ಕರ್ನಾಟಕವು ಸಾಂಪ್ರದಾಯಿಕ ಖಾದ್ಯಗಳಿಗೆ ಹೆಸರು ವಾಸಿಯಾಗಿದೆ. ಅದರಲ್ಲೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಹಲವು ಬಗೆಯ ವಿಶೇಷ ಆಹಾರಗಳನ್ನು ತಯಾರು ಮಾಡಲಾಗುತ್ತದೆ. ಈ ಖಾದ್ಯಗಳು ಹೆಚ್ಚು ರುಚಿಕರ ಹಾಗೂ ಜನಪ್ರಿಯವೂ ಹೌದು.

ಪ್ರವಾಸೋದ್ಯಮ ಇಲಾಖೆ ತಿಳಿಸಿರುವಂತೆ ಭಿನ್ನವಾದ ಆಹಾರ ಶೈಲಿ ಹೊಂದಿರುವ ಕರಾವಳಿ ಕರ್ನಾಟಕದ ಪ್ರಮುಖ ಆಹಾರ ಖಾದ್ಯಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಗೋಳಿ ಬಜೆ:

ಕರಾವಳಿ ಕರ್ನಾಟಕದ ಜನಪ್ರಿಯ ಖಾದ್ಯಗಳಲ್ಲಿ ಗೋಳಿ ಬಜೆ ಒಂದು. ಇದನ್ನು ‘ಮಂಗಳೂರು ಬೋಂಡ’ ಎಂತಲೂ ಕರೆಯುತ್ತಾರೆ. ಹೊರಗೆ ಗರಿಗರಿಯಾಗಿ ಮತ್ತು ಒಳಗೆ ಮೃದುವಾಗಿರುತ್ತದೆ. ಗೋಳಿ ಬಜೆಯನ್ನು ಮೈದಾ ಹಿಟ್ಟು, ಮೊಸರು, ತೆಂಗಿನಕಾಯಿ ತುರಿ, ಕೊತ್ತಂಬರಿ, ಶುಂಠಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಗೋಳಿ ಬಜೆಯನ್ನು ತೆಂಗಿನಕಾಯಿ ಅಥವಾ ಕೊತ್ತಂಬರಿ ಚಟ್ನಿಯೊಂದಿಗೆ ಸವಿಯಬಹುದು.

ಗೋಳಿ ಬಜೆ ಎಲ್ಲಿ ಲಭ್ಯ: ರಾಜ್ಯದಾದ್ಯಂತ ಉಡುಪಿ ಹೋಟೆಲ್ಗಳು ಸೇರಿದಂತೆ ಇತರೆ ಹೋಟೆಲ್ಗಳಲ್ಲಿ ದೊರೆಯುತ್ತದೆ.

ನೀರ್ ದೋಸೆ:

ಹಲವು ದೋಸೆಗಳ ಮಾದರಿಯಲ್ಲಿ ನೀರ್ ದೋಸೆ ಒಂದು. ನೆನೆಸಿದ ಹಿಟ್ಟಿನಿಂದ ಮಾಡುವ ದೋಸೆಯಾಗಿದೆ. ಕಾಯಿ, ಹೂವು ಹಾಗೂ ತರಕಾರಿಗಳಿಂದ ತಯಾರಿಸಿದ ಪಲ್ಯೆ ಅಥವಾ ಚಟ್ನಿಯೊಂದಿಗೆ ಸೇವಿಸಬಹುದು. ಮಾಂಸಾಹಾರ ಪ್ರಿಯರು ಚಿಕನ್ ಗ್ರೇವಿಯೊಂದಿಗೆ ನೀರ್ ದೋಸೆಯನ್ನು ಸವಿಯುತ್ತಾರೆ.

ನೀರ್ ದೋಸೆ ಎಲ್ಲಿ ಲಭ್ಯ: ಕೆಲವು ಮಲೆನಾಡು ಉಪಹಾರ ಗೃಹಗಳಲ್ಲಿ ನೀರ್ ದೋಸೆ ದೊರೆಯುತ್ತದೆ. ಬೆಂಗಳೂರಿನ ಉಪಹಾರ ಗೃಹಗಳಲ್ಲಿಯೂ ಇದು ಲಭ್ಯವಿದೆ.

ಪತ್ರೊಡೆ:

ಪತ್ರೊಡೆ ಭಿನ್ನವಾದ ಖಾದ್ಯವಾಗಿದೆ. ಪ್ರಕೃತಿಯಲ್ಲಿ ಸಿಗುವ ಕೆಸುವಿನ ಎಲೆಯಲ್ಲಿ ಪತ್ರೊಡೆ ತಯಾರಿಸಲಾಗುತ್ತದೆ.

ಪತ್ರೊಡೆ ಎಲ್ಲಿ ಲಭ್ಯ: ಹಲಸೂರಿನ ಮಂಗಳೂರು ಪರ್ಲ್ ನಲ್ಲಿ, ರೆಸಿಡೆನ್ಸಿ ರಸ್ತೆಯಲ್ಲಿರುವ ಕರಾವಳಿ ರೆಸ್ಟೋರೆಂಟ್ನಲ್ಲಿ, ಮಲ್ಲೇಶ್ವರಂನಲ್ಲಿರುವ ನಮ್ಮ ಕುಡ್ಲಾ ಎಂಬ ಜನಪ್ರಿಯ ದರ್ಶಿನಿಗಳಲ್ಲಿ ಸಿಗುತ್ತದೆ.

ಬಾಳೆ ಹಣ್ಣಿನ ಬನ್ಸ್:

ಮಂಗಳೂರು ಬಾಳೆಹಣ್ಣಿನ ಬನ್ಸ್ ಕರಾವಳಿ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ ಖಾದ್ಯವಾಗಿದೆ. ಮಾಗಿದ ಬಾಳೆಹಣ್ಣು, ಮೈದಾ ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಆಲೂಗಡ್ಡೆ ಮತ್ತು ಕ್ಯಾರೆಟ್ನಿಂದ ತಯಾರಿಸಿದ ಸಾಗು ಅಥವಾ ತೆಂಗಿನಕಾಯಿ ಚಟ್ನಿಯ ಮೂಲಕ ಬಾಳೆಹಣ್ಣಿನ ಬನ್ಸ್ ಅನ್ನು ಸೇವಿಸಲಾಗುತ್ತದೆ.

ಬಾಳೆಹಣ್ಣು ಬನ್ಸ್ ಎಲ್ಲಿ ಲಭ್ಯ: ಬೆಂಗಳೂರಿನ ಕೆಲವು ಹೋಟೆಲ್ಗಳಲ್ಲಿ ಬಾಳೆ ಬಾಳೆಹಣ್ಣು ಬನ್ ಲಭ್ಯವಿದೆ.

ಮಂಗಳೂರು ಮೀನು ಕರಿ:

ಬಂಗುಡೆ (ಮ್ಯಾಕೆರೆಲ್), ಭೂತಾಯಿ (ಸಾರ್ಡಿನ್) ಮತ್ತು ಕಾಣೆ ಮೀನು ಪ್ರಭೇದದ ಮೀನುಗಳಿಂದ ಮಂಗಳೂರು ಮೀನು ಕರಿ ತಯಾರಿಸಲಾಗುತ್ತದೆ. ನೀರು ದೋಸೆ ಮತ್ತು ಅನ್ನದ ಜೊತೆ ಮೀನು ಕರಿಯನ್ನು ಸವಿಯಲಾಗುತ್ತದೆ.

ಮಂಗಳೂರು ಮೀನು ಕರಿ ಎಲ್ಲಿ ಲಭ್ಯ: ಮಂಗಳೂರಿನ ಹೋಟೆಲ್ಗಳಲ್ಲಿ ದೊರೆಯುತ್ತದೆ. ಆನ್ಲೈನ್ ನಲ್ಲಿಯೂ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.