ಬದನೆಕಾಯಿಯಿಂದ ತಯಾರಿಸುವ ಗೊಜ್ಜು, ಪಲ್ಯ, ಎಣ್ಣೆಗಾಯಿ ಹೀಗೆ ನಾನಾ ವಿಧಗಳ ರೆಸಿಪಿ ಬಗ್ಗೆ ತಿಳಿದಿರುತ್ತೇವೆ. ಊಟದ ಜೊತೆ ಸವಿಯಬಹುದಾದ ಬದನೆಕಾಯಿ ಫ್ರೈ ಬಗ್ಗೆ ತಿಳಿದುಕೊಳ್ಳಿ. ಇಲ್ಲಿದೆ ರೆಸಿಪಿ.

ಬದನೆಕಾಯಿ ಫ್ರೈ ಮಾಡಲು ಬೇಕಾಗುವ ಸಾಮಗ್ರಿಗಳು

ದೊಡ್ಡ ನೇರಳೆ ಬಣ್ಣದ ಬದನೆಕಾಯಿ-1
ಖಾರದ ಪುಡಿ - 2 ಚಮಚ
ಕಡಲೆ ಹಿಟ್ಟು- ಕಾಲು ಕಪ್
ಉಪ್ಪು– ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ –6 ರಿಂದ 7 ಚಮಚ

ಮಾಡುವ ವಿಧಾನ: ಬದನೆಕಾಯಿಯನ್ನು ತೊಳೆದುಕೊಂಡು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ. ನಂತರ ಒಂದು ಪಾತ್ರೆಗೆ ಖಾರದ ಪುಡಿ, ಕಡಲೆ ಹಿಟ್ಟು, ಉಪ್ಪು ಹಾಗೂ 5–6 ಚಮಚ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಈ ಮಿಶ್ರಣವನ್ನು ಕತ್ತರಿಸಿಕೊಂಡ ಬದನೆಕಾಯಿಯ ಎರಡು ಬದಿಯಲ್ಲಿ ಹಚ್ಚಿಕೊಳ್ಳಿ.

ಬಳಿಕ, ತವಾದ ಮೇಲೆ ಎಣ್ಣೆ ಸವರಿಕೊಳ್ಳಿ. ತವಾ ಬಿಸಿಯಾದ ನಂತರ ಹಿಟ್ಟು ಸವರಿದ ಬದನೆಕಾಯಿಯನ್ನು ಅದರ ಮೇಲೆ ಹಾಕಿ. ಒಂದು ಬದಿ ಕೆಂಪಗಾದ ನಂತರ ಇನ್ನೊಂದು ಬದಿಗೆ ತಿರುಗಿಸಿ. ಚೆನ್ನಾಗಿ ಕೆಂಪಗಾದ ಮೇಲೆ ತವಾದಿಂದ ತೆಗೆದು ಬಟ್ಟಲಿಗೆ ಹಾಕಿಕೊಂಡರೆ ಬದನೆಕಾಯಿ ಫ್ರೈ ಸವಿಯಲು ಸಿದ್ಧ.

ಇದನ್ನು ಊಟದ ಜೊತೆಗೆ ತಿನ್ನಬಹುದು ಅಥವಾ ಸ್ನ್ಯಾಕ್ಸ್ ರೀತಿಯಲ್ಲಿ ತೆಂಗಿನ ಕಾಯಿ ಚಟ್ನಿಯೊಂದಿಗೂ ಸವಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.