‘ಅಯ್ಯೋ ಇದೆಂಥಾ ಪ್ರಶ್ನೆ ಅಂತ ಕೇಳ್ತೀ, ತೊಟ್ಟಿನ ಭಾಗ ಹಿಡಿದುಕೊಳ್ತೀವಿ, ತುದಿಯಿಂದ ಸಿಪ್ಪೆ ಸುಲಿಯುತ್ತಾ ತಿಂತೀವಿ, ಕೆಲವರು ಇಡೀ ಸಿಪ್ಪೆಯನ್ನು ಒಂದೇ ಬಾರಿಗೆ ಸುಲಿದು, ಬೆತ್ತಲೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ತಿನ್ತಾರೆ. ಆದರೆ ಇದರಿಂದ ಕೈಗೆ ಹಣ್ಣಿನ ಅಂಶ ಮೆತ್ತಿಕೊಳ್ಳುತ್ತೆ, ಒಂದೊಮ್ಮೆ ಕೈ ತೊಳೆಯದಿದ್ದರೆ ಕೈಯಲ್ಲಿನ ಬ್ಯಾಕ್ಟೀರಿಯಾಗಳೂ ಹೊಟ್ಟೆಗೆ ಹೋಗುತ್ತೆ. ಹಾಗಾಗಿ ಮೊದಲು ಹೇಳಿದ ಹಾಗೆ ತಿನ್ನೋದೇ ಸರಿ. ಅದು ಶಿಷ್ಟ ಪದ್ಧತಿ ಸಹ ಹೌದು...’ ಹಾಗಂತ ನನ್ನ ಗೆಳತಿಯೊಬ್ಬಳು ಪುಟ್ಟ ಲೆಕ್ಚರ್ ಕೊಟ್ಟಳು. ಹೇಗಾದರೂ ತಿನ್ನಿ, ತಿಂದ ನಂತರ ಸಿಪ್ಪೆ ಏನು ಮಾಡುತ್ತೀರಿ?

ಇದೆಂಥಾ ಸಿಲ್ಲಿ ಪ್ರಶ್ನೆ ಎನ್ನುವ ಮುಖ ಭಾವ ಮಾಡಿದರೂ, ಬಹುಶಃ ಸಿಪ್ಪೆಯನ್ನು ಎಲ್ಲೆಂದರಲ್ಲಿ ಬಿಸಾಡಿದರೆ ದಾರಿ ಹೋಕರು ಅದರ ಮೇಲೆ ಕಾಲಿಟ್ಟು ಜಾರಿ ಬೀಳುವ ಅಪಾಯವಿದೆ ಎಂಬ ಕಾರಣಕ್ಕೆ ಈ ಪ್ರಶ್ನೆ ಕೇಳಿರಬಹುದು ಎಂದುಕೊಂಡು, ಸಿಪ್ಪೆ ವಿಲೇವಾರಿ ಬಗ್ಗೆಯೂ ಸಣ್ಣ ಉಪನ್ಯಾಸ ನೀಡಿದಳು. ನನ್ನ ಆಕ್ಷೇಪ ಇದ್ದುದು ಬಾಳೆ ಹಣ್ಣು ತಿನ್ನುವ ಕ್ರಮದ ಬಗ್ಗೆಯಾಗಲೀ, ಅದನ್ನು ವಿಲೇವಾರಿ ಮಾಡುವ ಬಗ್ಗೆಯಾಗಲೀ ಅಲ್ಲವೇ ಅಲ್ಲ. ಅಸಲಿಗೆ ನೀವುಗಳು (ಬಹುತೇಕರು) ಬಾಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಡುತ್ತೀರಲ್ವಾ? ಅದರ ಬಗ್ಗೆಯೇ ನನ್ನ ಅಬ್ಜೆಕ್ಷನ್ ಇರೋದು.

ಹೌದು, ಬಾಳೆ ಹಣ್ಣಿನಲ್ಲಿ ಇರುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳು ಅದರ ಸಿಪ್ಪೆಯಲ್ಲಿ ಅಡಗಿರುತ್ತದೆ. ರುಚಿಯ ದೃಷ್ಟಿಯಿಂದ ನಾವು ಹಣ್ಣನ್ನು ಮಾತ್ರವೇ ತಿಂದು ಸಿಪ್ಪೆಯನ್ನು ಬಿಸಾಡುತ್ತೇವೆ. ನನಗೆ ಗೊತ್ತು, ನಿಮ್ಮಲ್ಲಿ ಬಹುತೇಕರಿಗೆ ಸಿಪ್ಪೆ ಸಹಿತ ಬಾಳೆ ಹಣ್ಣನ್ನು ತಿನ್ನುವುದು ಹಸುವಿಗೆ ಸಮಾನ ಎಂಬ ಭಾವ ಇದೆ ಅಂತ. ಆದರೆ, ನೀವು ಸಿಪ್ಪೆಯನ್ನು ಹಾಗೆಯೇ ತಿನ್ನುವ ಅಥವಾ ಬಿಸಾಡುವ ಬದಲು ಅದರಿಂದ ಚೆಂದದ ರೆಸಿಪಿ ತಯಾರಿಸಿ ತಿಂದರೆ, ಪೋಷಕಾಂಶಗಳೂ ನಮಗೆ ಸಿಕ್ಕಂತಾಗುತ್ತದೆ, ರುಚಿಯಾದ, ಸುಲಭದ ದಿಢೀರ್ ಅಡುಗೆಯೂ ಸಿದ್ಧಗೊಳ್ಳುತ್ತದೆ.

ಅದಕ್ಕಿಂತ ಮುನ್ನ ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಯಾವೆಲ್ಲ ಪೋಷಕಾಂಶಗಳಿರುತ್ತವೆ ಎಂಬುದನ್ನು ಆರೋಗ್ಯ ತಜ್ಞರೇ ಪಟ್ಟಿ ಮಾಡಿದ್ದಾರೆ. ನೋಡಿಕೊಂಡು ಬರೋಣ.

ಸಿಪ್ಪೆಯಲ್ಲಿ ವಿಟಮಿನ್ ಎ ಹೇರಳವಾಗಿ ಇದೆ. ಇದು ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುತ್ತದೆ. ಸಣ್ಣ ಪುಟ್ಟ ಸೋಂಕು, ವೈರಸ್ಗಳಿಂದ ಹರಡುವ ಕಾಯಿಲೆಗಳಿಂದ ನಮ್ಮ ದೇಹವನ್ನು ವಿಟಮಿನ್ ಎ ರಕ್ಷಿಸುತ್ತದೆ. ಇನ್ನು ಆ್ಯಂಟಿ ಆಕ್ಸಿಡೆಂಟ್ ಯುಕ್ತವಾಗಿರುವ ಸಿಪ್ಪೆಯಲ್ಲಿ ವಿಟಮಿನ್ ಬಿ, ಬಿ6 ಕೂಡ ಯಥೇಚ್ಛವಾಗಿದೆ ಎನ್ನುತ್ತದೆ ಆರೋಗ್ಯ ವಿಜ್ಞಾನ. ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಟ್ರಿಪ್ಟೊಫಾನ್ ಎಂಬ ಆಂಶ B6 ನೊಂದಿಗೆ ಸೇರಿಕೊಂಡು, ಖಿನ್ನತೆ ಮತ್ತು ಇತರ ಮೂಡ್ ಡಿಸಾರ್ಡರ್ಗಳ ಕೆಲವು ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಟ್ರಿಪ್ಟೊಫಾನ್ ಸಿರೊಟೋನಿನ್ ಆಗಿ ವಿಭಜನೆಯಾಗುತ್ತದೆ. ಇದು ನಮ್ಮ ಮನಃಸ್ಥಿತಿಯನ್ನು ಸುಧಾರಿಸುತ್ತದೆ. ಚರ್ಮದ ಆರೈಕೆಗೆ ಇದು ಮಹತ್ವದ ಪಾತ್ರವಹಿಸುತ್ತದೆ. ಉತ್ಕರ್ಷಣ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ವೃದ್ಧಾಪ್ಯ ತಡೆಯಲು, ಕಣ್ಣಿನ ಕೆಳಗೆ ಕಪ್ಪಾಗುವುದು, ಚರ್ಮದ ಸುಕ್ಕು ಇತ್ಯಾದಿ ತಡೆಯುವ ಶಕ್ತಿ ಬಾಳೆ ಹಣ್ಣಿನ ಸಿಪ್ಪೆಯಲ್ಲಿದೆ.

ಇದಲ್ಲದೇ ಸಿಪ್ಪೆಯಲ್ಲಿರುವ ಲುಟೈನ್ ಎಂಬ ಪದಾರ್ಥ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ನಾರುಯಕ್ತವಾಗಿರುವ ಸಿಪ್ಪೆ ಸೇವನೆಯಿಂದ ದೇಹದಲ್ಲಿ ಕೊಬ್ಬು ಕರಗುತ್ತದೆ ಮಾತ್ರವಲ್ಲದೆ ಪಚನ ಕ್ರಿಯೆಗೆ ಸಹಾಯವಾಗುತ್ತದೆ.

ಬಾಳೆಹಣ್ಣಿನಲ್ಲಿರುವುದಕ್ಕಿಂತ ಹೆಚ್ಚು ಪೊಟಾಷಿಯಂ ಮತ್ತು ಫೈಬರ್ ಸಿಪ್ಪೆಯಲ್ಲಿದೆ. ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಹಳದಿ ಬಣ್ಣದಭಾಗ ಕ್ಯಾನ್ಸರ್ ಪ್ರತಿರೋಧವಾಗಿಯೂ ಕೆಲಸ ಮಾಡುತ್ತದೆ. ಇದು ಬಿಳಿ ರಕ್ತ ಕಣಗಳನ್ನು ವೃದ್ಧಿಸಿ ಜೀವಕೋಶಗಳನ್ನು ಪೊರೆಯುತ್ತದೆ. ಸಿಪ್ಪೆಯಲ್ಲಿ ಡಯೆಟರಿ ಫೈಬರ್, ಬಹುಅಪರ್ಯಾಪ್ತ ಕೊಬ್ಬುಗಳು ಮತ್ತು ಅಗತ್ಯ ಅಮೈನೋ ಆಮ್ಲಗಳು ಸೇರಿದಂತೆ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.

ಇಷ್ಟೆಲ್ಲ ಸರಿ, ಆದರೆ ಸಿಪ್ಪೆ ಬಳಕೆ ಹೇಗೆ? ಇಲ್ಲಿದೆ ನೋಡಿ ಸುಲಭೋಪಾಯ. ಬಾಳೆ ಹಣ್ಣಿನ ಸಿಪ್ಪೆಯ ಸಾಸಿವೆ (ಮೊಸರು ಬಜ್ಜಿ) ಮಾಡಿ, ಚಪ್ಪರಿಸಿ ತಿನ್ನಿ.

ಬೇಕಾಗುವ ಸಾಮಗ್ರಿಗಳು:

ಎರಡು ದೊಡ್ಡ ಗಾತ್ರದ ಬಾಳೆ ಹಣ್ಣಿನ ಸಿಪ್ಪೆಗಳು, ಒಂದು ಹಿಡಿ ಹಸಿ ತೆಂಗಿನ ತುರಿ. ಒಂದು ಚಮಚ ತುಪ್ಪ. ಒಂದು ಟೀಸ್ಪೂನ್ ಸಾಸಿವೆ. ಒಂದು ಸಾಧಾರಣ ಗಾತ್ರದ ಹಸಿ ಮೆಣಸಿನ ಕಾಯಿ. ರುಚಿಗೆ ತಕ್ಕಷ್ಟು ಉಪ್ಪು. ಒಂದು ಜಾಮೂನ್ ಕಪ್ ಮೊಸರು. ಇಂಗು–ಕರಿಬೇವು ಸೇರಿದಂತೆ ಒಗ್ಗರಣೆ ಸಾಮಗ್ರಿ.

ಮಾಡುವ ವಿಧಾನ:

ಸ್ವಚ್ಛವಾದ ಬಾಳೆಹಣ್ಣಿನ ಸಿಪ್ಪೆಯನ್ನು ಸಾಧಾರಣ ಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಸಣ್ಣ ಪಾನ್ಗೆ ಹಾಕಿಕೊಂಡು ತುಪ್ಪದಲ್ಲಿ ಚೆನ್ನಾಗಿ ಬಾಡಿಸಿ, ತಣಿಸಿಟ್ಟುಕೊಳ್ಳಿ. ಮಿಕ್ಸಿ ಜಾರಿಗೆ ತೆಂಗಿನ ತುರಿ, ಅರ್ಧ ಚಮಚ ಹಸಿ ಸಾಸಿವೆ, ಹಸಿಮೆಣಸು, ಉಪ್ಪು ಹಾಕಿ, ಸ್ವಲ್ಪ ನೀರುಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಡಿಸಿಟ್ಟಕೊಂಡ ಸಿಪ್ಪೆಗೆ ರುಬ್ಬಿದ ಮಿಶ್ರಣವನ್ನು ಹಾಕಿ, ಜಾರ್ಗೆ ಸ್ವಲ್ಪ ನೀರು ಹಾಕಿ ಅದನ್ನೂ ಸೇರಿಸಿ. ಮೇಲಿಂದ ಮೊಸರನ್ನು ಹಾಕಿ ಚೆನ್ನಾಗಿ ಸೌಟ್ನಿಂದ ಮಿಕ್ಸ್ ಮಾಡಿ. ಇಂಗು, ಎಣ್ಣೆ, ಕರಿಬೇವು, ಸಾಸಿವೆ, ಒಣಮೆಣಸನ್ನೊಳಗೊಂಡ ಒಗ್ಗರಣೆಯನ್ನು ಸಿಡಿಸಿ, ಮೇಲಿಂದ್ ‘ಚುಯ್ಯೆನ್ನುವ’ ಶಬ್ದ ಬರುವಂತೆ ಒಗ್ಗರಿಸಿ ಅನ್ನದೊಂದಿಗೆ ಸರ್ವ್ ಮಾಡಿ. ಹಾಗೆಯೇ ಬೌಲ್ನಲ್ಲಿ ಹಾಕಿಕೊಂಡು ಊಟದ ಜತೆಗೆ ಇದನ್ನು ಚಮಚದಲ್ಲಿ ಸವಿಯಲೂಬಹುದು. ಪಲಾವ್, ಪರಾಟಗಳಿಗೂ ಹೊಂದಿಕೆಯಾಗುತ್ತದೆ.

ಬಾಳೆಹಣ್ಣು ಹಾಗೂ ಮೊಸರಿನ ಘಮ ಬೆರೆತ ಈ ರೆಸಿಪಿ ನಿಮ್ಮನ್ನು ಮಂತ್ರಮೋಹಿತರಾಗಿಸದಿದ್ದರೆ ಕೇಳಿ, ಮತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.