ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಗಳು ಜೋಯಿಶ್ ಇರಾನಿ ಮಾಡಿದ ರೆಸಿಪಿಗಳನ್ನು ನೋಡಿ...

ಅಕ್ಷರ ಗಾತ್ರ

ತಾಯಿ ಮತ್ತು ಮಕ್ಕಳ ನಡುವಿನ ಬಾಂಧವ್ಯ ಯಾವಾಗಲೂ ವಿಶೇಷವಾಗಿರುತ್ತದೆ. ನಾವು ಬೆಳೆದಂತೆ, ಜೀವನವು ನಮ್ಮ ಮುಂದಿಡುವ ಎಲ್ಲಾ ಸಣ್ಣ ಮತ್ತು ದೊಡ್ಡ ವಿಚಾರಗಳ ಬಗ್ಗೆ ನಾವು ಕಲಿಯುತ್ತೇವೆ. ಈ ಪಯಣದಲ್ಲಿ ನಮ್ಮ ಪೋಷಕರು ಯಾವಾಗಲೂ ಜೊತೆ ನಿಲ್ಲುತ್ತಾರೆ. ನಮ್ಮ ಕುಟುಂಬದಿಂದ ನಾವು ಅನೇಕ ವಿಚಾರಗಳನ್ನು ಕಲಿತರು ಕೂಡ, ನಮ್ಮ ತಾಯಂದಿರು ನಮಗೆ ಕಲಿಸುವ ಪ್ರಮುಖ 'ಜೀವನ ಕೌಶಲ್ಯ'ವೆಂದರೆ ಅಡುಗೆ.

ಕೆಲವು ಸಮಯದಲ್ಲಿ, ಮಸಾಲ ಡಬ್ಬಗಳನ್ನು ತೆಗೆದುಕೊಡುವುದರಿಂದ ಹಿಡಿದು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುವ ಮೂಲಕ ತಾಯಂದಿರಿಗೆ ಸಹಾಯ ಮಾಡಿಯೇ ಇರುತ್ತೇವೆ. ಸಹಾಯದ ನೆಪದಲ್ಲಿಯೇ ಅಡುಗೆ ಕಲಿಯುತ್ತಲೇ ಬೆಳೆದಿರುತ್ತೇವೆ. ಇದೊಂತರ ವಿಶೇಷ ಬಂಧ ನಮ್ಮನ್ನು ಒಟ್ಟಿಗೆ ಸೇರಿಸಿರುವಂತೆಯೇ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೂ ಅದೇ ಆಗುತ್ತಿದೆ.

ಇತ್ತೀಚೆಗಷ್ಟೇ ಸಚಿವೆ ಸ್ಮೃತಿ ಇರಾನಿ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಮಗಳು ಜೋಯಿಶ್ ಇರಾನಿ ಸಿದ್ಧಪಡಿಸಿದ ರುಚಿಕರವಾದ ಭಕ್ಷ್ಯಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ಮೆಣಸಿನಕಾಯಿ ಎಣ್ಣೆ, ತರಕಾರಿ ಪಿಜ್ಜಾ ಮತ್ತು ಸಾಸ್‌ನಲ್ಲಿ ಮುಚ್ಚಿದ ಗರಿಗರಿಯಾದ ಆಲೂಗಡ್ಡೆಯ ರೆಸಿಪಿಗಳ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಮಗಳನ್ನು ಟ್ಯಾಗ್ ಮಾಡಿ 'Chef @zoishiranii' ಎಂದು ಬರೆದಿದ್ದಾರೆ.

ಈ ರೆಸಿಪಿಗಳನ್ನು ನೋಡಿದ ನಿಮಗೆ ತಿನ್ನಬೇಕೆನಿಸಿದರೆ ಖಂಡಿತವಾಗಿಯೂ ನೀವು ಇದನ್ನ ನಿಮ್ಮ ಮನೆಯಲ್ಲೇ ಟ್ರೈ ಮಾಡಬಹುದು.

ಸ್ಮೃತಿ ಇರಾನಿ ಅವರು ಆಗಾಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಜೀವನ ಶೈಲಿ ಮತ್ತು ಅವರ ಕೆಲಸದ ಬಗ್ಗೆ ಪೋಸ್ಟ್‌‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ತನ್ನ ಮಗಳು ರುಚಿಕರವಾದ ಟರ್ಕಿ ಮತ್ತು ರುಚಿಕರವಾದ ಪೇಸ್ಟ್ರಿಗಳನ್ನು ಮಾಡಿರುವುದರ ಕುರಿತು ಪೋಸ್ಟ್ ಮಾಡಿದ್ದರು.

ಸ್ಮೃತಿ ಇರಾನಿ ಇನ್‌ಸ್ಟಾಗ್ರಾಂ ಸ್ಟೋರಿಯ ಡಿಮ್ ಸಮ್ಸ್
ಸ್ಮೃತಿ ಇರಾನಿ ಇನ್‌ಸ್ಟಾಗ್ರಾಂ ಸ್ಟೋರಿಯ ಡಿಮ್ ಸಮ್ಸ್
ಸ್ಮೃತಿ ಇರಾನಿ ಇನ್‌ಸ್ಟಾಗ್ರಾಂ ಸ್ಟೋರಿಯ ಗರಿಗರಿ ಆಲೂಗಡ್ಡೆ
ಸ್ಮೃತಿ ಇರಾನಿ ಇನ್‌ಸ್ಟಾಗ್ರಾಂ ಸ್ಟೋರಿಯ ಗರಿಗರಿ ಆಲೂಗಡ್ಡೆ
ಸ್ಮೃತಿ ಇರಾನಿ ಇನ್‌ಸ್ಟಾಗ್ರಾಂ ಸ್ಟೋರಿಯ ಪಿಜ್ಜಾ
ಸ್ಮೃತಿ ಇರಾನಿ ಇನ್‌ಸ್ಟಾಗ್ರಾಂ ಸ್ಟೋರಿಯ ಪಿಜ್ಜಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT