ರಸ್ತೆ ಬದಿಯಲ್ಲಿ ಮಾರುವ ಪಾನಿಪುರಿ, ಗೋಲ್ಗಪ್ಪ, ಮಿರ್ಚಿ ಬಜ್ಜಿ, ಮೊಮೊಸ್ಗಳಂತಹ ತಿಂಡಿಗಳೆಂದರೆ ಪಟ್ಟಣವಾಸಿಗಳೇ ಅದೇನೋ ಪ್ರೀತಿ. ಬೀದಿ ಬದಿ ಆಹಾರಗಳು ಆರೋಗ್ಯಕ್ಕೆ ಹಾನಿಕಾರ ಎಂದು ತಿಳಿದಿದ್ದರೂ ಅದನ್ನು ತಿನ್ನುವುದನ್ನು ಬಿಡುವುದಿಲ್ಲ. ಆದರೆ ಏನು ಮಾಡುವುದು ಲಾಕ್ಡೌನ್ ಕಾರಣದಿಂದ ಬೀದಿ ಬದಿಯಲ್ಲಿ ಸಿಗುವ ಪಾನಿಪುರಿ, ಮೊಮೊಸ್ನಂತಹ ಸ್ನ್ಯಾಕ್ಸ್ ತಿನ್ನುವುದಕ್ಕೆ ಬ್ರೇಕ್ ಬಿದಿದ್ದೆ. ಅಂತಹ ತಿಂಡಿಗಳನ್ನು ಅನೇಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವುಗಳನ್ನು ಸುಲಭವಾಗಿ ಮನೆಯಿಂದಲೇ ತಯಾರಿಸಬಹುದು.

ವೆಜ್ ಮೊಮೊಸ್

ಬೇಕಾಗುವ ಸಾಮಗ್ರಿಗಳು:
ಸೋಯಾ ಸಾಸ್ – 2 ಟೇಬಲ್ ಚಮಚ
ಅಣಬೆ – 12 ತುಂಡು (ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಕೊಂಡಿದ್ದು)
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಲೆಕೋಸು – 1 ಗೆಡ್ಡೆ
ಪನ್ನೀರ್ – 300 ಗ್ರಾಂ
ಶುಂಠಿ – 2 ಇಂಚು
ನೀರು – 1ಕಪ್
ಮೈದಾಹಿಟ್ಟು – 2 ಕಪ್
ಬೆಳ್ಳುಳ್ಳಿ – 4 ಎಸಳು
ಈರುಳ್ಳಿ – 2 ಮಧ್ಯಮ ಗಾತ್ರದ್ದು

ತಯಾರಿಸುವ ವಿಧಾನ: ಮೊದಲು ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಅಣಬೆ, ಪನ್ನೀರು, ಎಲೆಕೋಸು ಹಾಗೂ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಹೆಚ್ಚಿಕೊಳ್ಳಿ. ಹೆಚ್ಚಿದ ಮೇಲೆ ಎಲ್ಲವನ್ನು ಪಾತ್ರೆಯೊಂದರಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆ ಮಿಶ್ರಣಕ್ಕೆ ಸೋಯಾ ಸಾಸ್ ಹಾಕಿ ಚೆನ್ನಾಗಿ ಕಲೆಸಿ ಬದಿಗಿಡಿ. ನಂತರ ಮೈದಾಹಿಟ್ಟಿಗೆ ನೀರು ಸೇರಿಸಿ ಚೆನ್ನಾಗಿ ಕಲೆಸಿಕೊಂಡು ಹಿಟ್ಟು ತಯಾರಿಸಿಕೊಳ್ಳಿ. ಪಾತ್ರೆಯನ್ನು ಮುಚ್ಚಿ ಬದಿಗಿಡಿ. ಹಿಟ್ಟಿನಿಂದ ಉಂಡೆ ಮಾಡಿಕೊಂಡು ಚಿಕ್ಕ ಚಿಕ್ಕ ಚಪಾತಿ ಲಟ್ಟಿಸಿಕೊಳ್ಳಿ. ಆ ಚಪಾತಿಯೊಳಗೆ ಮಿಶ್ರಣ ಮಾಡಿಕೊಂಡ ತರಕಾರಿಗಳನ್ನು ತುಂಬಿ. ಮೊಮೊ ಆಕಾರಕ್ಕೆ ಮಡಿಚಿಕೊಳ್ಳಿ. ಸಂಪೂರ್ಣವಾಗಿ ಎಲ್ಲಿಯೂ ಗಾಳಿಯಾಡದಂತೆ ಹಿಟ್ಟನ್ನು ಮಡಚಿಕೊಳ್ಳಿ. ನಂತರ ಸ್ಟೀಮರ್ನಲ್ಲಿ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಈಗ ಬಿಸಿಯಾದ ಮೊಮೊ ತಿನ್ನಲು ರೆಡಿಯಾಗಿರುತ್ತದೆ.

ಚಿಕನ್ ಮೊಮೊಸ್
ಬೇಕಾಗುವ ಸಾಮಗ್ರಿಗಳು:
ಮೈದಾಹಿಟ್ಟು – 300 ಗ್ರಾಂ
ಎಣ್ಣೆ – 1 ಟೇಬಲ್ ಚಮಚ
ಈರುಳ್ಳಿ – 1 ದೊಡ್ಡದು
ಶುಂಠಿ – 1 ಇಂಚು
ನೀರು – 1ಕಪ್
ಬೇಯಿಸಿದ ಚಿಕನ್ ತುಂಡುಗಳು – 300 ಗ್ರಾಂ
ಹಸಿಮೆಣಸು – 1
ಉಪ್ಪು – ರುಚಿಗೆ
ಸೋಯಾ ಸಾಸ್ – 1 ಟೀ ಚಮಚ

ತಯಾರಿಸುವ ವಿಧಾನ:ಈರುಳ್ಳಿ, ಶುಂಠಿ ಹಾಗೂ ಹಸಿಮೆಣಸಿನ ಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದುಕೊಂಡು ಪಾತ್ರೆ ಅಥವಾ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಬೇಯಿಸುವಾಗಲೇ ಸ್ವಲ್ಪ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ. ಫ್ಲೇವರ್ಗೆ ಬೇಕಾದರೆ ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿಮೆಣಸಿನ ಪೇಸ್ಟ್ ಸೇರಿಸಬಹುದು. ಚಿಕನ್ ಬೆಂದ ಮೇಲೆ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬೇರೊಂದು ಪಾತ್ರೆಗೆ ಹಿಟ್ಟು, ಎಣ್ಣೆ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ನೀರು ಸೇರಿಸಿ ಗಂಟಿಲ್ಲದಂತೆ ಹಿಟ್ಟು ತಯಾರಿಸಿಕೊಳ್ಳಿ. ಬೇರೊಂದು ಪಾತ್ರೆಯಲ್ಲಿ ಹೆಚ್ಚಿಕೊಂಡ ತರಕಾರಿ ಹಾಗೂ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಹಿಟ್ಟಿನಿಂದ ಉಂಡೆ ಮಾಡಿ ಚಿಕ್ಕ ಚಿಕ್ಕ ಚಪಾತಿ ತಯಾರಿಸಿಕೊಳ್ಳಿ. ಚಪಾತಿ ಮಧ್ಯಕ್ಕೆ ತರಕಾರಿ ಹಾಗೂ ಚಿಕನ್ ಮಿಶ್ರಣವನ್ನು ಸೇರಿಸಿ ಗಾಳಿಯಾಡದಂತೆ ಮೊಮೊ ಆಕಾರಕ್ಕೆ ಮಡಚಿ. ನಂತರ ಸ್ಟೀಮರ್ನಲ್ಲಿ 25 ನಿಮಿಷ ಬೇಯಿಸಿಕೊಳ್ಳಿ.

ಮೊಮೊ ಚಟ್ನಿ

ಬೇಕಾಗುವ ಸಾಮಗ್ರಿಗಳು
ಒಣಮೆಣಸು – 10
ಬೆಳ್ಳುಳ್ಳಿ – 10 ಎಸಳು
ಆಲಿವ್ ಎಣ್ಣೆ – 3 ಟೀ ಚಮಚ
ಕಾಳುಮೆಣಸು – ಚಿಟಿಕೆ (ಅಗತ್ಯವಿದ್ದರೆ ಮಾತ್ರ)
ಟೊಮೆಟೊ – 3
ಸಕ್ಕರೆ – 3 ಟೀ ಚಮಚ
ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಒಣಮೆಣಸನ್ನು ಮೊದಲೇ 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಟೊಮೆಟೊ ಹಣ್ಣನ್ನು ಬೇಯಿಸಿಕೊಳ್ಳಿ. ಬೆಂದ ಟೊಮೊಟೊ ಹಣ್ಣನ್ನು ಸಿಪ್ಪೆ ತೆಗೆದುಕೊಳ್ಳಿ. ಮಿಕ್ಸಿ ಜಾರಿಗೆ ನೆನೆಸಿದ ಒಣಮೆಣಸು, ಟೊಮೆಟೊ, ಆಲಿವ್ ಎಣ್ಣೆ, ಸಕ್ಕರೆ ಹಾಗೂ ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಮೊಮೊಗೆ ಚಟ್ನಿ ತೀರಾ ತಳ್ಳಗೆ ಅಥವಾ ತೀರಾ ಗಟ್ಟಿಯಾಗಿಯೂ ಇರಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.