ಈಗ ಮಳೆಗಾಲ. ಈಗ ಕೆಸುವಿನ ಎಲೆ ಎಲ್ಲಾ ಕಡೆಯೂ ಸಿಗುವ ಸಮಯ. ಅದರಿಂದ ಪತ್ರೊಡೆ, ಖಾರ ಉಸ್ಲಿ, ಸಿಹಿ ಉಸ್ಲಿ, ಪತ್ರೊಡೆ ಬೆಂದಿ ಮುಂತಾದ ಖಾದ್ಯಗಳನ್ನು ಮಾಡಬಹುದು. ಕೆಸುವಿನ ಎಲೆಯಲ್ಲಿ ಹಲವು ರೀತಿಯ ಪೌಷ್ಟಿಕಾಂಶವಿದೆ. ಮಳೆಗಾಲದಲ್ಲಿ ಇದನ್ನು ಆಗಾಗ್ಗೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಪತ್ರೊಡೆ
ಬೇಕಾಗುವ ವಸ್ತುಗಳು : 1 ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ಕುಚ್ಚಲಕ್ಕಿ, 1 ಹಿಡಿ ಉದ್ದಿನಬೇಳೆ ಅಥವಾ ½ ಕಪ್ ತೆಂಗಿನತುರಿ, ಸಣ್ಣ ನಿಂಬೆ ಗಾತ್ರದ ಹುಳಿ, ಸಣ್ಣ ತುಂಡು ಬೆಲ್ಲ, 3-4 ಕೆಂಪು ಮೆಣಸು, ¼ ಚಮಚ ಜೀರಿಗೆ ಅರಸಿನ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಅಕ್ಕಿಯನ್ನು ತೊಳೆದು 6 ಗಂಟೆ ನೆನೆಸಿ. ಉದ್ದಿನಬೇಳೆ ಪ್ರತ್ಯೇಕ ನೆನೆಸಿ. ಉದ್ದಿನಬೇಳೆ ತೊಳೆದು, ಮೆಣಸು, ಜೀರಿಗೆ, ಹುಳಿ, ಉಪ್ಪು, ಬೆಲ್ಲ, ಅರಸಿನ ಸೇರಿಸಿ ನುಣ್ಣಗೆ ರುಬ್ಬಿ. ಅಕ್ಕಿ ರುಬ್ಬುವಾಗ ಅರೆದ ಖಾರದ ಮಿಶ್ರಣ ಸೇರಿಸಿ. ನಂತರ ಕೆಸುವಿನ ಎಲೆಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಹಿಟ್ಟಿಗೆ ಸೇರಿಸಿ. ನಂತರ ಬಾಡಿಸಿದ ಒರೆಸಿದ ಬಾಳೆಲೆಗೆ 4 ಸೌಟು ಹಿಟ್ಟು ಹಾಕಿ ದಪ್ಪಗೆ ಮಡಿಸಿ ಉಗಿಯಲ್ಲಿ 1 ಗಂಟೆ ಬೇಯಿಸಿ.

ಪತ್ರೊಡೆ ಖಾರ ಉಸ್ಲಿ

ಬೇಕಾಗುವ ವಸ್ತುಗಳು : 2 ಪತ್ರೊಡೆ, 2 ಈರುಳ್ಳಿ, 2 ಹಸಿಮೆಣಸು, ½ ತೆಂಗಿನಕಾಯಿ, 2 ಚಮಚ ಉದ್ದಿನಬೇಳೆ., 1 ಚಮಚ ಸಾಸಿವೆ, 1 ಕೆಂಪುಮೆಣಸು, 4 ಚಮಚ ಎಣ್ಣೆ, 1 ಎಸಳು ಕರಿಬೇವು.
ಮಾಡುವ ವಿಧಾನ: ಪತ್ರೊಡೆಯನ್ನು ಪುಡಿ ಮಾಡಿ. ಈರುಳ್ಳಿ ಸಣ್ಣಗೆ ಹೆಚ್ಚಿ. ಹಸಿಮೆಣಸು ಸಿಗಿದು ಇಡಿ. ಒಲೆ ಮೇಲೆ ಬಾಣಲೆ ಇಟ್ಟು ಸಾಸಿವೆ ಹಾಕಿ. ನಂತರ ಸಿಡಿದಾಗ ಕರಿಬೇವು, ಈರುಳ್ಳಿ ಹಸಿಮೆಣಸು ಹಾಕಿ. ಕೆಂಪಗೆ ಹುರಿದು ನಂತರ ಸೇರಿಸಿ ತೊಳಸಿ, ಬಿಸಿಯಾಗುತ್ತಿದ್ದಂತೆಯೇ ಕಾಯಿತುರಿ ಬೆರೆಸಿ. ಈಗ ರುಚಿಯಾದ ಖಾರ ಉಸ್ಲಿ ಸವಿಯಾಲು ಸಿದ್ಧ.

ಪತ್ರೊಡೆ ಬೆಂದಿ
ಬೇಕಾಗುವ ವಸ್ತುಗಳು : 2 ಪತ್ರೊಡೆ, ½ ತೆಂಗಿನಕಾಯಿ, 1 ಚಮಚ ಜೀರಿಗೆ, 2 ಕೆಂಪುಮೆಣಸು.
ಮಾಡುವ ವಿಧಾನ: ಪತ್ರೊಡೆಯನ್ನು ತುಂಡು ಮಾಡಿ ಇಡಿ. ತೆಂಗಿನಕಾಯಿ ತುರಿದು, ಜೀರಿಗೆ, ಕೆಂಪು ಮೆಣಸು ಸೇರಿಸಿ ನೀರು ಹಾಕಿ ರುಬ್ಬಿ. ಒಂದು ಪಾತ್ರೆಗೆ ರುಬ್ಬಿದ ತೆಂಗಿನತುರಿ, ಚಿಟಿಕೆ ಉಪ್ಪು ಹಾಕಿ ಸೌಟಿನಿಂದ ತೊಳಸುತ್ತಾ ಕುದಿಸಿ. ನಂತರ ತುಂಡು ಮಾಡಿದ ಪತ್ರೊಡೆಯನ್ನು ಹಾಕಿ ಉರಿ ನಂದಿಸಿ. ಒಮ್ಮೆ ಚೆನ್ನಾಗಿ ಮಗುಚಿ ಸ್ವಲ್ಪ ಹೊತ್ತು ಮುಚ್ಚಿಡಿ. ಪತ್ರೊಡೆ ಚೆನ್ನಾಗಿ ಕಾಯಿರಸ ಹೀರಿಕೆಂಡು ರುಚಿಯಾಗಿರುತ್ತದೆ.

ಪತ್ರೊಡೆ ಸಿಹಿ ಉಸ್ಲಿ

ಬೇಕಾಗುವ ವಸ್ತುಗಳು : 2 ಪತ್ರೊಡೆ, ½ ತೆಂಗಿನಕಾಯಿ ತುರಿ, ¼ ಕಪ್ ಬೆಲ್ಲ, 4 ಚಮಚ ಎಣ್ಣೆ, 2 ಚಮಚ ಉದ್ದಿನಬೇಳೆ, 1 ಚಮಚ ಸಾಸಿವೆ, 1 ಕೆಂಪುಮೆಣಸು, 1 ಎಸಳು ಕರಿಬೇವು.

ಮಾಡುವ ವಿಧಾನ : ಪತ್ರೊಡೆಯನ್ನು ಪುಡಿ ಮಾಡಿ. ಬೆಲ್ಲ ಜಜ್ಜಿ ಕಾಯಿತುರಿ ಸೇರಿಸಿ ಬೆರೆಸಿ. ನಂತರ ಪತ್ರೊಡೆಯೊಂದಿಗೆ ಬೆರೆಸಿ. ಒಲೆಯ ಮಲೆ ಬಾಣಲೆಯಿಟ್ಟು ಎಣ್ಣೆ ಹಾಕಿ. ಬೆಸಿಯಾದಾಗ ಸಾಸಿವೆ, ಉದ್ದಿನಬೇಳೆ ಕೆಂಪುಮೆಣಸು, ಕರಿಬೇವು ಹಾಕಿ ಸಿಡಿಸಿ. ನಂತರ ಬೆರೆಸಿದ ಪತ್ರೊಡೆ ಹಾಕಿ ತೊಳಸಿ. ಬಿಸಿಯಾದಾಗ ಒಲೆಯಿಂದ ಇಳಿಸಿ. ತಾಜಾ ತುಪ್ಪ ಸೇರಿಸಿ ತಿನ್ನಲು ರುಚಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.