ನಿತ್ಯದ ನಮ್ಮ ಆಹಾರಾಭ್ಯಾಸ ಆರಂಭವಾಗುವುದು ಹಾಲಿನ ಮೂಲಕ. ಇದರ ಜತೆಗೆ ಇನ್ನೂ ಹತ್ತು ಹಲವು ಪದಾರ್ಥಗಳು ನಮ್ಮ ಆಹಾರದಲ್ಲಿ ನಿತ್ಯ ಬಳಕೆಯಾಗುತ್ತವೆ. ಅಗತ್ಯಪದಾರ್ಥಗಳೇ ಹೆಚ್ಚು ಕಲಬೆರಕೆಯಾಗುತ್ತಿವೆ. ಅವುಗಳಿಗೆ ಏನೆಲ್ಲಾ ಸೇರಿಸಲಾಗುತ್ತಿದೆ? ಅದರಿಂದಆರೋಗ್ಯದಮೇಲಾಗುವ ಪರಿಣಾಮಗಳೇನು? ಇಲ್ಲಿದೆ ವಿಡಿಯೋ ಸಹಿತ ಮಾಹಿತಿ.

1. ಹಾಲು

ಹಾಲು ಜಾಗತಿಕವಾಗಿ ಹೆಚ್ಚಾಗಿ ಬಳಕೆಯಾಗುವ ದ್ರವ. ಇದಕ್ಕೆ ಯುರಿಯಾ, ಡಿಟರ್ಜೆಂಟ್, ಸೀಮೆಸುಣ್ಣದ ಪುಡಿ ಬಳಸಲಾಗುತ್ತಿದೆ. ಇದು ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

2. ಟೀ/ ಕಾಫಿ ಪುಡಿ

ಟೀ ಪುಡಿಗೆ ಬಣ್ಣ ಕಟ್ಟಲಾಗುತ್ತದೆ. ಕಾಫಿ ಪುಡಿಯಲ್ಲಿ ಹುಣಸೆ ಬೀಜ, ಚಿಕೊರಿ ಹಾಕಲಾಗುತ್ತಿದೆ. ರಾಸಾಯನಿಕ ಬಣ್ಣದಿಂದ ಅಲರ್ಜಿ, ಚರ್ಮದ ಕಾಯಿಲೆ ಉಂಟಾಗುತ್ತದೆ.

3. ಧಾನ್ಯ

ಕಲ್ಲು, ಕಳೆ ಬೀಜಗಳು, ಹಿಕ್ಕೆ ಆಹಾರ ಧಾನ್ಯಗಳಲ್ಲಿ ಕಲಬೆರಕೆಯಾಗುತ್ತಿವೆ. ಕಳೆ ಬೀಜಗಳು ಒಂದೊಂದು ಬಾರಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾದ್ಯತೆಗಳಿವೆ.

4. ತರಕಾರಿ/ಹಣ್ಣುಗಳು

ತರಕಾರಿಗಳು ಆಕರ್ಷಕವಾಗಿ ಕಾಣುವಂತೆ ಮಾಡಲು ಬಣ್ಣ ಮತ್ತು ವ್ಯಾಕ್ಸ್ ಬಳಸಲಾಗುತ್ತದೆ. ರಾಸಾಯನಿಕಗಳಿಂದ ತರಕಾರಿಗಳನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ. ಹಣ್ಣುಗಳೂ ಇದರಿಂದ ಹೊರತಲ್ಲ. ರಾಸಾಯನಿಕಗಳು, ಕೃತಕ ಬಣ್ಣ ನಮ್ಮ ದೇಹ ಸೇರಿ ಗ್ಯಾಸ್ಟ್ರಿಕ್, ಚರ್ಮರೋಗಗಳು, ಅಲರ್ಜಿ ಸಮಸ್ಯೆಗಳು

5. ಸಿಹಿ ತಿನಿಸುಗಳು

ಸಿಹಿ ತಿನಿಸುಗಳ ಮೇಲೆ ಹಾಕಲಾಗುವ ಸಿಲ್ವರ್ ಹಾಳೆಯು ಶೇ. 99.9ರಷ್ಟು ಶುದ್ಧವಾಗಿರಬೇಕು. ಆದರೆ, ಬಹುತೇಕ ಸಂದರ್ಭಗಳಲ್ಲಿ ಅಲ್ಯುಮಿನಿಯಂ ಮಿಶ್ರಿತ ಸಿಲ್ವರ್ ಹಾಳೆಯನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕರ. ಇನ್ನೊಂದೆಡೆ ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಕಡಿಮೆ ಗುಣಮಟ್ಟದ ಕೋವಾ ಬಳಕೆಯೂ ಹೆಚ್ಚುತ್ತಿದೆ. ಸಿಹಿ ತಿಂಡಿಗಳ ಕಲಬೆರಕೆಯಿಂದಾಗಿ ಅಜೀರ್ಣ, ವಾಂತಿ, ಭೇದಿ ಉಂಟಾಬಹುದು.

6. ಜೇನು ತುಪ್ಪ

ಜೇನು ದುಬಾರಿ. ಹೀಗಾಗಿಯೇ ಜೇನು ಅತಿ ಹೆಚ್ಚು ಕಲಬೆರಕೆಗೊಳ್ಳುತ್ತಿದೆ. ಸಕ್ಕರೆ ಪಾಕ, ಸಿಹಿ ದ್ರವವನ್ನು ಜೇನಿಗೆ ಮಿಶ್ರಣ ಮಾಡಲಾಗುತ್ತದೆ. ಸಿಹಿಕಾರಕ ರಾಸಾಯನಿಕಗಳು ವ್ಯಸನಕ್ಕೆ ದಾರಿ ಮಾಡಿಕೊಡುತ್ತವೆ.

7.ತೊಗರಿ ಬೇಳೆ

ತೊಗರಿ ಬೇಳೆಯ ಬಣ್ಣ ಹೆಚ್ಚಿಸಲು ಮೆಟನಿಲ್ ಹಳದಿಯನ್ನು ಬಳಸಲಾಗುತ್ತದೆ. ಇದನ್ನು ಆಹಾರದಲ್ಲಿ ಬಳಸುವಂತಿಲ್ಲ. ಇದರಿಂದ ಮೆದುಳಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

8. ಮಸಾಲೆ ಪದಾರ್ಥಗಳು

ಮಸಾಲೆ ಪದಾರ್ಥಗಳಲ್ಲಿ ಮೆಟಾನಿಲ್ ಹಳದಿ ಮತ್ತು ರೆಡ್ ಆಕ್ಸೈಡ್ ಅನ್ನು ಬಳಸಲಾಗುತ್ತಿದೆ. ಇದರಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು, ಕ್ಯಾನ್ಸರ್ನಂಥ ಮಾರಣಾಂತಿಕ ಕಾಯಿಲೆಗಳು ಬರುತ್ತವೆ.

9. ಬೆಣ್ಣೆ

ಬೆಣ್ಣೆಗೆ ಆಲೂಗಡ್ಡೆ, ವನಸ್ಪತಿ, ಪಾಮ್ ಎಣ್ಣೆಯನ್ನು ಮಿಶ್ರಣ ಮಾಡಲಾಗುತ್ತಿದೆ. ಇದರಿಂದ ಉದರ ಸಂಬಂಧಿ ಕಾಯಿಲೆಗಳು ಬರುತ್ತವೆ.

10. ಐಸ್ ಕ್ರೀಮ್

ವಾಷಿಂಗ್ ಪೌಡರ್ ಜತೆಗೆ ಪೆಪೆರೊನಿಲ್, ಎಥಿಲೆಕ್ಟೇಟ್, ಬಟ್ರಾಲ್ಡೆಹೈಡ್, ಎಮಿಲ್ ಆಸೆಟೆಟ್, ನೈಟ್ರೇಟ್ ಮುಂತಾದ ರಾಸಾಯನಿಕಗಳನ್ನು ಬಳಸಿ ಐಸ್ಕ್ರೀಮ್ ಸಿದ್ಧಪಡಿಸಲಾಗುತ್ತದೆ. ಪೆಪೆರೋನಿಲ್ ಅನ್ನು ಕ್ರಿಮಿನಾಷಕವಾಗಿ ಬಳಸಲಾಗುತ್ತದೆ. ಎಥೆಲೆಕ್ಟೇಟ್ನಿಂದ ಶ್ವಾಸಕೋಶ, ಕಿಡ್ನಿ ಸಮಸ್ಯೆಗಳು ಉಂಟಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.