ಬುಧವಾರ, ಮಾರ್ಚ್ 29, 2023
33 °C

Fact Check: ಇಂದಿರಾ ಗಾಂಧಿ ಬುರ್ಖಾ, ಹಿಜಾಬ್‌ ಧರಿಸುತ್ತಿದ್ದರೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋನಿಯಾ ಗಾಂಧಿ ಅವರು ಮಗುವೊಂದನ್ನು ಎತ್ತಿಕೊಂಡಿದ್ದಾರೆ. ‘ನೋಡಿ, ಇಂದಿರಾ ಖಾನ್‌ ಅವರು ಬುರ್ಖಾ ಮತ್ತು ಹಿಜಾಬ್‌ ಧರಿಸಿದ್ದಾರೆ. ರಾಹುಲ್‌ ಖಾನ್‌ ಟೊಪ್ಪಿ ಹಾಕಿದ್ದಾನೆ. ಅವರು ಹಿಂದೂಗಳನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ’ ಎಂದು ಚಿತ್ರದ ಜತೆಗೆ ವಿವರವನ್ನು ಹಂಚಿಕೊಳ್ಳಲಾಗಿದೆ. ಆದರೆ, ಇದು ತಿರುಚಲಾದ ಮಾಹಿತಿ.

ಇದು ತಿರುಚಲಾದ ಚಿತ್ರ ಮತ್ತು ತಿರುಚಲಾದ ಮಾಹಿತಿ ಎಂದು ಎನ್‌ಎಂ ಫ್ಯಾಕ್ಟ್‌ಚೆಕರ್ ಬ್ಯೂರೊ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ಸಾಮಾಜಿಕ ಜಾಲತಾಣಗಳಲ್ಲಿ ಈಗ ಹಂಚಿಕೊಳ್ಳಲಾಗುತ್ತಿರುವ ಚಿತ್ರದ ಮೂಲ ಚಿತ್ರವು ಟೈಮ್ಸ್‌ ಗ್ರೂಪ್‌ಗೆ ಸೇರಿದ್ದಾಗಿದೆ. ಟೈಮ್ಸ್‌ ಕಂಟೆಂಟ್‌.ಕಾಂನಲ್ಲಿ ಈ ಚಿತ್ರ ಈಗಲೂ ಲಭ್ಯವಿದೆ. 1971ರ ಮೇ 9ರಂದು ದೆಹಲಿಯಲ್ಲಿ ಇಂದಿರಾ ಗಾಂಧಿ ಅವರ ಮನೆಯಲ್ಲಿ ತೆಗೆಯಲಾದ ಚಿತ್ರವಿದು ಎಂದು ಟೈಮ್ಸ್‌ ಕಂಟೆಂಟ್‌.ಕಾಂನಲ್ಲಿ ವಿವರಿಸಲಾಗಿದೆ. ಮೂಲ ಚಿತ್ರದಲ್ಲಿ ಇಂದಿರಾ ಗಾಂಧಿ ಅವರು ಸೀರೆ ಧರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇಂದಿರಾ ಗಾಂಧಿ ಅವರು ಸೀರೆಯ ಸೆರಗನ್ನೇ ತಲೆಗೆ ಸುತ್ತಿಕೊಂಡಿದ್ದಾರೆ. ಆ ಚಿತ್ರವನ್ನು ಅರ್ಧಕ್ಕೆ ಕ್ರಾಪ್‌ ಮಾಡಿ, ತಿರುಚಿದ ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು