ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಮದರಸವಾಗಿದೆಯೇ ದೆಹಲಿಯ ಸರ್ಕಾರಿ ಶಾಲೆ?

Last Updated 1 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ದೆಹಲಿಯ ಸರ್ಕಾರಿ ಶಾಲೆಯೊಂದನ್ನು ಮದರಸವನ್ನಾಗಿ ಬದಲಾಯಿಸಲಾಗಿದೆ ಎಂದು ಹೇಳುವ ವಿಡಿಯೊ ವೈರಲ್ ಆಗಿದೆ. ಪೊಲೀಸರು ವ್ಯಕ್ತಿಯೊಬ್ಬರ ಜೊತೆ ಶಾಲೆಯ ಕೊಠಡಿಗೆ ತೆರಳುವುದು ಮತ್ತು ಕೊಠಡಿಯಲ್ಲಿ ಮಹಿಳೆಯರು, ಮಕ್ಕಳು ಸೇರಿ ಹಲವರು ಪ್ರಾರ್ಥನೆ ಸಲ್ಲಿಸುವುದು ವಿಡಿಯೊದಲ್ಲಿ ಇದೆ. ‘ಮತ ಬ್ಯಾಂಕ್‌ ಭದ್ರ ಮಾಡಿಕೊಳ್ಳಲು ಎಎಪಿ ರೋಹಿಂಗ್ಯ ಜನಾಂಗವನ್ನು ಓಲೈಸುತ್ತಿದೆ’ ಎಂದು ಹಲವರು ಪೋಸ್ಟ್‌ ಮಾಡಿರುವ ವಿಡಿಯೊದಲ್ಲಿ ಹೇಳಲಾಗಿದೆ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಎಂದು ಆಲ್ಟ್‌ ನ್ಯೂಸ್‌ ಹೇಳಿದೆ. ಈ ವಿಡಿಯೊವನ್ನು ಗಮನಿಸಿದಾಗ ಅದರಲ್ಲಿ ‘ಪ್ರಾಥಮಿಕ ಶಾಲೆ ಮಿರ್ಜಾಪುರ’ ಎಂದು ಬರೆದಿರುವುದು ಕಾಣುತ್ತದೆ. ಈ ಕುರಿತು ಅಲ್ಲಿಯ ಪೊಲೀಸರಿಂದ ಮಾಹಿತಿ

ಪಡೆಯಲಾಯಿತು. ಶಾಲೆಯ ಸಿಬ್ಬಂದಿಯ ಮಗುವಿಗೆ ಆರೋಗ್ಯ ಸಮಸ್ಯೆ ಆದಾಗ, ಮಕ್ಕಳು ಮತ್ತು ಮಹಿಳೆಯರು ಶಾಲೆಯ ಕೊಠಡಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾಗಿ ಪೊಲೀಸರು ತಿಳಿಸಿದರು ಎಂದು ಆಲ್ಟ್‌ ನ್ಯೂಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT