ಸೋಮವಾರ, ಜುಲೈ 4, 2022
22 °C

ನಳಪಾಕ: ಚಿಕನ್, ಮಟನ್ ಖಾದ್ಯ-ವೈವಿಧ್ಯ

ಫಾತಿಮಾ ಇಶ್ರತ್‌ Updated:

ಅಕ್ಷರ ಗಾತ್ರ : | |

Prajavani

ಚಿಕನ್ ಮಸ್ತಾನಿ

ಬೇಕಾಗುವ ಸಾಮಗ್ರಿಗಳು: ಚಿಕನ್-1 ಕೆ.ಜಿ, ಎಣ್ಣೆ-3 ಚಮಚ, ತುಪ್ಪ-2 ಚಮಚ, ಈರುಳ್ಳಿ ಪೇಸ್ಟ್-4 ಮದ್ಯಮ ಗಾತ್ರದ್ದು, ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ ತುಪ್ಪ ಹಾಕಿ, ಜೀರಿಗೆ ಹುಡಿ-1 ಚಮಚ, ಗರಂ ಮಸಾಲ-1 ಚಮಚ, ಮೆಣಸಿನ ಹುಡಿ-1 2 ಚಮಚ, ಅರಿಶಿನ ಹುಡಿ - 1 ಚಮಚ, ಕರಿಮೆಣಸಿನ ಹುಡಿ-1 ಚಮಚ, ಚಾಟ್ ಮಸಾಲ-1/2 ಚಮಚ, ಮೊಸರು-1 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು-1 ಹಿಡಿ

ತಯಾರಿಸುವ ವಿಧಾನ: ಪಾನ್‌ಗೆ 3 ಚಮಚ ಎಣ್ಣೆ ಹಾಕಿ, ಅದಕ್ಕೆ 4 ಈರುಳ್ಳಿಯ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ ಹಾಕಿ, ನಂತರ ಚಿಕನ್ ಹಾಕಿ ಅದಕ್ಕೆ ಒಂದೊಂದು ಚಮಚ ಜೀರಿಗೆ, ಮೆಣಸಿನ ಹುಡಿ, ಗರಂ ಮಸಾಲೆ, ಅರಿಸಿನ ಹುಡಿ, ಕಾಳುಮೆಣಸು ಹುಡಿ ಹಾಕಿ ಚೆನ್ನಾಗಿ ಕೈ ಆಡಿಸಿ. ಚಾಟ್ ಮಸಾಲ 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಅದಕ್ಕೆ1 ಕಪ್ ಗಟ್ಟಿ ಮೊಸರು ಸೇರಿಸಿ. ಚೆನ್ನಾಗಿ ಬೇಯಿಸಿ ಬೌಲ್‌ಗೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಮಟನ್ ರೋಸ್ಟ್ ಡ್ರೈ

ಬೇಕಾಗುವ ಸಾಮಗ್ರಿಗಳು: ಮಟನ್- 1 ಕೆಜಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್-2 ಟೇಬಲ್ ಚಮಚ, ಮೆಣಸಿನ ಹುಡಿ-1 ಟೀ ಚಮಚ, ಅರಿಶಿನ ಹುಡಿ-1/2 ಟೀ ಚಮಚ, ತೆಂಗಿನೆಣ್ಣೆ-3 ಟೇಬಲ್ ಚಮಚ, ಕರಿಬೇವು ಸೊಪ್ಪು-ಸ್ವಲ್ಪ, ತೆಂಗಿನಕಾಯಿ ಸಣ್ಣಗೆ ಹಚ್ಚಿದ್ದು-ಸ್ವಲ್ಪ (ಬೇಕಾದರೆ ಮಾತ್ರ), ಹಸಿಮೆಣಸಿನ ಕಾಯಿ-2, ಈರುಳ್ಳಿ -1, ಕೊತ್ತಂಬರಿ ಹುಡಿ-1 ಟೀ ಚಮಚ, ಸೋಂಪು ಕಾಳು ಹುಡಿ-1/4 ಟೀ ಚಮಚ, ಗರಂ ಮಸಾಲ-1/2 ಟೀ ಚಮಚ, ಕಾಳುಮೆಣಸಿನ ಹುಡಿ-1/2 ಟೀ ಚಮಚ

ತಯಾರಿಸುವ ವಿಧಾನ: ಕುಕರ್‌ಗೆ 1 ಕೆಜಿ ಮಟನ್ ಹಾಕಿ ಅದಕ್ಕೆ 1 ಟೇಬಲ್ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸಿನ ಹುಡಿ 1/2 ಟೀ ಚಮಚ, ಅರಿಸಿನ 1/4 ಟೀ ಚಮಚ, 1/2 ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ 4 ರಿಂದ 5 ವಿಶಲ್ ತೆಗೆಯಿರಿ. ನಂತರ ಒಂದು ಪಾನ್‌ಗೆ 2 ಟೇಬಲ್ ಚಮಚ ತೆಂಗಿನೆಣ್ಣೆ, 1ಟೇಬಲ್ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕರಿಬೇವು ಸೊಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ. ಸಣ್ಣಗೆ ಹಚ್ಚಿದ ತೆಂಗಿನಕಾಯಿ ಹಾಕಿ ಕಂದು ಬಣ್ಣ ಆಗುವರೆಗೂ ಹುರಿಯಿರಿ. 2 ಹಸಿಮೆಣಸಿನ ಕಾಯಿ ಉದ್ದಕ್ಕೆ ಸೀಳಿ ಹಾಕಿ. ನಂತರ ತೆಳ್ಳಗೆ ಹಚ್ಚಿದ ನೀರುಳ್ಳಿಯನ್ನು ಸೇರಿಸಿ. ಅದಕ್ಕೆ 1/4 ಟೀ ಸ್ಪೂನ್ ಅರಿಸಿನ, 1/2 ಟೀ ಚಮಚ ಮೆಣಸಿನ ಹುಡಿ, 1 ಟೀ ಚಮಚ ಕೊತ್ತಂಬರಿ ಹುಡಿ, 1/4 ಟೀ ಚಮಚ ಸೋಂಪುಕಾಳು ಹುಡಿ ಸೇರಿಸಿ ಕೈಯಾಡಿಸಿ. ನಂತರ ಅದಕ್ಕೆ ಬೇಯಿಸಿದ ಮಟನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಗೇ ತಲಾ 1/2 ಟೀ ಚಮಚ ಗರಂ ಮಸಾಲೆ, ಕಾಳುಮೆಣಸಿನ ಹುಡಿ ಸೇರಿಸಿ ಮಟನ್ ಕಂದು ಬಣ್ಣ ಆಗುವರೆಗೂ ಕೈಯಾಡಿಸುತ್ತಾ, ಚೆನ್ನಾಗಿ ರೋಸ್ಟ್ ಮಾಡಿ. ಮತ್ತೊಂದು ಪಾನ್‌ಗೆ 1ಟೇಬಲ್ ಸ್ಪೂನ್ ತೆಂಗಿನೆಣ್ಣೆಗೆ ಸಣ್ಣಗೆ ಹಚ್ಚಿದ ತೆಂಗಿನಕಾಯಿ, ಕರೀಬೇವನ್ನು ಹಾಕಿ ಕಂದು ಬಣ್ಣಕ್ಕೆ ಹುರಿದು ಮಟನ್ ಗೆ ಸೇರಿಸಿ. ಬರಿ ಮಟನ್ ಪೀಸ್ ತೆಗೆದು ನಿಮಗೆ ಬೇಕಾದಂತೆ ಅಲಂಕರಿಸಿ ಎಲ್ಲರಿಗೂ ಬಡಿಸಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು