ಶುಕ್ರವಾರ, ಏಪ್ರಿಲ್ 3, 2020
19 °C

ಗಿನ್ನಿಸ್‌ ರೆಕಾರ್ಡ್‌ ಆಯ್ತು ಐಟಿಸಿ ಚಾಕೋಲೆಟ್‌: ಇದರ ಬೆಲೆ ಬರೋಬ್ಬರಿ ₹4.3 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಐಟಿಸಿ ಗ್ರೂಪ್‌ ಕಂಪನಿಯು ದುಬಾರಿ ಬೆಲೆಯ ಚಾಕೋಲೆಟ್‌ ಪರಿಚಯಿಸಿದ್ದು ಒಂದು ಕೆ.ಜಿ. ಚಾಕೋಲೆಟ್‌ ಬೆಲೆ ಬರೋಬ್ಬರಿ ₹ 4.3 ಲಕ್ಷ!

ಹೌದು, ದುಬಾರಿ ಬೆಲೆಯ ಫಬೆಲ್ಲಾ ಎಕ್ಸ್‌ಕ್ಯೂಸೈಟ್‌ ಚಾಕೋಲೆಟ್‌ ಅನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಇದು ವಿಶ್ವದ ಅತ್ಯಂತ ದುಬಾರಿ ಚಾಕೋಲೆಟ್‌ ಎಂಬ ಹೆಗ್ಗಳಿಕೆಯೊಂದಿಗೆ ಗಿನ್ನಿಸ್‌ ರೆಕಾರ್ಡ್‌ ಆಗಿದೆ.

ಐಟಿಸಿಯ ಜನಪ್ರಿಯ ಫಬೆಲ್ಲಾ ಚಾಕೋಲೆಟ್‌ ಬ್ರ್ಯಾಂಡ್‌ ಅಡಿಯಲ್ಲಿ ಈ ದುಬಾರಿ ಚಾಕೋಲೆಟ್‌ ತಯಾರಿಸಲಾಗಿದೆ. ಭಾರತದಲ್ಲೂ ಸಹ ಹೊಸ ದಾಖಲೆ ಬರೆಯುವ ಮೂಲಕ ಗಿನ್ನಿಸ್‌ ರೆಕಾರ್ಡ್‌ ಮಾಡಿರುವುದು ಸಂತಸದ ಸಂಗತಿ ಎಂದು ಐಟಿಸಿ ಗ್ರೂಪ್‌ನ ಆಹಾರ ವಿಭಾಗದ ಮುಖ್ಯಸ್ಥರಾದ ಅಂಜು ರುಸ್ತಾಗಿ ತಿಳಿಸಿದ್ದಾರೆ.

ಫಬೆಲ್ಲಾ ಚಾಕೋಲೆಟ್‌ ತಯಾರಿಸುವ ಮುಖ್ಯ ಬಾಣಸಿಗ ಫಿಲಿಪ್ಪಿ ಕಂಟೆಸಿನಿಯ ನೆತೃತ್ವದಲ್ಲಿ ಈ ದುಬಾರಿ ಚಾಕೋಲೆಟ್‌ ತಯಾರು ಮಾಡಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)