ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗೆ ಬಿಸಿ ಮಜ್ಜಿಗೆ ಪಳದ್ಯ

Last Updated 8 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮಜ್ಜಿಗೆ ಪಳದ್ಯ

ಬೇಕಾಗುವ ಸಾಮಗ್ರಿಗಳು:
ಮೊಸರು – 2 ಲೋಟ, ಶುಂಠಿ – 1/2 ಇಂಚು, ಹಸಿಮೆಣಸು – 2, ಬೆಳ್ಳುಳ್ಳಿ – 8 ರಿಂದ 10 ಎಸಳು, ಉಪ್ಪು – ರುಚಿಗೆ ತಕ್ಕಷ್ಟು.

ಒಗ್ಗರಣೆಗೆ: ಉದ್ದಿನಬೇಳೆ, ಕರಿಬೇವು, ಸಾಸಿವೆ, ಎಣ್ಣೆ

ತಯಾರಿಸುವ ವಿಧಾನ: ಮೊಸರಿಗೆ ಹೆಚ್ಚು ನೀರು ಹಾಕದೆ ಮಜ್ಜಿಗೆ ಮಾಡಿಕೊಳ್ಳಿ. ಶುಂಠಿ, ಬೆಳ್ಳುಳ್ಳಿಯನ್ನು ಜಜ್ಜಿಟ್ಟುಕೊಳ್ಳಿ. ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ ಸಿಡಿಸಿ. ಅದಕ್ಕೆ ಜಜ್ಜಿದ ಶುಂಠಿ, ಬೆಳ್ಳುಳ್ಳಿ ಹಾಗೂ ಕತ್ತರಿಸಿದ ಹಸಿಮೆಣಸು ಹಾಕಿ ಬಾಡಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಕುದಿಸಿ. ಸ್ಟೌ ಆರಿಸಿ ಒಗ್ಗರಣೆಗೆ ಮಜ್ಜಿಗೆ ಸೇರಿಸಿ. ಬೆಳ್ಳುಳ್ಳಿ ಬದಲು ಕಾಳುಮೆಣಸನ್ನು ಸೇರಿಸಬಹುದು.

ಈ ಮಜ್ಜಿಗೆ ಪಳದ್ಯ ಶೀತಕ್ಕೆ ಉತ್ತಮ ಮದ್ದು. ಬರೀ ಮಜ್ಜಿಗೆ ಕುಡಿದರೆ ಶೀತ, ನೆಗಡಿ ಆಗುತ್ತದೆ ಎನ್ನುವವರು ಈ ರೀತಿ ಮಾಡಿ ಸೇವಿಸಬಹುದು. ಇದನ್ನು ಅನ್ನಕ್ಕೂ ಕಲಿಸಿಕೊಂಡು ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT