ಡಿಸೆಂಬರ್ 25ರಂದು ಕ್ರಿಸ್ಮಸ್ ಆಚರಿಸಲಾಗುತ್ತದೆ. ಇನ್ನೇನು ಈ ವರ್ಷದ ಕ್ರಿಸ್ಮಸ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಇದರ ಮಧ್ಯೆ ಕ್ರಿಸ್ಮಸ್ ಸಂಭ್ರಮವನ್ನು ಹೆಚ್ಚಿಸಲು ಮನೆಯಲ್ಲಿಯೇ ವಿಶೇಷವಾಗಿ ವೈನ್ ಕೇಕ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
.ರೆಡ್ ವೆಲ್ವೆಟ್ ಕಪ್ ಕೇಕ್: ಓವನ್ ಬಳಸದೆ ಮನೆಯಲ್ಲೇ ಮಾಡುವ ವಿಧಾನ ತಿಳಿಯಿರಿ .Christmas Cake: ಕ್ರಿಸ್ಮಸ್ ಸಂಭ್ರಮಕ್ಕೆ ಕೇಕ್ ಮೆರಗು.
ವೈನ್ ಕೇಕ್ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು

ಕಪ್ಪು ಒಣದ್ರಾಕ್ಷಿ, ವೈನ್, ಮೈದಾ ಹಿಟ್ಟು, ಅಡುಗೆ ಸೋಡ, ಬೆಣ್ಣೆ, ಸಕ್ಕರೆ, ಮೊಟ್ಟೆ, ವೆನಿಲ್ಲಾ ಎಸೆನ್ಸ್, ಚಾಕೊಲೇಟ್ ಕ್ಯಾರಮೆಲ್.

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಕಪ್ಪು ಒಣದ್ರಾಕ್ಷಿ, ವೈನ್ ಅನ್ನು ಮಿಶ್ರಣ ಮಾಡಿ 7 ದಿನಗಳ ಇಡಿ. ನಂತರ ಮತ್ತೊಂದು ಪಾತ್ರೆಗೆ ಮೈದಾ ಹಿಟ್ಟು, ಅಡುಗೆ ಸೋಡಾ ಮಿಶ್ರಣ ಮಾಡಿಕೊಂಡು ಇಟ್ಟುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಹ್ಯಾಂಡ್ ಬ್ಲೆಂಡರ್ನ ಸಹಾಯದಿಂದ ಮೃದು ಮಾಡಿಕೊಳ್ಳಿ. ನಂತದ ಅದೇ ಪಾತ್ರೆಗೆ ಸಕ್ಕರೆ, ಮೊಟ್ಟೆ, ವೆನಿಲ್ಲಾ ಎಸೆನ್ಸ್, ಚಾಕೊಲೇಟ್ ಕ್ಯಾರಮೆಲ್ ಹಾಕಿ ಬ್ಲೆಂಡರ್ ಸಹಾಯದಿಂದ ಮಿಕ್ಸ್ ಮಾಡಿಕೊಳ್ಳಿ. ಬಳಿಕ 7 ದಿನ ಶೇಖರಿಸಿಟ್ಟುಕೊಂಡಿದ್ದ ಕಪ್ಪು ಒಣದ್ರಾಕ್ಷಿ, ವೈನ್ ಅನ್ನು ಅದಕ್ಕೆ ಹಾಕಿ ಚಮಚದ ಸಹಾಯದಿಂದ ಮಿಶ್ರಣ ಮಾಡಿ.

ಬಳಿಕ ಕೇಕ್ ಬೇಯಿಸುವ ಪಾತ್ರೆಗೆ ಎಣ್ಣೆ ಅಥವಾ ಬೆಣ್ಣೆಯನ್ನು ಸವರಿ, ಅದರ ಮೇಲೆ ಬಟರ್ ಪೇಪರ್ ಹಾಕಿ. ನಂತರ ಬಟರ್ ಪೇಪರ್ ಮೇಲೆ ಮಿಶ್ರಣ ಮಾಡಿಟ್ಟುಕೊಂಡು, ಕೇಕ್ ಅನ್ನು ಪಾತ್ರೆಗೆ ಹಾಕಿ ಒವೆನ್ನಲ್ಲಿ 15ರಿಂದ 20 ನಿಮಿಷಗಳವರಗೆ ಬೇಯಿಸಿ. ಬಳಿಕ ನಿಮಗೆ ಬೇಕಾದ ಆಕಾದರಲ್ಲಿ ಕೇಕ್ ಅನ್ನು ಕಟ್ ಮಾಡಿ ಅದರ ಮೇಲೆ ಗೋಡಂಬಿ, ದ್ರಾಕ್ಷಿ, ಪಿಸ್ತಾ ಹಾಕಿ ಅಲಂಕರಿಸಿ. ಈಗ ವೈನ್ ಕೇಕ್ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.