ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತದಲ್ಲಿ ಬಿಜೆಪಿ-ಟಿಎಂಸಿ ಕಚ್ಚಾಟ: ಬಿಜೆಪಿ ಆರೋಪಗಳ ಸತ್ಯಾಸತ್ಯತೆ ಏನು?

Last Updated 16 ಮೇ 2019, 12:55 IST
ಅಕ್ಷರ ಗಾತ್ರ

ಬೆಂಗಳೂರು: ಮೇ 14ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್‌ ಶೋ ನಡೆಯುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಟಿಎಂಸಿಯ ವಿದ್ಯಾರ್ಥಿ ಘಟಕವಾಗಿರುವ ‘ತೃಣಮೂಲ ಕಾಂಗ್ರೆಸ್‌ ವಿದ್ಯಾರ್ಥಿ ಪರಿಷತ್‌’ (ಟಿಎಂಸಿಪಿ) ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಅಮಿತ್‌ ಶಾ ಅವರ ಬೆಂಗಾವಲು ಪಡೆಯ ವಾಹನವೊಂದರ ಮೇಲೆ ಕಲ್ಲು ತೂರಾಟ ನಡೆದದ್ದು ಗಲಭೆಯ ಮೂಲ. ಶಾ ಅವರ ರೋಡ್‌ ಶೊ ಕಲ್ಕತ್ತ ವಿಶ್ವವಿದ್ಯಾಲಯದ ಸಮೀಪ ಹಾದು ಹೋಗುತ್ತಿದ್ದಾಗ ಟಿಎಂಸಿ ಹಾಗೂ ಎಡಪಂಥೀಯ ಸಂಘಟನೆಗಳ ಕಾರ್ಯಕರ್ತರು ಶಾ ವಿರುದ್ಧ ಘೋಷಣೆ ಕೂಗಿ, ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದರು.

ಈ ಘಟನೆ ಬಗ್ಗೆ ಮೇ 15ರಂದು ಟ್ವೀಟಿಸಿದ್ದ ಬಿಜೆಪಿ ಐಟಿ ಸೆಲ್ ಉಸ್ತುವಾರಿ ವಹಿಸಿರುವ ಅಮಿತ್ ಮಾಳವಿಯಾ ಈ ಗಲಭೆ ಶುರು ಮಾಡಿದ್ದು ವಿದ್ಯಾಸಾಗರ್ ಕಾಲೇಜಿನ ವಿದ್ಯಾರ್ಥಿಗಳೇ ಎಂದು ಕಾಲೇಜು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ ಎಂಬ ಪೋಸ್ಟೊಂದನ್ನು ಶೇರ್ ಮಾಡಿದ್ದಾರೆ.ಈಶ್ವರ ಚಂದ್ರ ವಿದ್ಯಾಸಾಗರ್ ಕಾಲೇಜಿನಲ್ಲಿ ಟಿಎಂಸಿ ನಡೆಸಿದ ದಾಂಧಲೆ, ಕಾಲೇಜು ಒಳಗಡೆಯೇ ರಾಜಕೀಯ ಎಂದಿದ್ದರು ಮಾಳವಿಯಾ.

ಮಾಳವಿಯಾ ಶೇರ್ ಮಾಡಿರುವ ಪೋಸ್ಟ್ ಬೃಜ್ ನಾರಾಯಣ ರಾಯ್ ಅವರದ್ದು. ಈ ಪೋಸ್ಟ್‌ನಲ್ಲಿ ಹೇಳುವಂತೆ ಹಿಂಸಾಚಾರ ಆರಂಭಿಸಿದ್ದು ಟಿಎಂಸಿಪಿ,ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ. ರ‍್ಯಾಲಿ ವೇಳೆ ಕ್ಯಾಂಪಸ್ ಒಳಗಿನಿಂದ ಇಟ್ಟಿಗೆ ತೂರಲಾಗಿತ್ತು. ಟಿಎಂಸಿಪಿ ಸದಸ್ಯರು ಮೋಟಾರ್ ಸೈಕಲ್‌ಗೆ ಬೆಂಕಿ ಹಚ್ಚಿ, ಈಶ್ವರ ಚಂದ್ರ ವಿದ್ಯಾಸಾಗರ್ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ.ಈಶ್ವರಚಂದ್ರ ವಿದ್ಯಾಸಾಗರ್ ಅವರ ಪುತ್ಥಳಿ ಕ್ಯಾಂಪಸ್ ಒಳಗಿರುವುದರಿಂದ ಬಿಜೆಪಿ ಕಾರ್ಯಕರ್ತರು ಈ ಕೃತ್ಯವೆಸಗಲು ಸಾಧ್ಯವಿಲ್ಲ. ಇಲ್ಲಿಗೆ ಬರಲು ಎರಡು ಗೇಟ್‌ಗಳನ್ನು ದಾಟಿ ಹೋಗಬೇಕು- ಒಂದು ಕಬ್ಬಿಣದ ಗೇಟ್, ಇನ್ನೊಂದು ಮರದ ಬಾಗಿಲು.ಪುತ್ಥಳಿ ಇರುವುದು ಕಾಲೇಜಿನ ಆವರಣದೊಳಗೆ. ಅಲ್ಲಿ ಟಿಎಂಸಿಪಿಸದಸ್ಯರುಕ್ಯಾಂಪಸ್ ಒಳಗೆ ಇಟ್ಟಿಗೆ ಹಿಡಿದು ನಿಂತಿದ್ದರು ಎಂದಿದೆ.

ಇದೇ ಪೋಸ್ಟ್‌ನ್ನು ಸ್ವಪನ್ ದಾಸ್ ಗುಪ್ತ ಮತ್ತು ವಿಕಾಸ್ ಪಾಂಡೆ ಶೇರ್ ಮಾಡಿದ್ದರು.

ವೈರಲ್ ಆದ ಪೋಸ್ಟ್

ಬೃಜ್ ನಾರಾಯಣ್ ರಾಯ್ ಅವರ ಈ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿತ್ತು.ಆದರೆ ಈಗ ಅವರ ಖಾತೆ ಚಾಲ್ತಿಯಲ್ಲಿಲ್ಲ.ಬೃಜ್ ನಾರಾಯಣ್ ರಾಯ್ ಅವರು ವಿದ್ಯಾಸಾಗರ ಕಾಲೇಜನ ವಿದ್ಯಾರ್ಥಿಯಾಗಿದ್ದುಈ ಪ್ರಕರಣದ ಬಗ್ಗೆಪ್ರತಿಕ್ರಿಯಿಸಿದ ಮೊದಲ ವ್ಯಕ್ತಿ ಎಂಬ ಒಕ್ಕಣೆಯೊಂದಿಗೆ ಈ ಫೇಸ್‌ಬುಕ್ ಪೋಸ್ಟ್‌ನ್ನು ಹಲವಾರು ಮಂದಿ ಶೇರ್ ಮಾಡಿದ್ದಾರೆ.

ಬಿಜೆಪಿ ನೇತಾರರು, ಬೆಂಬಲಿಗರು ಶೇರ್ ಮಾಡುತ್ತಿರುವ ಈ ಪೋಸ್ಟ್ ಜತೆಗೆ ಕೊಲ್ಕತ್ತದಲ್ಲಿನ ಹಿಂಸಾಚಾರ ಪ್ರಕರಣದ ಬಗ್ಗೆ ಬಿಜೆಪಿ ಹಲವುಆರೋಪಗಳನ್ನು ಮಾಡುತ್ತಿದೆ. ಈ ಆರೋಪಗಳು ಏನು ಮತ್ತು ಅದರ ಸತ್ಯಾಸತ್ಯತೆಬಗ್ಗೆ ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ.

ಫ್ಯಾಕ್ಟ್‌ ಚೆಕ್
ಬಿಜೆಪಿ ಆರೋಪ 1: ಕಾಲೇಜ್ ಕ್ಯಾಂಪಸ್ ಒಳಗಿನಿಂದ ಮೊದಲು ಇಟ್ಟಿಗೆ ಬಿಸಾಡಲಾಗಿತ್ತು.

ಕಾಲೇಜು ಒಳಗಿನಿಂದ ಮೊದಲು ಇಟ್ಟಿಗೆ ಬಿಸಾಡಲಾಗಿತ್ತು ಎಂಬುದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಸಾಕ್ಷ್ಯವಿಲ್ಲ. ಕೋಲ್ಕತ್ತದ ಸ್ಥಳೀಯ ಸುದ್ದಿ ಸಂಸ್ಥೆ ಆನಂದ್ಬಜಾರ್ ಮಾಡಿದ ಗ್ರೌಂಡ್ ರಿಪೋರ್ಟ್ ಪ್ರಕಾರ ರಸ್ತೆಯಲ್ಲಿ ನಮೋ ಎಗೇನ್ ಎಂಬ ಕೇಸರಿ ಬಣ್ಣದ ಟಿಶರ್ಟ್ ಧರಿಸಿದವರು ಕ್ಯಾಂಪಸ್ ಒಳಗೆ ಕಲ್ಲು ತೂರುತ್ತಿದ್ದಾರೆ.

ಮೇಲಿರುವವಿಡಿಯೊ ಗಮನಿಸಿ. ಇಲ್ಲಿ ಹೊರಗಿರುವವರು ಕ್ಯಾಂಪಸ್ ಒಳಗಡೆ ಕಲ್ಲು ತೂರಾಟ ನಡೆಸುತ್ತಿದ್ದಾರೆಯೇ ವಿನಾ ಕ್ಯಾಂಪಸ್ ಒಳಗಿನಿಂದ ಯಾರೂ ಕಲ್ಲು ತೂರಾಟ ಮಾಡುತ್ತಿಲ್ಲ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿಡಿಯೊ ತುಣುಕೊಂದನ್ನು ಶೇರ್ ಮಾಡಿದ್ದು, ಟಿಎಂಸಿ ಹಿಂಸಾಚಾರ ಶುರು ಮಾಡಿತ್ತು ಎಂದು ಆರೋಪಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ಟಿಎಂಸಿ ಹಿಂಸಾಚಾರ ನಡೆಸುತ್ತಿರುವ ವಿಡಿಯೊ ಎಂದು ಮಾಳವಿಯಾ ಈ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಆದರೆ ವಿಡಿಯೊ ವೀಕ್ಷಿಸಿದರೆ ಇದರಲ್ಲಿ ಮಾಳವಿಯಾ ಹೇಳಿದ್ದಂತದ್ದೇನೂ ಇಲ್ಲ.

ಈ ವಿಡಿಯೊದಲ್ಲಿ ಬ್ಯಾರಿಕೇಡ್ ನೂಕುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ದೂರ ಸರಿಸುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ. ಈ ವಿಡಿಯೊದಲ್ಲಿ ಆ ಕಡೆ ಇರುವವರು ಟಿಎಂಸಿ ಕಾರ್ಯಕರ್ತರು ಅಂದಿದ್ದಾರೆ ಮಾಳವಿಯ. ಆದರೆ ಆ ಜನರ ಗುಂಪು ಘೋಷಣೆ ಕೂಗುತ್ತಾ ಕಪ್ಪು ಬಾವುಟ ತೋರಿಸುತ್ತಿರುವುದು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಬಾಟಲಿ ಎತ್ತಿ ಕ್ಯಾಮೆರಾಕ್ಕೆ ತೋರಿಸುತ್ತಿದ್ದಾರಲ್ಲಾ ಆ ವ್ಯಕ್ತಿ ಈ ಬಾಟಲಿ ಬಿಜೆಪಿಯವರು ಎಸೆದಿದ್ದು ಅಂತಿದ್ದಾರೆ.

ಬಿಜೆಪಿ ಆರೋಪ 2: ಟಿಎಂಸಿಪಿ ಬೈಕ್‌ಗೆ ಬೆಂಕಿ ಹಚ್ಚಿದೆ

ಟಿಎಂಸಿಪಿ ಸದಸ್ಯರುಬೈಕ್‍ಗೆ ಬೆಂಕಿ ಹಚ್ಚಿದ್ದಾರೆ ಎಂದು ಬಿಜೆಪಿ ನಾಯಕರು ಶೇರ್ ಮಾಡಿದ ಪೋಸ್ಟ್‌ನಲ್ಲಿದೆ. ಆದರೆ ವಿಡಿಯೊದಲ್ಲಿ ಕೇಸರಿ ಟಿಶರ್ಟ್ ತೊಟ್ಟ ಯುವಕರು ಬೈಕ್‌ಗೆ ಬೆಂಕಿ ಹಚ್ಚುತ್ತಿರುವುದು ಕಾಣಿಸುತ್ತಿದೆ. ಅದು ಕ್ಯಾಂಪಸ್‌ನ ಹೊರಗೆ ನಡೆಯುತ್ತಿರುವ ದೃಶ್ಯ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಇದೇ ವಿಡಿಯೊದ ದೃಶ್ಯವನ್ನು ಮತ್ತಷ್ಟು ಸೂಕ್ಷ್ಮವಾಗಿ ನೋಡಿದರೆ ಬೈಕ್‌ಗೆ ಬೆಂಕಿ ಹಚ್ಚಿರುವುದು ಕಾಲೇಜ್ ಗೇಟ್‌ನ ಹೊರಗೆ ಎಂಬುದು ಗೊತ್ತಾಗುತ್ತದೆ.ಅಲ್ಲಿ ಬೆಂಕಿ ಉರಿಯುವಾಗ ಸುತ್ತಲೂ ಬಿಜೆಪಿ ಬೆಂಬಲಿಗರು ನಿಂತಿರುವುದು ಕಾಣಬಹುದು. ಇವರೆಲ್ಲರೂ ಕೇಸರಿ ಟಿಶರ್ಟ್ ಧರಿಸಿ ಪಕ್ಷದ ಬಾವುಟ ಬೀಸುತ್ತಿರುವುದು ಇಲ್ಲಿ ಕಾಣುತ್ತದೆ.

ಬಿಜೆಪಿ ಆರೋಪ 3: ಬಿಜೆಪಿ ಕಾರ್ಯಕರ್ತರು ಕ್ಯಾಂಪಸ್ ಒಳಗೆ ಪ್ರವೇಶಿಸಿಲ್ಲ, ಯಾಕೆಂದರೆ ಅದಕ್ಕೆ ಬೀಗ ಹಾಕಲಾಗಿತ್ತು

ಅಮಿತ್ ಶಾ ತಮ್ಮ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ''ವಿದ್ಯಾಸಾಗರ್ ಅವರ ಪುತ್ಥಳಿಯನ್ನು ಗಾಜಿನಿಂದ ಮಾಡಿದ ಚೇಂಬರ್ಒಳಗಿಡಲಾಗಿದೆ. ಇದು ಲಾಕ್ ಆಗಿರುವ ಕೋಣೆಯೊಳಗಿದೆ. ಇದು ಸಾರ್ವಜನಿಕರಿಗೆ ಕಾಣುವಂತಿಲ್ಲ. ಪುತ್ಥಳಿ ಧ್ವಂಸ ಪ್ರಕರಣ ನಡೆದದ್ದು ಸಂಜೆ7.30ಕ್ಕೆ. ಆಗ ಕಾಲೇಜ್ ಬಂದ್ ಆಗಿಗೇಟ್‌ಗೆ ಬೀಗ ಹಾಕಲಾಗಿತ್ತು. ಹಾಗಾದರೆ ಆ ಕೋಣೆಯ ಬೀಗ ತೆಗೆದವರು ಯಾರು? ಕೋಣೆಯ ಕೀಲಿಕೈ ಯಾರ ಬಳಿ ಇದೆ. ಈ ಕಾಲೇಜಿನ ಆಡಳಿತಾಧಿಕಾರಿಗಳು ಯಾರು?.ಅದು ಟಿಎಂಸಿ. ಕೋಣೆಯೊಳಗೆ ಪುತ್ಥಳಿ ಇರುವಾಗ ಕೋಣೆಯ ಕೀ ಕೊಟ್ಟವರು ಯಾರು ಎಂಬುದು ಬಂಗಾಳದ ಜನರಿಗೆ ಗೊತ್ತಿದೆ.ಆ ಕೋಣೆಯ ಬೀಗ ಮುರಿದಿಲ್ಲ.ಬಿಜೆಪಿಕಾರ್ಯಕರ್ತರು ರಸ್ತೆಯಲ್ಲಿದ್ದರು. ಹೀಗಿರುವಾಗ ಅವರಿಗೆ ಕೋಣೆಯ ಕೀ ಸಿಕ್ಕಿದ್ದಾದರೂ ಹೇಗೆ? ಇದನ್ನೆಲ್ಲ ನೋಡಿದರೆ ವಿದ್ಯಾಸಾಗರ್ ಅವರ ಪುತ್ಥಳಿಯನ್ನು ಧ್ವಂಸ ಮಾಡಿದ್ದು ಟಿಎಂಸಿ ಗೂಂಡಾಗಳೇ ಎಂದು ಸ್ಪಷ್ಟ''

ಬಿಜೆಪಿ ಬೆಂಬಲಿಗರು ಕಾಲೇಜು ಕ್ಯಾಂಪಸ್ ಒಳಗೆ ಹೋಗಲು ಪ್ರಯತ್ನಿಸುತ್ತಿರುವ ದೃಶ್ಯಗಳನ್ನು ಕಾಣಬಹುದು. ಈ ವಿಡಿಯೊದಲ್ಲಿ ನಮೋ ಎಗೇನ್ ಟಿ ಶರ್ಟ್ ಧರಿಸಿದ ಯುವಕನೊಬ್ಬ ಕಾಲೇಜು ಗೇಟ್ ಬೀಗ ಒಡೆಯಲು ಯತ್ನಿಸುತ್ತಿರುವುದು ಕಾಣುತ್ತದೆ.

ಈ ವಿಡಿಯೊ ನೋಡಿ, ಇಲ್ಲಿ ಹಲವಾರು ಬಿಜೆಪಿ ಬೆಂಬಲಿಗರು/ಕಾರ್ಯಕರ್ತರು ಕಾಲೇಜು ಗೇಟ್ ಮುಂದೆ ಜಮಾಯಿಸಿರುವುದು ಕಾಣಬಹುದು.ಇದರಲ್ಲಿ ಹಲವಾರು ಮಂದಿ ಗೇಟ್‌ನ ಲಾಕ್ ಒಡೆಯಲು ಯತ್ನಿಸುತ್ತಿದ್ದಾರೆ. ಈ ವಿಡಿಯೊ ಮಾಡಿದ ವ್ಯಕ್ತಿ ಬಂಗಾಳಿ ಭಾಷೆಯಲ್ಲಿ'ಅವರು ಒಳಹೊಕ್ಕು, ವಸ್ತುಗಳನ್ನು ಒಡೆಯುತ್ತಿದ್ದಾರೆ'ಎಂದು ಹೇಳುತ್ತಿರುವುದು ಕೇಳಿಸುತ್ತದೆ.

ಕ್ಯಾಂಪಸ್ ಗೇಟ್‌ಗೆ ಬೀಗ ಹಾಕಿದ್ದರಿಂದ ಬಿಜೆಪಿ ಕಾರ್ಯಕರ್ತರು ಒಳಗೆ ಹೋಗಲಿಲ್ಲ ಅಂದಿದ್ದಾರೆಅಮಿತ್ ಶಾ. ಆದರೆ ಬಿಜೆಪಿ ಕಾರ್ಯಕರ್ತರು ಬೀಗಗಳನ್ನು ಒಡೆದು ಕ್ಯಾಂಪಸ್ ಒಳಗೆ ನುಗ್ಗಿದ್ದರು ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿದೆ.

ಬಿಜೆಪಿ ಆರೋಪ 4:ಕ್ಯಾಂಪಸ್ ಒಳಗಡೆಯಿದ್ದ ವಿದ್ಯಾಸಾಗರ್ ಪುತ್ಥಳಿಯನ್ನು ಧ್ವಂಸ ಮಾಡಿದ್ದು ಬಿಜೆಪಿ ಕಾರ್ಯಕರ್ತರಲ್ಲ.

ವಿದ್ಯಾಸಾಗರ್ ಕಾಲೇಜಿನ ಪೂರ್ವ ವಿದ್ಯಾರ್ಥಿಗಳ ಜತೆ ಆಲ್ಟ್ ನ್ಯೂಸ್ ಮಾತನಾಡಿದ್ದು, ಇಲ್ಲಿ ತಿಳಿದು ಬಂದ ವಿಷಯ ಏನೆಂದರೆ ವಿದ್ಯಾಸಾಗರ್ ಕಾಲೇಜಿನಲ್ಲಿ ವಿದ್ಯಾಸಾಗರ್ ಅವರ ಎರಡು ಪುತ್ಥಳಿಗಳಿವೆ.

ಹಿಂಸಾಚಾರದ ವೇಳೆ ಧ್ವಂಸವಾಗಿದ್ದು ಕಾಲೇಜಿನ ಮುಖ್ಯ ಕಟ್ಟಡದ ಗೇಟ್ ಬಳಿ ಇದ್ದ ವಿದ್ಯಾಸಾಗರ್ ಪುತ್ಥಳಿ.ಪುತ್ಥಳಿಯತ್ತ ಹೋಗಲು ಕಬ್ಬಿಣದ ಗೇಟ್ ಮತ್ತು ಮರದ ಬಾಗಿಲು ದಾಟಬೇಕು ಎಂಬುದು ಸತ್ಯ. ಕಬ್ಬಿಣದ ಗೇಟ್ ಪ್ರಧಾನ ಗೇಟ್ ಆಗಿದ್ದು, ಪುತ್ಥಳಿ ಹತ್ತಿರ ಹೋಗಲು ಮರದ ಬಾಗಿಲು ತೆರೆಯಬೇಕು. ಇಲ್ಲಿರುವ ಚಿತ್ರಗಳನ್ನು ನೋಡಿದರೆ ಕಬ್ಬಿಣದ ಗೇಟ್‌ಗೂ ಮರದ ಬಾಗಿಲಿಗೂ ಅಷ್ಟೇನೂ ಅಂತರವಿಲ್ಲ.

ಕೃಪೆ: ಆಲ್ಟ್ ನ್ಯೂಸ್
ಕೃಪೆ: ಆಲ್ಟ್ ನ್ಯೂಸ್

ಮೇಲಿನ ವಿಡಿಯೊದಲ್ಲಿ ಬಿಜೆಪಿ ಕಾರ್ಯಕರ್ತರು ಗೇಟ್ ಬೀಗ ಒಡೆಯುವುದನ್ನು ನೋಡಿದ್ದೇವೆ. ಗೇಟ್ದಾಟಿ ಕಾರ್ಯಕರ್ತರು ಹೋಗಲಿಲ್ಲ.ಯಾಕೆಂದರೆ ಅದಕ್ಕೆ ಬೀಗ ಹಾಕಿತ್ತು ಅಂತಿದ್ದಾರೆ ಬಿಜೆಪಿ ನಾಯಕರು. ಆದರೆ ಇಲ್ಲಿರುವ ಗೇಟ್ ಬೀಗ ಮುರಿದರೆ ಸುಲಭವಾಗಿ ಒಳಗೆ ನುಗ್ಗಬಹುದು.ಮುರಿಯಲು ಸಾಧ್ಯವೇ ಇಲ್ಲದ ಗಟ್ಟಿಯಾದಬೀಗ ಅಲ್ಲ ಇದು!

ಅಮಿತ್ ಶಾ ಹೇಳಿದ್ದು: ಕ್ಯಾಂಪಸ್ ಒಳಗಡೆ ಪುತ್ಥಳಿ ಇದೆ. ಇದು ಬೀಗ ಹಾಕಿದ ಕೋಣೆಯೊಳಗೆ ಇರುವುದು.ಹೀಗಿರುವಾಗ ಬಿಜೆಪಿ ಕಾರ್ಯಕರ್ತರು ಪುತ್ಥಳಿ ಧ್ವಂಸ ಮಾಡಿದ್ದು ಹೇಗೇ?

ಈ ವಿಡಿಯೊದಲ್ಲಿ ಕೇಸರಿ ಟಿಶರ್ಟ್ ತೊಟ್ಟ ಹಲವು ಮಂದಿ ಗೇಟ್ ಬೀಗ ಮುರಿದು ಒಳಗೆ ಹೋಗಿ ಮರದ ಬಾಗಿಲು ತೆರೆಯುತ್ತಿದ್ದಾರೆ.ಆ ಕೋಣೆಯ ಒಳಗೆ ನುದ್ದಿ ಕೋಣೆಯ ಒಳಗಿನಿಂದ ಬಿಳಿ ಬಣ್ಣದವಿಗ್ರಹವನ್ನು ಹೊರತರುತ್ತಿರುವುದು ಕಾಣುತ್ತದೆ.ವಿಡಿಯೊದ 0.13ನೇ ಸೆಕೆಂಡ್‌ನಲ್ಲಿ ಬಿಳಿ ಬಣ್ಣದ ವಸ್ತು ಕಾಣಿಸುತ್ತದೆ.ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ವಸ್ತು ಎಂಬಂತೆ ಅದು ಗೋಚರಿಸುತ್ತದೆ. ವಿಡಿಯೊದ 0.21 ನೇ ಸೆಕೆಂಡ್‌ನಲ್ಲಿ ಅದೇ ಬಿಳಿ ಬಣ್ಣದ ವಸ್ತುವನ್ನು ಹೊರಗೆ ಬಿಸಾಡುವುದು ಕಾಣುತ್ತದೆ. ವಿಡಿಯೊದಲ್ಲಿ 0.28ರಿಂದ 0.41ನಿಮಿಷದ ವರೆಗೆ ಆ ವಸ್ತುವನ್ನುಯಾರೂ ಮುಟ್ಟಿಲ್ಲ.0.42ನೇ ಸೆಕೆಂಡ್‌ನಲ್ಲಿ ವ್ಯಕ್ತಿಯೊಬ್ಬರು ಬಂದು ಆ ವಸ್ತುವನ್ನು ಒಡೆದು ಹಾಕುತ್ತಾರೆ. ಈ ವಿಡಿಯೊ ದೃಶ್ಯದಲ್ಲಿ ಕೇಸರಿ ಬಣ್ಣದ ಬಟ್ಟೆ ತೊಟ್ಟಿರುವ ಇಬ್ಬರು ವ್ಯಕ್ತಿಗಳನ್ನು ಕಾಣಬಹುದು.

ಇಡೀ ಪ್ರಕರಣದ ವಿಡಿಯೊ ಇಲ್ಲಿದೆ. ಈ ವಿಡಿಯೊದಲ್ಲಿ ಕೇಸರಿ ಬಟ್ಟೆ ತೊಟ್ಟ ವ್ಯಕ್ತಿ ಕಬ್ಬಿಣದ ಗೇಟ್ ಮುರಿದು ಒಳಗೆ ನುಗ್ಗುತ್ತಾನೆ.3.00 ನಿಮಿಷದಲ್ಲಿ ಅವರು ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ ಎಂದು ವಿಡಿಯೊ ರೆಕಾರ್ಡ್ ಮಾಡಿದ ವ್ಯಕ್ತಿಯ ದನಿ ಕೇಳಿಸುತ್ತದೆ. ಇದು ಮರದ ಬಾಗಿಲು ಮುರಿದಾಗ ಹೇಳಿದ ದನಿ.4.00ನೇ ನಿಮಿಷದಲ್ಲಿ ಈ ಗುಂಪು ವಿದ್ಯಾಸಾಗರ್ ಅವರ ಪುತ್ಥಳಿ ಧ್ವಂಸ ಮಾಡುತ್ತಿರುವುದು ಕಾಣಿಸುತ್ತದೆ.7.33 ನಿಮಿಷದ ನಂತರ ಮೋಟಾರ್ ಸೈಕಲ್‌ಗೆ ಬೆಂಕಿ ಹಚ್ಚುತ್ತಿರುವ ದೃಶ್ಯವಿದೆ.

ಗಾಜಿನ ಚೇಂಬರ್ ಒಳಗೆಇಟ್ಟಿದ್ದ ವಿದ್ಯಾಸಾಗರ್ ಅವರ ಪುತ್ಥಳಿ ಧ್ವಂಸವಾಗಿರುವ ಚಿತ್ರವನ್ನು ದಿ ಟೆಲಿಗ್ರಾಫ್ ಪತ್ರಿಕೆ ಪ್ರಕಟಿಸಿದೆ. ಟೆಲಿಗ್ರಾಫ್ ಪತ್ರಿಕೆ ಪ್ರಕಾರ, ಮಂಗಳವಾರ ಸಂಜೆ 6.50 ಮತ್ತು 7.05ರ ನಡುವೆ ಈ ದಾಂಧಲೆ ನಡೆದಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಗೌತಂ ಕುಂಡು ಹೇಳಿದ್ದಾರೆ. ಜನರ ಗುಂಪೊಂದು ಗೇಟ್ ಬೀಗ ಮುರಿದು ಕೋಣೆಯೊಳಗೆ ನುಗ್ಗಿಪುತ್ಥಳಿಬಳಿ ಹೇಗೆ ಹೋಗಿತ್ತು ಎಂಬುದನ್ನು ಕುಂಡು ವಿವರಿಸಿದ್ದಾರೆ.

ಮಾಳವಿಯಾ ಟ್ವೀಟ್
ಟೆಲಿಗ್ರಾಫ್ ವರದಿ ಪ್ರಕಾರ ವಿದ್ಯಾಸಾಗರ್ ಪುತ್ಥಳಿಯನ್ನು ಗಾಜಿನ ಚೇಂಬರ್‌ ಒಳಗೆ ಇರಿಸಲಾಗಿದೆ. ಮಮತಾ ಬ್ಯಾನರ್ಜಿಯವರು ಕಾಲೇಜು ಕ್ಯಾಂಪಸ್‌ಗೆ ಭೇಟಿ ನೀಡಿ ಧ್ವಂಸಗೊಂಡ ಪುತ್ಥಳಿಯನ್ನು ನೋಡಿದ್ದಾರೆ.ಇಲ್ಲಿ ಪುತ್ಥಳಿಯನ್ನು ಸರಿಯಾಗಿ ಜೋಡಿಸಿಡಲಾಗಿದೆ. ಈಕೆ ಧ್ವಂಸವಾದ ಜಾಗಕ್ಕೆ ಯಾಕೆ ಹೋಗಿಲ್ಲ?

ಸತ್ಯ ಸಂಗತಿ: ಮಮತಾ ಭೇಟಿ ನೀಡಿದ್ದುಪುತ್ಥಳಿ ಧ್ವಂಸವಾದ ಜಾಗಕ್ಕೆ. ಕೋಣೆಯೊಳಗೆ ಗಾಜಿನ ಚೇಂಬರ್‌ನಲ್ಲಿದ್ದ ಪುತ್ಥಳಿಯನ್ನು ಹೊರಗೆಸೆದು ಧ್ವಂಸ ಮಾಡಲಾಗಿತ್ತು. ಗಾಜಿನ ಚೇಂಬರ್ ಮತ್ತು ಪುತ್ಥಳಿ ಎರಡನ್ನೂ ಇಲ್ಲಿ ಒಡೆಯಲಾಗಿದೆ.ಧ್ವಂಸವಾದ ಪುತ್ಥಳಿಯ ತುಂಡನ್ನೇ ಮಮತಾ ವೀಕ್ಷಿಸುತ್ತಿದ್ದಾರೆ.

ಪುತ್ಥಳಿ ಧ್ವಂಸ ಮಾಡಿದ್ದು ಟಿಎಂಸಿಪಿ
ವಿವಿಧ ವಿಡಿಯೊ ದೃಶ್ಯಗಳನ್ನು ನೋಡಿದರೆ ಅದರಲ್ಲಿ ಕೇಸರಿ ಟಿ ಶರ್ಟ್ ಧರಿಸಿದ ವ್ಯಕ್ತಿಗಳೇ ಕಾಣುತ್ತಿದ್ದಾರೆ. ಕ್ಯಾಂಪಸ್ ಒಳಗೆ ನುಗ್ಗಿದವರೂ ಇದೇ ರೀತಿಯ ಬಟ್ಟೆ ಧರಿಸಿದ್ದರು.ವಿದ್ಯಾಸಾಗರ್ ಅವರ ಪುತ್ಥಳಿಯನ್ನುಟಿಎಂಸಿಪಿ ಧ್ವಂಸ ಮಾಡಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ವಿಡಿಯೊದಲ್ಲಿಲ್ಲ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT