ಶನಿವಾರ, ಜೂನ್ 6, 2020
27 °C

ರೆಸಿಪಿ | ದಹಿ ಕಬಾಬ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೌಕ್‌ಡೌನ್‌ ಕಾರಣದಿಂದ ಮನೆಯ ಒಳಗೇ ಇರುವ ಅನಿವಾರ್ಯತೆ ಎದುರಾಗಿದೆ. ಅಡುಗೆ ಮಾಡುವುದು ನಿಮ್ಮ ಹವ್ಯಾಸವಾದರೆ ಇಲ್ಲಿದೆ ದಹಿ ಕಬಾಬ್‌ ಮಾಡುವ ರೆಸಿಪಿ.

ಬೇಕಾಗುವ ಸಾಮಗ್ರಿಗಳು
ದಹಿ ಕಬಾಬ್‌ಗೆ:
ಬ್ರೆಡ್‌ – 12 ತುಂಡುಗಳು
ಮೊಸರು – ಅರ್ಧ ಲೀಟರ್‌
ದೊಣ್ಣೆಮೆಣಸಿನಕಾಯಿ – 1 (ಚಿಕ್ಕದಾಗಿ ಹೆಚ್ಚಿಕೊಂಡಿದ್ದು)
ಶುಂಠಿ – ಒಂದು ಇಂಚು ಉದ್ದದ್ದು (ಚಿಕ್ಕದಾಗಿ ಹೆಚ್ಚಿಕೊಂಡಿದ್ದು)‌
ಹಸಿಮೆಣಸು – 2 ರಿಂದ 3 (ಚಿಕ್ಕದಾಗಿ ಹೆಚ್ಚಿಕೊಂಡಿದ್ದು)
ಸಕ್ಕರೆ ಪುಡಿ – 100 ಗ್ರಾಂ
ಜೇನುತುಪ್ಪ – 2 ಟೇಬಲ್ ಚಮಚ
ಉಪ್ಪು – ರುಚಿಗೆ

ಕರಿಯಲು:
ಪೀರ್ ಹಾಗೂ ವಾಲ್‌ನಟ್ ಸಲಾಡ್‌ಗೆ:
ಮಧ್ಯಮ ಗಾತ್ರದ ಪೀರ್ – 1
ನೀರು – 50 ಮಿಲಿ ಲೀಟರ್‌
ಸಕ್ಕರೆ – 2 ಟೇಬಲ್ ಚಮಚ
ಈರುಳ್ಳಿ ಬೀಜ – 1‌2 ಟೀ ಚಮಚ
ಸೋಂಪು – 1‌4 ಟೀ ಚಮಚ
ವಾಲ್‌ನಟ್‌ – 4
ಕೊತ್ತಂಬರಿ ಸೊಪ‍್ಪು – ಸ್ವಲ್ಪ
ಚೀಸ್ – 1 ಟೇಬಲ್ ಚಮಚ
ಹುಣಸೆರಸ – 2 ಟೇಬಲ್ ಚಮಚ
ಉಪ್ಪು – ರುಚಿಗೆ

ತಯಾರಿಸುವ ವಿಧಾನ
ದಹಿ ಕಬಾಬ್‌ಗೆ ಮಾಡಲು ತಿಳಿಸಿರುವ ಸಾಮಗ್ರಿಗಳಲ್ಲಿ ಬ್ರೆಡ್ ಹೊರತುಪಡಿಸಿ ಉಳಿದ ಎಲ್ಲಾ ಸಾಮಗ್ರಿಗಳನ್ನು ಪಾತ್ರೆಯೊಂದರಲ್ಲಿ ಹಾಕಿ ಕಲೆಸಿ. ರೋಲಿಂಗ್ ಪಿನ್ ಸಹಾಯದಿಂದ ಬ್ರೆಡ್‌ನ ತುಂಡುಗಳನ್ನು ರೋಲ್ ಮಾಡಿ. ನಂತರ ಅದನ್ನು ಮೊಸರಿನ ಮಿಶ್ರಣದಲ್ಲಿ ಅದ್ದಿ. ನಂತರ ಅಚ್ಚಿನಲ್ಲಿ ಹಾಕಿ ಬೇಕಾದ ಆಕಾರಕ್ಕೆ ಮಾಡಿಟ್ಟುಕೊಳ್ಳಿ. ನಂತರ ಅದನ್ನು ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿರಿಸಿ.

ಸಲಾಡ್ ತಯಾರಿಸಲು ಮೊದಲು ನೀರು, ಉಪ್ಪು, ಸಕ್ಕರೆ, ಸೋಂಪು ಹಾಗೂ ಈರುಳ್ಳಿ ಬೀಜದಿಂದ ತಯಾರಿಸಿಕೊಂಡ ಸಿರಪ್‌ನಲ್ಲಿ ಪೀರ್ ಅನ್ನು ಬೇಯಿಸಿಕೊಳ್ಳಿ. ನಂತರ ಅದನ್ನು ತಣ್ಣಗಾಗಲು ಫ್ರಿಜ್‌ನಲ್ಲಿಡಿ. ನಂತರ ತೆಳುವಾಗಿ ಕತ್ತರಿಸಿಕೊಳ್ಳಿ. ನಂತರ ತುರಿದುಕೊಂಡ ಚೀಸ್, ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಹಾಗೂ ಪುಡಿ ಮಾಡಿಟ್ಟುಕೊಂಡ ವಾಲ್‌ನಟ್‌ ಜೊತೆ ಪೀರ್ ಅನ್ನು ಮಿಶ್ರಣ ಮಾಡಿ. ನಂತರ ಮೊದಲೇ ತಯಾರಿಸಿಕೊಂಡ ದಹಿ ಕಬಾಬ್‌ ಅನ್ನು ಎಣ್ಣೆಯಲ್ಲಿ ಕರಿಯಿರಿ. ನಂತರ ದಹಿ ಕಬಾಬ್ ಹಾಗೂ ಪೀರ್, ವಾಲ್‌ನಟ್ ಸಲಾಡ್‌ ಅನ್ನು ಒಟ್ಟಿಗೆ ಪ್ಲೇಟ್‌ನಲ್ಲಿ ಹಾಕಿ ಅದರ ಮೇಲೆ ಹುಣಿಸೆ ರಸ ಚಿಮುಕಿಸಿದರೆ ಸವಿಯಲು ಸಿದ್ಧ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.