ಚಹಾ ಸಮಯದಲ್ಲಿ ಸವಿಯಲು ಏನಾದರೂ ಸ್ನ್ಯಾಕ್ಸ್ ಇರಬೇಕು ಎನ್ನಿಸುವುದು ಸಹಜ. ಅದಕ್ಕೇ ದಿಢೀರ್ ಆಗಿ ಏನು ಮಾಡಬಹುದು ಎನ್ನುವುದಕ್ಕೆ ಇಲ್ಲಿದೆ ರೆಸಿಪಿ.

ಆಲೂ ಲಚ್ಚಾ ಪಕೋಡಾ

ಆಲೂಗಡ್ಡೆಯನ್ನು ತುರಿದು ನೀರಿನಲ್ಲಿ 5 ನಿಮಿಷ ನೆನೆಯಲು ಬಿಡಬೇಕು. ಬಳಿಕ ನೀರಿನಂಶ ಹೋಗುವಂತೆ ಅದನ್ನು ಚೆನ್ನಾಗಿ ಹಿಂಡಿ ಬೇರೆ ಪಾತ್ರೆಗೆ ಹಾಕಬೇಕು. ಅದಕ್ಕೆ ಒಂದು ಚಮಚ ಚಿಲ್ಲಿ ಫ್ಲೇಕ್ಸ್ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಸ್ವಲ್ಪ ಅರ್ಧ ಚಮಚ ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಅರ್ಧ ಕಪ್ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಅರ್ಧ ಚಮಚ ಕಾಳುಮೆಣಸಿನ ಪುಡಿ ಬೈಂಡಿಂಗ್ಗೆ ಎರಡು ಚಮಚ ಕಾರ್ನ್ಫ್ಲೋರ್ 3 ಚಮಚ ಮೈದಾಹಿಟ್ಟು ಹಾಕಿ ಮತ್ತೆ ಚೆನ್ನಾಗಿ ಕಲಸಬೇಕು. ಅದನ್ನು ಕೈಯಲ್ಲಿ ವಡೆ ರೀತಿ ತಟ್ಟಿಕೊಂಡು ಎಣ್ಣೆಯಲ್ಲಿ ಕರಿದರೆ ಆಲೂ ಲಚ್ಚಾ ಪಕೋಡ ಸಿದ್ಧ. ಟೊಮೆಟೊ ಕೆಚಪ್ ಅಥವಾ ಪುದೀನ ಚಟ್ನಿ ಜೊತೆ ಸವಿಯಬಹುದು.

ಬೇಬಿಕಾರ್ನ್ 65

ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಬಿಡಬೇಕು. ಅದಕ್ಕೆ 200 ಗ್ರಾಂ ಬೇಬಿಕಾರ್ನ್ ಹಾಕಿ 3ರಿಂದ 4 ನಿಮಿಷ ಬೇಯಿಸಬೇಕು. ಬಳಿಕ ಅದನ್ನು ಹೊರತೆಗೆದು ಉದ್ದುದ್ದ ಹೆಚ್ಚಿಟ್ಟುಕೊಳ್ಳಬೇಕು. ಇದಕ್ಕೆ ಅರ್ಧ ಚಮಚ ಜೀರಿಗೆ ಪುಡಿ ಒಂದು ಚಮಚ ಕೆಂಪುಮೆಣಸಿನ ಪುಡಿ ಅರ್ಧ ಚಮಚ ದನಿಯಾ ಪುಡಿ ಕಾಲು ಚಮಚ ಅರಸಿನ ರುಚಿಗೆ ಉಪ್ಪು ಒಂದು ಚಮಚ ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ ರೆಡ್ ಚಿಲ್ಲಿಸಾಸ್ ಎರಡು ದೊಡ್ಡ ಚಮಚ ಮೊಸರು ಮೂರ್ನಾಲ್ಕು ಹಸಿಮೆಣಸಿನಕಾಯಿಗಳನ್ನು ಉದ್ದಕ್ಕೆ ಸೀಳಿ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಅರ್ಧ ಕಪ್ ಮೈದಾಹಿಟ್ಟು ಕಾಲು ಕಪ್ ಕಾರ್ನ್ಫ್ಲೋರ್ ಚಿಟಿಕೆ ಉಪ್ಪು ಚಿಟಿಕೆ ಕಾಳುಮೆಣಸಿನ ಪುಡಿ ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ಮಸಾಲೆಭರಿತ ಬೇಬಿಕಾರ್ನ್ಗೆ ಹಾಕಿ ಕೋಟಿಂಗ್ ಕೊಡಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಇಟ್ಟು ದೊಡ್ಡ ಉರಿಯಲ್ಲಿ ಕರಿದರೆ ‘ಬೇಬಿಕಾರ್ನ್ 65’ ರೆಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.