ಅನುದಿನವೂ ತಿಂಡಿಗೆ, ಮಕ್ಕಳ ಲಂಚ್ ಬಾಕ್ಸ್ಗೆ, ಸ್ನ್ಯಾಕ್ಸ್ ಬ್ರೇಕ್ಗೆ... ಹೀಗೆ ಪ್ರತಿಯೊಂದಕ್ಕೂ ತರಹೇವಾರಿ ತಿನಿಸು ಸಿದ್ಧಪಡಿಸುವ ಸವಾಲು ಅಮ್ಮಂದಿರ ಮುಂದೆ ಇದ್ದೇ ಇರುತ್ತದೆ. ಅದನ್ನು ಸಮರ್ಥವಾಗಿ ನಿಭಾಯಿಸಿದರೆ ‘ದೈನಂದಿನ ಓಟ’ದಲ್ಲಿ ಅವರು ಅರ್ಧ ಗೆದ್ದಂತೆಯೇ. ಈ ‘ಓಟ’ ಒಂದಷ್ಟು ತಯಾರಿಯನ್ನೂ ಬೇಡುತ್ತದೆ. ಅಂತಹ ತಯಾರಿಗಾಗಿ ‘ಅಂಬಿಕಾ ಶೆಟ್ಟೀಸ್’ ಯೂಟ್ಯೂಬ್ ಅಡುಗೆ ಚಾನೆಲ್ ತಡಕಾಡಿದರೆ ಸಾಕು, ತಾಯಂದಿರ ದಾರಿ ಸುಲಭವೇದ್ಯ.

ಕರಾವಳಿಯ ಸಾಂಪ್ರದಾಯಿಕ ಅಡುಗೆಗಳನ್ನು ಹೇಳಿಕೊಡುತ್ತಲೇ ಇನ್ಸ್ಟಂಟ್ ರೆಸಿಪಿ, ದಿಢೀರ್ ತಿಂಡಿ, ದಿಢೀರ್ ಊಟದ ಮೆನು, ಬಗೆ ಬಗೆಯ ಜ್ಯೂಸ್ಗಳನ್ನು ಫಟಾಫಟ್ ಆಗಿ ಮಾಡಿ ತೋರಿಸುವ ಅಂಬಿಕಾ, ಇಂಗ್ಲಿಷ್, ಕನ್ನಡ ಎರಡೂ ಭಾಷೆಗಳಲ್ಲಿ ಅಡುಗೆ ಚಾನೆಲ್ ನಡೆಸುತ್ತಿದ್ದಾರೆ. 2011ರಿಂದ ಯೂಟ್ಯೂಬ್ ನಂಟು ಬೆಳೆಸಿಕೊಂಡ ಅವರು, 10 ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದಿದ್ದಾರೆ.

‘ಸ್ಪಷ್ಟ ಭಾಷೆ ಸ್ವಚ್ಛ ಅಡುಗೆ’ ಎನ್ನುವ ತನ್ನ ಟ್ಯಾಗ್ಲೈನ್ಗೆ ಪೂರಕವಾಗಿಯೇ ಇದೆ ಅವರ ಚಾನೆಲ್. ಸ್ಪಷ್ಟವಾಗಿ, ಸ್ಪುಟವಾಗಿ, ಅಡುಗೆ ಮಾಡುವವರಿಗೆ ಕಿಂಚಿತ್ತೂ ಗೊಂದಲ ಬಾರದಂತೆ ಅಷ್ಟೇ ನಾಜೂಕಾಗಿ ರೆಸಿಪಿಗಳನ್ನು ಕಟ್ಟಿಕೊಡುತ್ತಾರೆ ಅಂಬಿಕಾ. ಎಷ್ಟೋ ಹೆಣ್ಣುಮಕ್ಕಳಿಗೆ ಯೂಟ್ಯೂಬ್ನಲ್ಲಿರುವ ಉದ್ದದ ವಿಡಿಯೊ ನೋಡಿದ ಬಳಿಕ, ಅದರಲ್ಲಿ ತಿಳಿಸಿದ ಸಾಮಗ್ರಿಗಳನ್ನು ಹೊಂದಿಸಿಕೊಂಡು ಅಡುಗೆ ಮಾಡುವಷ್ಟು ಪುರಸತ್ತು ಇರುವುದಿಲ್ಲ. ಅಂತಹವರಿಗೆಂದೇ ಅವರು 3ರಿಂದ 6 ನಿಮಿಷದ ವಿಡಿಯೊದಲ್ಲೇ ಮೂರ್ನಾಲ್ಕು ರೆಸಿಪಿಗಳನ್ನು ಮುಂದಿಡುತ್ತಾರೆ. ದಿನನಿತ್ಯದ ಅಡುಗೆ ಕಾಯಕದಲ್ಲಿ ಮಹಿಳೆಯರು ಎದುರಿಸುವ ತೊಡಕುಗಳನ್ನೇ ಪರಿಗಣಿಸಿ, ಅವರಿಗೆ ಸುಲಭವಾಗುವಂತೆ ರುಚಿಕರ ಹಾಗೂ ಆರೋಗ್ಯಕರ ರೆಸಿಪಿಗಳನ್ನು ಹಂಚಿಕೊಂಡಿದ್ದಾರೆ.

ಒಂದೇ ಮುಖ್ಯ ಪದಾರ್ಥದಲ್ಲಿ ವೈವಿಧ್ಯಮಯ ರುಚಿಯ ಬೇರೆ ಬೇರೆ ರೆಸಿಪಿಗಳನ್ನು ಸಾದರಪಡಿಸುವುದು ಈ ಚಾನೆಲ್ನ ಮತ್ತೊಂದು ವಿಶೇಷ. 20 ನಿಮಿಷದಲ್ಲಿ ಮಾಡುವ ನಾಲ್ಕು ಬಗೆಯ ಬೆಳಗಿನ ತಿಂಡಿಗಳು, ಕಳಿತ ಬಾಳೆಹಣ್ಣಿನಲ್ಲಿ ಮಾಡುವ ಹೊಸಬಗೆಯ ಖಾದ್ಯಗಳು (ಬಾಳೆಹಣ್ಣಿನ ಅಕ್ಕಿ ರೊಟ್ಟಿ, ಮಲ್ಪುವ, ಮಿಲ್ಕ್ಶೇಕ್, ಕೇಸರಿಬಾತ್), ಅವಲಕ್ಕಿಯಿಂದ ದಿಢೀರ್ ತಿನಿಸುಗಳು (ರೊಟ್ಟಿ, ಅವಲಕ್ಕಿ ಟೊಮೆಟೊಬಾತ್, ಉಪ್ಕರಿ, ಪಡ್ಡು), ಬಗೆಬಗೆಯ ದಿಢೀರ್ ದೋಸೆಗಳು, ದಿಢೀರ್ ಸ್ನ್ಯಾಕ್ಸ್ ರೆಸಿಪಿಗಳು, ಆರೋಗ್ಯಕರ ಪೇಯ, ಜ್ಯೂಸ್ಗಳು, ಪಾಲಾಕ್ನಿಂದ ತಯಾರಿಸಿದ ತಿಂಡಿ, ಸಿಹಿ ಖಾದ್ಯಗಳು, ವಿವಿಧ ಬಗೆಯ ಚಟ್ನಿಗಳು ಜಿಹ್ವಾಚಾಪಲ್ಯವನ್ನು ಹೆಚ್ಚಿಸುತ್ತವೆ. ನೋಡಿದಕೂಡಲೇ ಮಾಡಿ ತಿನ್ನಬೇಕೆನಿಸುವ ತವಕ ಮೂಡಿಸುತ್ತವೆ.

ಧಾವಂತದ ಜೀವನಶೈಲಿಯಲ್ಲಿ ಎಲ್ಲರಿಗೂ ಸಮಯವೇ ಮುಖ್ಯ. ವೀಕ್ಷಕರೂ ಸಮಯವನ್ನು ಹೆಚ್ಚು ವ್ಯರ್ಥ ಮಾಡದಂತೆ ದಿಢೀರ್ ಆಗಿ ನೋಡಿ ಅಷ್ಟೇ ಲಗುಬಗೆಯಲ್ಲಿ ಅಡುಗೆ ಮಾಡುವಂತೆ ಇರಬೇಕು. ಹಾಗಾಗಿ ಅನಗತ್ಯವಾದುದನ್ನು ವಿಡಿಯೊದಲ್ಲಿ ತುರುಕುವುದಿಲ್ಲ. ರುಚಿಯಾದ ಆರೋಗ್ಯಕರ ಅಡುಗೆ ಹೇಳಿಕೊಡುವುದು ನನ್ನ ಆದ್ಯತೆ
ಅಂಬಿಕಾ ಶೆಟ್ಟಿ

ಅಂಬಿಕಾ ಹೇಳ್ತಾರೆ...

ತರಕಾರಿ ಪಲ್ಯ ಅಥವಾ ಸಾಂಬಾರ್ ಮಾಡುವಾಗ ಸಣ್ಣ ಉರಿಯಲ್ಲಿ ಬೇಯಿಸಿದರೆ ರುಚಿ ಹೆಚ್ಚು. ದೊಡ್ಡ ಉರಿಯಲ್ಲಿ ಬೇಗನೆ ಬೆಂದರೂ ಅಷ್ಟಾಗಿ ರುಚಿ ಬಾರದು.

ಕರಿದ ಪದಾರ್ಥಗಳನ್ನು ದೊಡ್ಡ ಉರಿ ಇಟ್ಟುಕೊಂಡೇ ಕರಿಯಬೇಕು. ಸಣ್ಣ ಉರಿ ಇಟ್ಟರೆ ಪದಾರ್ಥಗಳು ಹೆಚ್ಚು ಎಣ್ಣೆ ಕುಡಿಯುತ್ತವೆ.

ಆಲೂ ಚಿಪ್ಸ್ ಅಥವಾ ಪಕೋಡ ಮಾಡುವಾಗ ತುರಿದ ಆಲೂ ಸ್ಲೈಸ್ಗಳನ್ನು ತಣ್ಣೀರಿನಲ್ಲಿ ಚೆನ್ನಾಗಿ ತೊಳೆದು ಸ್ಟಾರ್ಚ್ ಅಂಶವನ್ನು ತೆಗೆಯಬೇಕು. ಇದರಿಂದ ಆಲೂ ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ ಜೊತೆಗೆ ಕ್ರಿಸ್ಪಿಯಾಗಿ ಬರುತ್ತದೆ.

ಪಾತ್ರೆಯಲ್ಲಿ ತರಕಾರಿ ಪಲ್ಯ ಅಥವಾ ಸಾಂಬಾರ್ ಬಿಸಿಗೆ ಇಟ್ಟು ಮರೆತರೆ ಅದು ಸೀಯುವ ಹಂತ ತಲುಪಿದೆ ಎಂದರೆ ತಕ್ಷಣ ಅದಕ್ಕೆ ಐಸ್ಕ್ಯೂಬ್ ಹಾಕಬೇಕು. ಆಗ ಪಾತ್ರೆ ತಳ ಹಿಡಿಯುವುದನ್ನು ತಪ್ಪಿಸಬಹುದು.

ಶಾವಿಗೆ ಪಾಯಸ ಮೈಸೂರುಪಾಕ್ ಬರ್ಫಿಯಂತಹ ಸಿಹಿ ಖಾದ್ಯಗಳನ್ನು ತಯಾರಿಸುವಾಗ ಗ್ಯಾಸ್ ಆರಿಸಿದ ಬಳಿಕವೂ ಅವುಗಳ ಕುಕಿಂಗ್ ಪ್ರೋಸೆಸ್ ಮುಂದುವರಿದಿರುತ್ತದೆ. ಹಾಗಾಗಿ ಆ ಹದ ನೋಡಿಕೊಂಡು ಒಂದು ಸ್ಟೆಪ್ ಮುಂಚಿತವಾಗಿಯೇ ಗ್ಯಾಸ್ ಆಫ್ ಮಾಡಬೇಕು. ಇಲ್ಲದಿದ್ದರೆ ಖಾದ್ಯ ಹೆಚ್ಚು ಬೆಂದು ಗಟ್ಟಿಯಾಗುವ ಸಾಧ್ಯತೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.