದು ಸುಳ್ಳು ಸುದ್ದಿ. 2014ರ ಸುದ್ದಿಯನ್ನು ಈಗಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ ಎಂದು ಆಲ್ಟ್‌ನ್ಯೂಸ್‌, ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಸೌದಿ ಅರೇಬಿಯಾದ ಸುದ್ದಿಪತ್ರಿಕೆ ಮಕ್ಕಾದಲ್ಲಿ ಇಂತಹ ವರದಿ ಪ್ರಕಟವಾಗಿತ್ತು. ಅದನ್ನು ಕೆಲವೇ ದಿನಗಳಲ್ಲಿ ಡಿಲೀಟ್ ಮಾಡಲಾಗಿತ್ತು. ಸೌದಿ ಅರೇಬಿಯಾದ ಕಾನೂನು ಸಚಿವಾಲಯದ ಜಾಲತಾಣದಲ್ಲೂ ವಿವಾಹ ನಿಷೇಧಕ್ಕೆ ಸಂಬಂಧಿಸಿದ ಯಾವುದೇ ಕಾನೂನು ಇಲ್ಲ ಎಂದು ಆಲ್ಟ್‌ ನ್ಯೂಸ್ ವಿವರಿಸಿದೆ. ಹಳೆಯ ಸುಳ್ಳು ಸುದ್ದಿಯನ್ನು ಈಗ ಹಂಚಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT