ಗುರುವಾರ , ಜೂನ್ 4, 2020
27 °C

ಫ್ಯಾಕ್ಟ್ ಚೆಕ್ | ಮೋದಿ ₹15 ಸಾವಿರ ನೀಡಲು ಲಿಂಕ್ ಕ್ಲಿಕ್, ಏನಿದು ಸತ್ಯಾಂಶ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Factcheck

ತಪ್ಪು: ಕೊರೊನಾ ವೈರಸ್ ದೇಶವನ್ನು ಬಾಧಿಸುತ್ತಿರುವ ಈ ಸಮಯದಲ್ಲಿ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ನಾಗರಿಕರಿಗೆ ತಲಾ ₹15 ಸಾವಿರ ಹಣ ನೀಡುತ್ತಿದ್ದಾರೆ. ಹಣ ಪಡೆಯಲು ಒಂದು ಮಾರ್ಗ ಇದೆ. ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಾರ್ಮ್‌ ಭರ್ತಿ ಮಾಡಬೇಕು ಎಂಬ ಸುದ್ದಿ ಇತ್ತೀಚೆಗೆ ಸದ್ದು ಮಾಡುತ್ತಿದೆ.  

ಆದರೆ, ಇದು ಸುಳ್ಳು ಸುದ್ದಿ ಎಂದು ಪಿಐಬಿಯ ಫ್ಯಾಕ್ಟ್ ಚೆಕ್ ಟ್ವಿಟರ್‌ ಹ್ಯಾಂಡಲ್ ಸ್ಪಷ್ಟಪಡಿಸಿದೆ. ಆನ್‌ಲೈನ್ ಲಿಂಕ್ ಮೇಲೆ ಯಾರೊಬ್ಬರೂ ಕ್ಲಿಕ್ ಮಾಡಿ ಮೋಸ ಹೋಗಬಾರದು ಎಂದು ಎಚ್ಚರಿಸಲಾಗಿದೆ. ಇದೊಂದು ವಂಚನೆಯ ಜಾಲ ಎಂದು ಸ್ಪಷ್ಟಪಡಿಸಲಾಗಿದೆ. 

 ತಪ್ಪು: ಲಾಕ್‌ಡೌನ್‌ನಿಂದಾಗಿ ದಿನಗೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದವರ ಜೀವನೋಪಾಯ ಕಷ್ಟದಲ್ಲಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ (ಪಿಎಂಜಿಕೆವೈ) ಫಲಾನುಭವಿಗಳಿಗೆ ಸರ್ಕಾರವು ₹500 ಹಣ ಸಂದಾಯ ಮಾಡಿದೆ. ಆದರೆ, ಫಲಾನುಭವಿಗಳು ತಮ್ಮ ಖಾತೆಗೆ ಸಂದಾಯವಾಗಿರುವ ಹಣವನ್ನು ನಿಗದಿತ ಸಮಯದೊಳಗೆ ಡ್ರಾ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರ ಹಣ ಹಿಂಪಡೆಯಲಿದೆ ಎಂಬ ವದಂತಿ ಹರಿದಾಡುತ್ತಿದೆ. 

ಸರ್ಕಾರ ಇದನ್ನು ಅ‌ಲ್ಲಗಳೆದಿದೆ. ಇದು ಸುಳ್ಳು ಎಂಬುದನ್ನು ಪಿಐಬಿಯ ಫ್ಯಾಕ್ಟ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ. ಒಮ್ಮೆ ಸಂದಾಯ ಮಾಡಿರುವ ಹಣವನ್ನು ಸರ್ಕಾರ ಹಿಂತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದೆ.  

 ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು