ಗುರುವಾರ , ಅಕ್ಟೋಬರ್ 1, 2020
22 °C

‘ರೈಲ್ವೆ ಇಲಾಖೆಯು ನೇಮಕಾತಿ ಪ್ರಕ್ರಿಯೆಯನ್ನು ಹೊರಗುತ್ತಿಗೆ ನೀಡಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ 5,285 ಹುದ್ದೆಗಳಿಗೆ ಅವೆಸ್ಟ್ರಾನ್‌ ಇನ್‌ಫೊಟೆಕ್‌ ಸಂಸ್ಥೆಯ ಮೂಲಕ ನೇಮಕಾತಿ ಮಾಡಲಾಗುತ್ತಿದೆ. ಆನ್‌ಲೈನ್‌ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಸಂದರ್ಶನದ ನಂತರವೇ ನೇಮಕಾತಿ ಮಾಡಲಾಗುವುದು’ ಎಂಬ ಮಾಹಿತಿ ಇರುವ ಪತ್ರಿಕೆಯೊಂದರಲ್ಲಿ ಪ್ರಕಟವಾದ ಜಾಹೀರಾತಿನ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಉದ್ಯೋಗಕ್ಕೆ ಅರ್ಹತೆ ಮತ್ತಿತರ ವಿವರಗಳನ್ನು ಸಹ ಈ ಜಾಹೀರಾತಿನಲ್ಲಿ ಪ್ರಕಟಿಸಲಾಗಿದೆ.

***

ಆದರೆ, ರೈಲ್ವೆ ಇಲಾಖೆಯು ಈ ಜಾಹೀರಾತನ್ನು ನಿರಾಕರಿಸಿದೆ. ‘ಇಲಾಖೆಯು ನೇಮಕಾತಿ ಪ್ರಕ್ರಿಯೆಯನ್ನು ಹೊರಗುತ್ತಿಗೆ ನೀಡಿಲ್ಲ. ಜಾಹೀರಾತಿನಲ್ಲಿ ವಿವರಿಸಿರುವ ಅರ್ಹತೆಗಳಿಗೂ, ಇಲಾಖೆ ನಿಗದಿಮಾಡಿರುವ ಅರ್ಹತೆಗಳಿಗೂ ವ್ಯತ್ಯಾಸವಿದೆ. ಇಲಾಖೆಯು ಯಾವ ಹುದ್ದೆಯಲ್ಲೂ ಲಿಂಗತಾರತಮ್ಯ ಮಾಡುವುದಿಲ್ಲ’ ಎಂದು ರೈಲ್ವೆ ಇಲಾಖೆಯು ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು