ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ: ರಂಜಾನ್‌ನ ಪ್ರಸಿದ್ಧ ಸಿಹಿ ರುಚಿಗಳು– ಶೀರ್‌ಕುರ್ಮಾ ಮಾಡುವುದು ಹೇಗೆ?

Published 16 ಮಾರ್ಚ್ 2024, 0:21 IST
Last Updated 16 ಮಾರ್ಚ್ 2024, 0:21 IST
ಅಕ್ಷರ ಗಾತ್ರ

ಸಿಹಿ ಸವಿ

ರಂಜಾನ್ ತಿಂಗಳು ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಶೀರ್‌ಕುರ್ಮಾ. ಅದರ ಹಿಂದೆ ಸಾಲಾಗಿ ನೆನಪಾಗುವುದು ಬಗೆಬಗೆಯ ಖಾದ್ಯಗಳು. ಮಾಂಸಾಹಾರಿಗಳಿಗಂತೂ ಈ ತಿಂಗಳಿನಲ್ಲಿ ಬಗೆಬಗೆಯ ಖಾದ್ಯಗಳು ಸಿಗುತ್ತವೆ. ಹಬ್ಬದ ಊಟಕ್ಕೆ ಹೊಸ ಮೆರುಗು ಕೊಡುವುದೇ ಶೀರ್ ಕುರ್ಮಾ. ಈ ಶೀರ್ ಕುರ್ಮಾದ ರುಚಿ ಧರ್ಮದ ಗಡಿ ಮೀರಿದ್ದು. ರಂಜಾನ್ ಹಬ್ಬದ ನೆಪದಲ್ಲಿ ಮುಸ್ಲಿಮೇತರರ ಮನೆಗಳಿಗೆ ಸೌಹಾರ್ದದ ರುಚಿಯಾಗಿ ದೊರೆಯುತ್ತದೆ. ಕ್ಷೀರದ ಅಪಭ್ರಂಶ ಶೀರ್‌ ಎಂಬ ವಾದವೂ ಇದೆ. ಈ ಸಿಹಿಯ ರೆಸಿಪಿ ನೀಡಿದ್ದಾರೆ ಸುಷ್ಮಾ ಸವಸುದ್ದಿ

ಶೀರ್‌ ಕುರ್ಮಾ

ಬೇಕಾಗುವ ಸಾಮಗ್ರಿಗಳು: 2 ಲೀ. ಹಾಲು, ತೆಳುವಾಗಿರುವ ಶ್ಯಾವಿಗೆ, ಬಾದಾಮಿ (ಸಿಪ್ಪೆ ತೆಗೆದು ನೆನೆಸಿ ಈಡಬೇಕು), ಗೋಡಂಬಿ, ಚಿರಾಂಜಿ, ಖರ್ಜೂರ, ಮಿಲ್ಕ್ ಮೇಡ್ ವಿತ್ ಸ್ವೀಟ್, ಪಿಸ್ತಾ, ಕೇಸರಿ, ತುಪ್ಪ.

ಮಾಡುವ ವಿಧಾನ:ಹಾಲು ಬಿಸಿ ಮಾಡಿ, ಚೆನ್ನಾಗಿ ಕುದಿಸಬೇಕು. ಎಲ್ಲ ಒಣಹಣ್ಣುಗಳನ್ನು ಚಿಕ್ಕದಾಗಿ ಕಟ್ ಮಾಡಿ ಇಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ ತುಪ್ಪದ ಜೊತೆಗೆ ಕಟ್ ಮಾಡಿದ ಒಣಹಣ್ಣುಗಳನ್ನು ಹುರಿದುಕೊಳ್ಳಬೇಕು. ಬಾದಾಮಿ, ಪಿಸ್ತಾ, ಗೋಡಂಬಿ, ಚಿರಂಜಿ, ಖರ್ಜೂರವನ್ನು ಹುರಿದುಕೊಳ್ಳಬೇಕು. ತೆಳುವಾದ ಶ್ಯಾವಿಗೆಯನ್ನು ತುಪ್ಪದ ಜೊತೆಗೆ ಹುರಿದುಕೊಳ್ಳಬೇಕು. ನಂತರ ಹಾಲನ್ನು ಕಾಯಿಸುತ್ತಾ ಅದಕ್ಕೆ ಹುರಿದುಕೊಂಡಿರುವ ಒಣಹಣ್ಣುಗಳನ್ನು ಹಾಕಿ, ಒಂದು ನಿಮಿಷ ಚೆನ್ನಾಗಿ ಕಲಕಬೇಕು. ನಂತರ ಶ್ಯಾವಿಗೆ ಹಾಕಿ ಒಂದು ನಿಮಿಷ ಕುದಿಸಬೇಕು. 400 ಗ್ರಾಂ ಮಿಲ್ಕ್ ಮೇಡ್ ಹಾಕಿ, ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ ಕುದಿಸಿ, ಕೊನೆಗೆ ಕೇಸರಿ ಹಾಕಿದರೆ ಶಿರ್ ಕುರ್ಮಾ ತಯಾರು.

ಮಿಲ್ಕ್ ಶರಬತ್

ದಿನಾ ರೋಜಾ ಇರುವವರಿಗೆ ಇಫ್ತಾರ್‌ಗೆ ಕುಡಿಯಲು ತಣ್ಣ ಮಿಲ್ಕ್ ಶರಬತ್ ಹಿತವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು: 3 ಕಪ್ ಹಾಲು, ಅರ್ಧ ಕಪ್ ಸಕ್ಕರೆ, ಬಾದಾಮಿ, ಗೋಡಂಬಿ, ಅರ್ಧ ಕಪ್ ದಾಳಿಂಬೆ, ಸಣ್ಣದಾಗಿ ಹೆಚ್ಚಿದ ಸೇಬು.

ಮಾಡುವ ವಿಧಾನ: ಹಾಲನ್ನು ಚೆನ್ನಾಗಿ ಕುದಿಸಬೇಕು. ಹಾಲು ಕುದಿಯುವಾಗ ಅದಕ್ಕೆ ಅರ್ಧ ಕಪ್ ಸಕ್ಕರೆ ಸೇರಿಸಬೇಕು. ಒಂದು ಗಂಟೆ ಆರಲು ಬಿಡಬೇಕು. ಬಾದಾಮಿ, ಗೋಡಂಬಿಗಳನ್ನು ಮಿಕ್ಸಿಗೆ ಹಾಕಿ ಪೌಡರ್ ಮಾಡಿಕೊಳ್ಳಬೇಕು. ಹಾಲು ಆರಿದ ಬಳಿಕ ಅದಕ್ಕೆ ಪೌಡರ್, ನೆನೆಸಿಟ್ಟ ಕಾಮಕಸ್ತೂರಿ ಬೀಜ, ದಾಳಿಂಬೆ, ಕಟ್ ಮಾಡಿದ ಸೇಬು ಸೇರಿಸಿ ಮಿಶ್ರಣ ಮಾಡಬೇಕು. ರುಚಿಗೆ 1 ಟೀ ಸ್ಪೂನ್ ರೂಹ್ ಅಫ್ಜಾ ಸೇರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT