ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯಮಯ ಪೊಂಗಲ್ ಖಾದ್ಯ | ಸಂಕ್ರಾಂತಿ ಸಿಹಿ

sankrathi sweets
Last Updated 13 ಜನವರಿ 2023, 23:15 IST
ಅಕ್ಷರ ಗಾತ್ರ

ಸುಗ್ಗಿ ಹಬ್ಬ ಸಂಕ್ರಾಂತಿಯಂದು ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಿಹಿ ಪೊಂಗಲ್, ಖಾರ ಪೊಂಗಲ್, ಅವಲಕ್ಕಿ ಪೊಂಗಲ್ ಎನ್ನುತ್ತಾ ವೈವಿಧ್ಯಮಯ ಪೊಂಗಲ್ ಖಾದ್ಯಗಳನ್ನು ಹೆಸರಿಸುತ್ತಾರೆ. ಅದೇ ಉತ್ತರ ಕರ್ನಾಟಕದಲ್ಲಿ ಶೇಂಗಾ ಹೋಳಿಗೆ, ಮಾದಲಿ, ಗೋಧಿ ಹುಗ್ಗಿಯಂತಹ ಖಾದ್ಯಗಳನ್ನು ಹೆಸರಿಸುತ್ತಾರೆ. ಈ ಬಾರಿ ನಳಪಾಕದಲ್ಲಿ ಸಂಕ್ರಾಂತಿ ಹಬ್ಬದ ಉತ್ತರ ಕರ್ನಾಟಕದ ವಿಶೇಷ ಅಡುಗೆಗಳ ರೆಸಿಪಿಗಳನ್ನು ಪರಿಚಯಿಸುತ್ತಿದ್ದಾರೆ ತ್ರಿವೇಣಿ ಪಾಟೀಲ್‌.

ಶೇಂಗಾ ಹೋಳಿಗೆ

ಬೇಕಾಗುವ ಸಾಮಗ್ರಿಗಳು

ಶೇಂಗಾ ಒಂದು ಕಪ್‌, ಎಳ್ಳು ಅರ್ಧ ಕಪ್‌, ಮೈದಾಹಿಟ್ಟು ಮುಕ್ಕಾಲು ಕಪ್‌, ರವಿ ಕಾಲು ಕಪ್, ಅರ್ಧಕಪ್‌ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ

ಒಂದು ಅಗಲವಾದ ಪಾತ್ರೆಗೆ ಮೈದಾ, ರವೆ ಮತ್ತು ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ, ಮೃದುವಾದ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ. ಐದು ನಿಮಿಷಗಳ ಕಾಲ ನೆನೆಯಲು ಬಿಡಿ.

ಇದೇ ವೇಳೆ ಒಂದು ಪ್ಯಾನ್‌ನಲ್ಲಿ ಶೇಂಗಾ, ಎಳ್ಳನ್ನೂ ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಿ. ಈಗ ಶೇಂಗಾ ಎಳ್ಳು ಹಾಗೂ ಬೆಲ್ಲ, ಏಲಕ್ಕಿ ಸೇರಿಸಿ ಎಲ್ಲವನ್ನು ಪೂರ್ಣವಾಗಿ ಪುಡಿಮಾಡಿಕೊಳ್ಳಿ. ಇದೇ ಹೂರಣ.

ಮೈದಾಹಿಟ್ಟು ಮಿಶ್ರಣವನ್ನು ಚೆನ್ನಾಗಿ ಮಿದ್ದಿ, ನಿಂಬೆ ಗಾತ್ರದ ಸಣ್ಣ ಉಂಡೆಗಳನ್ನಾಗಿ ಮಾಡಿ. ಒಂದೊಂದೇ ಉಂಡೆಯನ್ನು ಚಪಾತಿಯಂತೆ ಲಟ್ಟಿಸಿ. ಆ ಹಾಳೆಯ ಮೇಲೆ ಶೇಂಗಾ ಮಿಶ್ರಣ (ಹೂರಣ) ತುಂಬಿ. ಹಾಳೆಯನ್ನು ವೃತ್ತಕಾರವಾಗಿ ಮುಚ್ಚಿ. ಅದನ್ನು ಚಪಾತಿಯಂತೆ ನಯವಾಗಿ ಲಟ್ಟಿಸಿಕೊಳ್ಳಿ. ಅದನ್ನು ತವಾ ಮೇಲೆ ಸಣ್ಣ ಉರಿಯಲ್ಲಿ ಎರಡೂ ಬದಿಗಳನ್ನು ಬೇಯಿಸಿಕೊಳ್ಳಿ. ಈಗ ರುಚಿ ರುಚಿಯಾಗಿರುವ ಶೇಂಗಾ ಹೋಳಿಗೆ ಸವಿಯಲು ರೆಡಿ.

ಮಾದಲಿ

ಬೇಕಾಗಿರುವ ಸಾಮಗ್ರಿಗಳು :

ಅರ್ಧ ಕೆಜಿ ಗೋಧಿ ಹಿಟ್ಟು, ಕಾಲು ಕಪ್‌ ರವೆ. ಅರ್ಧ ಕೆಜಿ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಏಲಕ್ಕಿ ಪುಡಿ, ಬಿಳಿ ಎಳ್ಳು, ಒಣಕೊಪ್ಪರಿ ತುರಿ ಮತ್ತು ಗಸೆಗಸೆ

ಮಾಡುವ ವಿಧಾನ

ಅಗಲವಾದ ಪಾತ್ರೆಯಲ್ಲಿ ಗೋಧಿ ಹಿಟ್ಟು, ರವೆ, ಚಿಟಿಕೆ ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಗಟ್ಟಿ ಹದದಲ್ಲಿ ನಾದಿಕೊಳ್ಳಿ(ಚಪಾತಿ ಹಿಟ್ಟೆಗಿಂತ ಸ್ವಲ್ಪ ಗಟ್ಟಿಯಾಗಿರಲಿ). ಈ ಹಿಟ್ಟನ್ನು 5 ನಿಮಿಷ ನೆನೆಸಿ. ನಂತರ ಚಪಾತಿ ಆಕಾರದಲ್ಲಿ ದಪ್ಪಗೆ ಲಟ್ಟಿಸಿ, ಬೇಯಿಸಿಕೊಳ್ಳಿ. ಬಿಸಿ ಇರುವಾಗಲೇ ಹಂಚಿನಿಂದ ತಗೆದು ಲಟ್ಟಣಿಗೆಯಿಂದ ಪುಡಿ ಮಾಡಿಕೊಳ್ಳಿ. ನಂತರ ಈ ಪುಡಿ ಹಾಗೂ ಬೆಲ್ಲ ಎರಡನ್ನು ಸೇರಿಸಿ ಮಿಕ್ಸಿಯಲ್ಲಿ ಒಮ್ಮೆ ಮಿಶ್ರಮಾಡಿಕೊಳ್ಳಿ. ನಂತರ ಇದಕ್ಕೆ ಏಲಕ್ಕಿ ಪುಟಾಣಿ ಒಣ ಕೊಬ್ಬರಿ ತುರಿ ಹಾಕಿ ಎಳ್ಳು ಗಸಗಸೆ ಸ್ವಲ್ಪ ಹುರಿದು ಹಾಕಿದರೆ ರುಚಿ ರುಚಿಯಾಗಿರುವ ಮಾದಲಿ ಸವಿಯಲು ರೆಡಿ.

ಗೋಧಿ ಹುಗ್ಗಿ

ಗೋಧಿ ಅರ್ಧ ಕೆ.ಜಿ, ಬೆಲ್ಲ ಅರ್ಧ ಕೆ.ಜಿ, ಅರ್ಧ ಲೀಟರ್‌ ಹಾಲು, ರುಚಿಗೆ ತಕ್ಕಷ್ಟು ಉಪ್ಪು, ಒಣ ಕೊಬ್ಬರಿ, ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ ಮತ್ತು ತುಪ್ಪ.

ಮಾಡುವ ವಿಧಾನ:

ಗೋಧಿಯನ್ನು ಒರಳಿನಲ್ಲಿ ಹಾಕಿ ಸ್ವಲ್ಪ ನೀರು ಹಾಕಿಕೊಂಡು ಕುಟ್ಟಿಕೊಳ್ಳಿ. ಇದರ ಉದ್ದೇಶ ಗೋಧಿ ಕಾಳಿನಿಂದ ಹೊಟ್ಟನ್ನು(ತವಡು) ತೆಗೆಯಬೇಕು. ಈಗ ಒಂದು ಪಾತ್ರೆಯಲ್ಲಿ ಗೋಧಿ ಹಾಕಿ, ನೀರು ಬೆರೆಸಿ ಮೆತ್ತಗಾಗುವವರೆಗೆ ಬೇಯಿಸಿ. ಜೊತೆಗೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮುಗುಚಿಕೊಳ್ಳಿ. ನಂತರ ಹಾಲು, ಬೆಲ್ಲ ಮತ್ತು ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಹಾಕಿ. ಮತ್ತೆ ಮಿಶ್ರಮಾಡಿ. ಈಗ ರುಚಿ ರುಚಿಯಾದ ಬಿಸಿ ಬಿಸಿ ಗೋಧಿ ಹುಗ್ಗಿ ಸಿದ್ಧವಾಯತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT