ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೆಸಿಪಿ | ವಿವಿಧ ಊರಿನ ಬಿರಿಯಾನಿ

ಫಾಲೋ ಮಾಡಿ
Comments

ಮಂಗಳೂರು ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಚಿಕನ್- 1 ಕೆಜಿ, ಬಾಸ್ಮತಿ ಅಕ್ಕಿ-1 ಕೆಜಿ, ಈರುಳ್ಳಿ- 5 ದೊಡ್ಡದು, ಟೊಮೆಟೊ - 6, ಸೋಂಪು- 2 ಚಮಚ, ಹಸಿಮೆಣಸಿನಕಾಯಿ – 5-6, ಕೊತ್ತಂಬರಿ ಸೊಪ್ಪು – 1ಹಿಡಿ, ಪುದಿನ- ಸ್ವಲ್ಪ, ಕೊತ್ತಂಬರಿ ಬೀಜ 2 ಚಮಚ, ಬೆಳ್ಳುಳ್ಳಿ- 10 ಎಸಳು, ಶುಂಠಿ- ಸಣ್ಣ ತುಂಡು, ಅರಿಸಿನ- 1/2 ಟೀ ಚಮಚ, ಗೋಡಂಬಿ - 10, ತೆಂಗಿನತುರಿ - 1/2 ಕಪ್, ತುಪ್ಪ - 2 ಟೇಬಲ್‌ ಚಮಚ, ಲಿಂಬೆ – 1, ಗರಂ ಮಸಾಲ – 2 ಚಮಚ, ದ್ರಾಕ್ಷಿ -1/2 ಕಪ್

ತಯಾರಿಸುವ ವಿಧಾನ: ಬಿರಿಯಾನಿ ಮಸಾಲ: ಮಿಕ್ಸಿ ಜಾರಿಗೆ ಸೋಂಪು, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಪುದಿನ, ಕೊತ್ತಂಬರಿ ಬೀಜ, ಬೆಳ್ಳುಳ್ಳಿ, ಶುಂಠಿ, ಅರಿಸಿನ ಹಾಕಿ ಅರೆದು ಇಡಿ.

ಪಾತ್ರೆಗೆ 1 ಚಮಚ ತುಪ್ಪ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಹಾಕಿ ಹುರಿಯಿರಿ. ಅದಕ್ಕೆ ತಯಾರಿಸಿದ ಬಿರಿಯಾನಿ ಮಸಾಲೆ, ಹೆಚ್ಚಿದ ಟೊಮೆಟೊ ಹಾಕಿ 2 ನಿಮಿಷ ಕೈ ಆಡಿಸಿ. ಅದಕ್ಕೆ ಚಿಕನ್ ತುಂಡು, ಉಪ್ಪು, ಗರಂ ಮಸಾಲ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ತೆಂಗಿನತುರಿ ಮತ್ತು ಗೋಡಂಬಿಯನ್ನು ಅರೆದು ಮಸಾಲೆಗೆ ಸೇರಿಸಿ.
ಇನ್ನೊಂದು ಪಾತ್ರೆಯಲ್ಲಿ ನೀರು ಕುದಿಯುವಾಗ ಅಕ್ಕಿ, ಲಿಂಬೆ, ಉಪ್ಪು, ಚಕ್ಕೆ, ಲವಂಗ ಹಾಕಿ. ಬೆಂದ ಮೇಲೆ ನೀರು ಬಸಿದು ಇಡಿ. ಇನ್ನೊಂದು ತವಾದಲ್ಲಿ ತುಪ್ಪ, ದ್ರಾಕ್ಷಿ, ಗೋಡಂಬಿ, ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ಹುರಿದುಕೊಳ್ಳಿ.
ಸೆಟ್: ದೊಡ್ಡ ಪಾತ್ರೆಗೆ ಮೊದಲು ಮಸಾಲ, ಅದರ ಮೇಲೆ ಅನ್ನ, ಅದರ ಮೇಲೆ ಹುರಿದುಕೊಂಡ ಈರುಳ್ಳಿ, ಗೋಡಂಬಿ, ದ್ರಾಕ್ಷಿ ಹಾಕಿ. ಮೇಲೆ ಕೊತ್ತಂಬರಿ ಸೊಪ್ಪು, ಹಳದಿ ಬಣ್ಣ (ರೋಸ್ ವಾಟರ್/ಹಾಲಲ್ಲಿ ಕಲಸಿ)ಸುತ್ತ ಹಾಕಿ. ತುಪ್ಪ ಹಾಕಿ 15 ನಿಮಿಷ ದಮ್ ಅಲ್ಲಿಡಿ.

ಹೈದರಾಬಾದ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಚಿಕನ್-1 ಕೆಜಿ, ಬಾಸ್ಮತಿ ಅಕ್ಕಿ-1 ಕೆಜಿ, ಈರುಳ್ಳಿ-5 ದೊಡ್ಡ ಗಾತ್ರದ್ದು, ಮೊಸರು-1/4 ಲೀಟರ್, ಅಚ್ಚ ಖಾರದ ಪುಡಿ-1 ಟೇಬಲ್ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್-2 ಟೇಬಲ್ ಚಮಚ, ಗರಂ ಮಸಾಲ-1 ಟೀ ಚಮಚ, ಚಿಕನ್ ಮಸಾಲ-1 ಟೀ ಚಮಚ, ಕೊತ್ತಂಬರಿ ಪುಡಿ-1/2 ಚಮಚ, ಅರಿಸಿನ- 1/2 ಚಮಚ, ಕರಿಮೆಣಸಿನ ಹುಡಿ-1/2 ಟೀ ಚಮಚ, ಪುದಿನ ಸೊಪ್ಪು-1 ಹಿಡಿ, ಕೊತ್ತಂಬರಿ ಸೊಪ್ಪು-1 ಹಿಡಿ, ನಿಂಬೆಹಣ್ಣು -1, ಏಲಕ್ಕಿ, ಲವಂಗ- ತಲಾ 4, ಚಕ್ಕೆ- 2, ಎಣ್ಣೆ- 3 ಟೇಬಲ್ ಚಮಚ, ತುಪ್ಪ- 5 ಚಮಚ, ಉಪ್ಪು-ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಒಂದು ಬೌಲ್‌ಗೆ ಮೊಸರು, ಅಚ್ಚ ಖಾರದ ಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಅರಿಸಿನ, ಕರಿಮೆಣಸಿನ ಹುಡಿ, ಗರಂಮಸಾಲ, ಪುದಿನ, ಕೊತ್ತಂಬರಿ ಸೊಪ್ಪು, ನಿಂಬೆಸರ, ಚಿಕನ್ ಮಸಾಲ, ಕೊತ್ತಂಬರಿ ಪುಡಿ, 2 ಚಮಚ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಚಿಕನ್ ಹಾಕಿ ಕೈ ಆಡಿಸಿ. 5 ಈರುಳ್ಳಿಯನ್ನು ಬೇರೆಯೇ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೂ ಹುರಿದು 3 ಈರುಳ್ಳಿಯನ್ನು ಮಿಕ್ಸಿಯಲ್ಲಿ ಅರೆದು ಚಿಕನ್‌ಗೆ ಹಾಕಿ. ಉಳಿದ ಈರುಳ್ಳಿಯನ್ನು ಅಲಂಕಾರಕ್ಕೆ ಇಟ್ಟಿರಿ. ಚಿಕನ್ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿ 2 ಗಂಟೆ ಇಡಿ. ಅಕ್ಕಿಯನ್ನು ಚೆನ್ನಾಗಿ ತೊಳೆದು 1/2 ಗಂಟೆ ನೆನೆಸಿಡಿ. ಪಾತ್ರೆಗೆ ನೀರು ಹಾಕಿ ಒಲೆಯ ಮೇಲಿಟ್ಟುಅದಕ್ಕೆ ಏಲಕ್ಕಿ, ಲವಂಗ, ಚೆಕ್ಕೆ, 1 ಚಮಚ ಎಣ್ಣೆ, 3 ಚಮಚ ಉಪ್ಪು ಹಾಕಿ. ನೀರು ಕುದಿಯುವಾಗ ಅಕ್ಕಿ ಹಾಕಿ. ಶೇ 70 ಬೇಯಿಸಿ ಕೆಳಗಿಳಿಸಿ.

ಇನ್ನೊಂದು ದೊಡ್ಡ ಪಾತ್ರೆಗೆ 2 ಚಮಚ ತುಪ್ಪ ಹಾಕಿ, ಅದಕ್ಕೆ ಚಿಕನ್ ಮಿಶ್ರಣ ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ. ಮುಚ್ಚಳ ತೆಗೆದು ಅನ್ನದ ಅರ್ಧ ಪಾಲು ತೆಗೆದು ಮಸಾಲೆ ಮೇಲೆ ಹರಡಿ. ಅದರ ಮೇಲೆ ಹುರಿದ ಈರುಳ್ಳಿ, ಹಳದಿ ಬಣ್ಣ, ಕೊತ್ತಂಬರಿ ಸೊಪ್ಪು ಹಾಕಿ. ಅದರ ಮೇಲೆ ಉಳಿದ ಅನ್ನವನ್ನು ಹಾಕಿ, ಹುರಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಳದಿ ಬಣ್ಣ ಹಾಕಿ 2 ಪದರ ಬರುವಂತೆ ಸೆಟ್ ಮಾಡಿ ಅಲಂಕರಿಸಿ. 40 ನಿಮಿಷ ಸಣ್ಣ ಉರಿಯಲ್ಲಿ ದಮ್ ಅಲ್ಲಿಡಿ.

ಫ್ರೈ‌ಡ್‌ ಚಿಕನ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಚಿಕನ್ -1 ಕೆಜಿ, ಬಾಸ್ಮತಿ ಅಕ್ಕಿ-2 ಕಪ್, ಈರುಳ್ಳಿ- 4-5, ಪುದಿನ, ಕೊತ್ತಂಬರಿ- ತಲಾ1 ಹಿಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್- 4 ಚಮಚ, ಚಕ್ಕೆ-1
ಲವಂಗ-4, ದಾಲ್ಚಿನ್ನಿ-1, ಶಾಹೀ ಜೀರ-1/2 ಚಮಚ, ಮೊಸರು-1 ಕಪ್, ಬಿರಿಯಾನಿ ಮಸಾಲ-1 ಪ್ಯಾಕೆಟ್, ಬೆಣ್ಣೆ-2 ಚಮಚ, ಅಚ್ಚ ಖಾರದ ಪುಡಿ-2 ಚಮಚ, ಗರಂ ಮಸಾಲ-1 ಚಿಟಿಕೆ, ಕರಿಬೇವು-ಸ್ವಲ್ಪ, ಕರಿಮೆಣಸಿನ ಹುಡಿ-1/2 ಚಮಚ, ಕೊತ್ತಂಬರಿ ಪುಡಿ-1 ಚಮಚ, ಜೀರಿಗೆ ಪುಡಿ- 1/2 ಚಮಚ, ಕಾರ್ನ್‌ ಫ್ಲೋರ್‌ -1 ಚಮಚ, ಹಸಿಮೆಣಸಿನಕಾಯಿ-3, ಉಪ್ಪು-ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಒಂದು ಬೌಲ್‌ನಲ್ಲಿ ಚಿಕನ್‌ಗೆ 2 ಚಮಚ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಅಚ್ಚ ಖಾರದ ಪುಡಿ, ಚಿಟಿಕೆ ಗರಂ ಮಸಾಲ, ಸಣ್ಣಗೆ ಹೆಚ್ಚಿದ ಕರಿಬೇವು ಸೊಪ್ಪು, ಕರಿಮೆಣಸಿನ ಹುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಕಾರ್ನ್‌ಫ್ಲೋರ್‌, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 1 ಗಂಟೆ ಇಟ್ಟಿರಿ.

ಒಲೆ ಮೇಲೆ ಬೇರೆ ಪಾತ್ರೆ ಇಟ್ಟು ಅದಕ್ಕೆ 3 ಚಮಚ ಎಣ್ಣೆ , ತೆಳ್ಳಗೆ ಹಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಅದಕ್ಕೆ 2 ಚಮಚ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಪುದಿನ, ಕೊತ್ತಂಬರಿ ಸೊಪ್ಪು, ಚಕ್ಕೆ ಲವಂಗ, ಎಲೆ, ದಾಲ್ಚಿನ್ನಿ, ಶಾಹಿಜೀರ, 3 ಹಸಿಮೆಣಸಿನ ಕಾಯಿ ಹಾಕಿ ಚೆನ್ನಾಗಿ ಕೈ ಆಡಿಸಿ. 15 ನಿಮಿಷ ನೆನೆಸಿದ ಅಕ್ಕಿಯನ್ನು ಹಾಕಿ. 3 ಕಪ್ ನೀರಿಗೆ ಉಪ್ಪು ಹಾಕಿ ಅದನ್ನ ಪಾತ್ರೆಗೆ ಹುಯ್ಯಿರಿ. ಒಂದು ಬೌಲ್‌ಗೆ ಗಟ್ಟಿ ಮೊಸರು, ಬಿರಿಯಾನಿ ಮಸಾಲ, ಉಪ್ಪು, 2 ಚಮಚ ಬೆಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪಾತ್ರೆಗೆ ಸೇರಿಸಿ. ಬೇರೆ ಪಾತ್ರೆಗೆ ಎಣ್ಣೆ ಹಾಕಿ ಚಿಕನ್ ಅನ್ನು ಚೆನ್ನಾಗಿ ಹುರಿದುಕೊಳ್ಳಿ. ಅನ್ನ ಬೇಯುತ್ತ ಬರುವಾಗ ಚಿಕನ್ ಅನ್ನು ಮೇಲೆ ಹರಡಿ, ಬೇಕಾದರೆ ಈರುಳ್ಳಿಯನ್ನು ಎಣ್ಣೆಯಲ್ಲಿ ಹುರಿದು ಸೇರಿಸಿ ಅಲಂಕರಿಸಿ. ಸಣ್ಣ ಉರಿಯಲ್ಲಿ 5 ನಿಮಿಷ ದಮ್ ಅಲ್ಲಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT