ಅಡುಗೆಮನೆ ಎಂಬುದು ಸದಾ ಹೊಸತನಕ್ಕೆ ತೆರೆದುಕೊಂಡ ಪ್ರಯೋಗಶಾಲೆ. ಯಾರಾದರೂ ನೆಂಟರು– ಆಪ್ತೇಷ್ಟರು ದಿಢೀರ್ ಎಂದು ಮನೆಗೆ ಬಂದರೆ, ಏನು ಮಾಡುವುದು ಎಂಬುದು ತರಾತುರಿಯಲ್ಲಿ ಹೊಳೆಯುವುದೇ ಇಲ್ಲ. ಇಂತಹ ಸಂದರ್ಭಗಳಲ್ಲಿ, ಹೊರಗಿನಿಂದ ಕುರುಕಲು ತಿಂಡಿ ತರುವುದಕ್ಕಿಂತ ಮನೆಯಲ್ಲಿ ಲಭ್ಯವಿರುವ ಸಾಮಗ್ರಿಗಳಲ್ಲಿಯೇ ಅಚ್ಚುಕಟ್ಟಾಗಿ ಮಾಡಬಹುದಾದ ವಿಶೇಷ ತಿನಿಸುಗಳ ರೆಸಿಪಿಗಳು ಇಲ್ಲಿವೆ.

ಆ್ಯಪಲ್ ಡಿಲೈಟ್

ಸೇಬು ಹಣ್ಣಿನಿಂದ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಆ್ಯಪಲ್ ಡಿಲೈಟ್ ಅನ್ನು ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿ: ಸೇಬು 2, ಹಾಲು 1/2 ಲೀಟರ್, ಕಾರ್ನ್ಪ್ಲೋರ್ 1/4 ಕಪ್, ಸಕ್ಕರೆ 1/2 ಕಪ್, ಚೆಕ್ಕೆ ಪುಡಿ 1/4 ಟೀ ಚಮಚ, ಬೆಣ್ಣೆ 1 ಟೇಬಲ್ ಚಮಚ.

ತಯಾರಿಸುವ ವಿಧಾನ: ಒಂದು ಸೇಬನ್ನು ಬೀಜ ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಅದಕ್ಕೆ ಹಾಲು ಹಾಕಿ ನುಣ್ಣಗೆ ರುಬ್ಬಿಕೊಂಡು, ಸೋಸಿಕೊಳ್ಳಿ. ಬಳಿಕ ಬಾಣಲೆಗೆ ಹಾಕಿ, ಅದಕ್ಕೆ ಕಾರ್ನ್ಫ್ಲೋರ್ ಮತ್ತು ಸಕ್ಕರೆ ಸೇರಿಸಿ ಒಲೆಯ ಮೇಲಿಟ್ಟು, ಮಧ್ಯಮ ಉರಿಯಲ್ಲಿ 5– 6 ನಿಮಿಷ ಮಗುಚಿ. ದಪ್ಪಗಿನ ಹದ ಬಂದಾಗ ಒಲೆಯಿಂದ ಇಳಿಸಿ. ಚಿಕ್ಕ ಚಿಕ್ಕ ಬೌಲಿಗೆ ಹಾಕಿ ಅರ್ಧ ಗಂಟೆ ಫ್ರೀಜರ್ನಲ್ಲಿಡಿ. ಮತ್ತೊಂದು ಸೇಬಿನ ಸಿಪ್ಪೆ ಮತ್ತು ಬೀಜವನ್ನು ತೆಗೆದು, ಚಿಕ್ಕದಾಗಿ ಕತ್ತರಿಸಿಕೊಂಡು ಬಾಣಲೆಗೆ ಹಾಕಿ. ಅದಕ್ಕೆ ಬೆಣ್ಣೆ, ಚೆಕ್ಕೆ ಪುಡಿ, ಒಂದು ಟೇಬಲ್ ಚಮಚ ಸಕ್ಕರೆ ಹಾಕಿ ಮೆತ್ತಗಾಗುವರೆಗೆ ಹುರಿಯಿರಿ. ಫ್ರೀಜರ್ನಿಂದ ಆ್ಯಪಲ್ ಡಿಲೈಟ್ ಹೊರತೆಗೆದು, ಹುರಿದ ಸೇಬಿನ ಹಣ್ಣಿನ ಮಿಶ್ರಣವನ್ನು ಸೇರಿಸಿ.

ಎಲೆಕೋಸಿನ ಪತ್ರೊಡೆ

ಪತ್ರೊಡೆ ಎಂದ ಕೂಡಲೆ ಸಹಜವಾಗಿ ಎಲ್ಲರಿಗೂ ನೆನಪಿಗೆ ಬರುವುದು ಕೆಸುವಿನ ಪತ್ರೊಡೆ. ಕರಾವಳಿ ಮತ್ತು ಮಲೆನಾಡಿನ ಭಾಗದ ಜನರಿಗೆ ಈ ಪತ್ರೊಡೆ ಚಿರಪರಿಚಿತ. ಆದರೆ ಪತ್ರೊಡೆ ತಿನ್ನಬೇಕು ಅನ್ನಿಸಿದಾಗ, ಕೆಸು ಸಿಗದಿದ್ದರೂ ಇಲ್ಲಿ ತಿಳಿಸಿರುವ ರೀತಿ ಎಲೆಕೋಸಿನ ಪತ್ರೊಡೆ ತಯಾರಿಸಿ ಸವಿಯಬಹುದು.

ಬೇಕಾಗುವ ಸಾಮಗ್ರಿ: ಅಕ್ಕಿ 1 ಕಪ್, ಕಡಲೆಬೇಳೆ 3 ಟೇಬಲ್ ಚಮಚ, ಉದ್ದಿನಬೇಳೆ 2 ಟೇಬಲ್ ಚಮಚ, ಮೆಂತ್ಯ 1/2 ಟೇಬಲ್ ಚಮಚ, ದನಿಯಾ 2 ಟೇಬಲ್ ಚಮಚ, ಜೀರಿಗೆ 1 ಟೇಬಲ್ ಚಮಚ, ಒಣಮೆಣಸಿನಕಾಯಿ 8– 10, ಅರಸಿನ 1/2 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹುಣಸೆಹಣ್ಣು ನಿಂಬೆ ಗಾತ್ರದಷ್ಟು, ಬೆಲ್ಲ 1 ಟೇಬಲ್ ಚಮಚ, ತೆಂಗಿನತುರಿ 1 ಕಪ್, ಎಲೆಕೋಸಿನ ಎಲೆಗಳು 6, ಎಣ್ಣೆ 2– 3 ಟೇಬಲ್ ಚಮಚ.

ಒಗ್ಗರಣೆಗೆ: ಎಣ್ಣೆ 1 ಟೇಬಲ್ ಚಮಚ, ಸಾಸಿವೆ, ಎಳ್ಳು, ತಲಾ 1 ಟೀ ಚಮಚ, ಇಂಗು 1/4 ಟೀ ಚಮಚ, ಕರಿಬೇವಿನ ಎಲೆ 10.

ತಯಾರಿಸುವ ವಿಧಾನ: ಅಕ್ಕಿ ಮತ್ತು ಬೇಳೆಗಳನ್ನು ಬಟ್ಟಲಿಗೆ ಹಾಕಿ ಚೆನ್ನಾಗಿ ತೊಳೆದು ನೀರನ್ನು ಸೋಸಿಕೊಳ್ಳಿ. ಜೊತೆಗೆ ಮೆಂತ್ಯ, ದನಿಯಾ, ಜೀರಿಗೆ, ಒಣಮೆಣಸಿನಕಾಯಿ ಸೇರಿಸಿ ಒಂದೂವರೆ ಕಪ್ ನೀರು ಹಾಕಿ ಮೂರು ಗಂಟೆ ನೆನೆಸಿಡಿ. ಬಳಿಕ ನೀರು ಸಹಿತ ಮಿಕ್ಸಿ ಜಾರಿಗೆ ಹಾಕಿ. ಅರಸಿನ, ಉಪ್ಪು, ಹುಣಸೆಹಣ್ಣು, ಬೆಲ್ಲ, ತೆಂಗಿನತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಎಲೆಕೋಸನ್ನು ಬಿಡಿಸಿ ದೊಡ್ಡದಾದ, ಚೆನ್ನಾಗಿರುವ 6 ಎಲೆಗಳನ್ನು ಆರಿಸಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಎಲೆಕೋಸಿನ ಮೇಲೆ ಹರಡಿ. ಒಂದರ ಮೇಲೆ ಒಂದರಂತೆ ಮೂರು ಎಲೆಗೆ ಮಸಾಲೆ ಪೇಸ್ಟ್ ಹಚ್ಚಿ. ಹೀಗೆ ಉಳಿದ ಎಲೆಗಳಿಗೂ ಮಸಾಲೆ ಪೇಸ್ಟ್ ಹಚ್ಚಿ. ಬಳಿಕ ಸುರುಳಿ ಸುತ್ತಿ ಹಬೆಯಲ್ಲಿ 15 ನಿಮಿಷ ಬೇಯಿಸಿ. ಆರಿದ ನಂತರ ನಿಧಾನವಾಗಿ ಕತ್ತರಿಸಿಕೊಳ್ಳಿ. ತವಾಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಸಣ್ಣ ಉರಿಯಲ್ಲಿ ಕೆಂಬಣ್ಣ ಬರುವವರೆಗೆ ಎರಡೂ ಬದಿ ಬೇಯಿಸಿ ತೆಗೆದಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ತಯಾರಿಸಿ. ಇದನ್ನು ಪತ್ರೊಡೆ ಮೇಲೆ ಉದುರಿಸಿ. ರುಚಿಕರ ಮತ್ತು ಆರೋಗ್ಯಕರವಾದ ಪತ್ರೊಡೆ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.