ವಿಪರೀತ ಎನ್ನುವಷ್ಟು ಕೋಪ ಬರುತ್ತದೆ. ವೈದ್ಯರು ಹಾರ್ಮೋನ್ ಏರಿಳಿತ ಎಂದರು. ಅದಕ್ಕೂ ಮದ್ದು ತೆಗೆದುಕೊಳ್ಳುತ್ತಿದ್ದೇನೆ. ಆದರೂ ಕೋಪ ಕಡಿಮೆಯಾಗಿಲ್ಲ. ಸಣ್ಣ ವಿಷಯಕ್ಕೂ ಸಿಡುಕುವಂತಾಗಿದೆ. ಹೀಗೇ ಆದರೆ ಕುಟುಂಬದವರೆಲ್ಲ ದೂರವಾಗಿಬಿಡುವ ಭಯ ಶುರುವಾಗಿದೆ. ಗೃಹಿಣಿಯಾಗಿರುವುದರಿಂದ ಎಲ್ಲದಕ್ಕೂ ಗಂಡನನ್ನು ಅವಲಂಬಿಸಬೇಕಾಗಿದೆ. ಹಾಗಾಗಿ, ಅದಕ್ಕೂ ಕೋಪ ಬರುತ್ತದೆ. ಇದನ್ನು ನಿಯಂತ್ರಿಸಲು ಸರಳ ಉಪಾಯಗಳೇನಾದರೂ ಇವೆಯೇ?

–ಸಂಗೀತ, ಶಿರಹಟ್ಟಿ

ಉತ್ತರ: ನಿಮ್ಮ ಪ್ರಶ್ನೆಯನ್ನು ಗಮನಿಸಿದಾಗ, ಎಲ್ಲೋ ಒಂದಷ್ಟು ವರ್ಷಗಳಿಂದ ಕಟ್ಟಿಟ್ಟಿದ್ದ ಕೋಪವೆಲ್ಲ ಈಗ ಒಟ್ಟಿಗೇ ಬರುತ್ತಿದೆಯೇನೋ ಎಂಬ ಸಂಶಯ ಮೂಡುತ್ತಿದೆ. ಹಾರ್ಮೋನುಗಳ ಏರುಪೇರಿನಿಂದಾಗಿ ಮನಸ್ಸಿನ ಆರೋಗ್ಯದ ಮೇಲೆ ವಿವಿಧ ರೀತಿಯ ಪರಿಣಾಮಗಳು ಉಂಟಾಗುತ್ತವೆ. ಆದರೆ ಇದೊಂದೇ ಕಾರಣ ಆಗಬೇಕೆಂದಿಲ್ಲ. ಯಾವುದೇ ರೀತಿಯ ದೈಹಿಕ ಆರೋಗ್ಯದ ಸಮಸ್ಯೆ ಇದ್ದರೂ ಅದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಉದಾಹರಣೆಗೆ, ತೀವ್ರ ತಲೆನೋವಿದ್ದಾಗ ಸಿಡುಕುತನ ಜಾಸ್ತಿ ಆಗಬಹುದು. ನಿದ್ರೆ ಕಡಿಮೆ ಆಗಿದ್ದಾಗ ಕಿರಿಕಿರಿ ಅನ್ನಿಸಬಹುದು. ಆದರೆ, ನಿಮ್ಮ ಸಿಟ್ಟಿನ ಹಿಂದೆ ದೈಹಿಕ ಕಾರಣಗಳ ಜೊತೆಗೆ ಮಾನಸಿಕ ಕಾರಣಗಳೂ ಇರುವಂತೆ ಕಾಣುತ್ತಿದೆ.

ಇದನ್ನು ಇನ್ನೂ ಆಳವಾಗಿ ಅವಲೋಕಿಸುವ ಮೊದಲು, ಕೆಲವೊಂದಷ್ಟು ವಿಷಯಗಳನ್ನು ವಿಮರ್ಶಿಸಬೇಕು.

1. ನಿಮಗೆ ಸರಿಯಾಗಿ ನಿದ್ದೆ ಬರುತ್ತಿದೆಯೇ? ಬರುತ್ತಿದ್ದರೆ, ಸುಮಾರು 6- 8 ಗಂಟೆಗಳ ಕಾಲ ನಿದ್ದೆ ಮಾಡುತ್ತಿದ್ದೀರಾ?

2. ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸುತ್ತಿದ್ದೀರಾ ಅಥವಾ ಅದರಲ್ಲೂ ಏನಾದರೂ ಏರುಪೇರು ಇದೆಯೇ?

3. ಮುಟ್ಟು ಸರಿಯಾಗಿ ಆಗುತ್ತಿದೆಯೇ?

4. ಜೀವನದಲ್ಲಿ ಏನಾದರೂ ಅಚಾನಕ್ಕಾಗಿ ಬದಲಾಗಿದೆಯೇ?

5. ನಿಮ್ಮ ಯಾವುದಾದರೂ ಅಪೇಕ್ಷೆಗಳು ಈಡೇರದೆ ಬಾಕಿ ಉಳಿದಿವೆಯೇ?

ಇವುಗಳಲ್ಲಿ ಮೊದಲ ಮೂರು ಪ್ರಶ್ನೆಗಳಿಗೆ ಉತ್ತರಗಳು ಸಕಾರಾತ್ಮಕವಾಗಿದ್ದು, ಕಡೆಯ ಎರಡು ಪ್ರಶ್ನೆಗಳಿಗೆ ನಕಾರಾತ್ಮಕವಾಗಿದ್ದಲ್ಲಿ, ಮತ್ತೆ ಹುಡುಕಬೇಕಾದುದು ನಿಮ್ಮ ಬಾಲ್ಯಕಾಲದಿಂದ ಬಂದಿರಬಹುದಾದಂತಹ ಕೋಪದ ಮೂಲಗಳನ್ನು. ಅವುಗಳನ್ನು ಹುಡುಕುವುದಕ್ಕೆ ನೀವು ಮನಃಶಾಸ್ತ್ರಜ್ಞ ರನ್ನು ಭೇಟಿಯಾಗಬೇಕಾದ ಅಗತ್ಯವಿದೆ. ಆದರೆ, ಸದ್ಯದ ಮಟ್ಟಿಗೆ ಕೋಪದ ಪ್ರಮಾಣವನ್ನು ಕಡಿಮೆ ಮಾಡಲು ಒಂದಷ್ಟು ಸುಲಭದ ಉಪಾಯಗಳನ್ನು ನೋಡೋಣ:

1. ದಿನಚರಿ ಸರಿಪಡಿಸಿಕೊಳ್ಳಿ: ಪ್ರತಿದಿನವೂ ಸಾಧ್ಯವಾದಷ್ಟು ಒಂದೇ ಸಮಯಕ್ಕೆ ಮಲಗಿ, ಒಂದೇ ಸಮಯಕ್ಕೆ ಏಳಿ. ಸರಿಯಾದ ಸಮಯಕ್ಕೆ ಆಹಾರ ತೆಗೆದುಕೊಳ್ಳಿ. ದಿನಚರಿ ಸರಿಯಾದಾಗ ನಿಮ್ಮ ದೈಹಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಮಾತ್ರವಲ್ಲ, ಹಾರ್ಮೋನುಗಳ ಏರುಪೇರನ್ನು ಸರಿಪಡಿಸಲು ಸಹಾಯವಾಗುತ್ತದೆ.

2. ಸಾಮ್ಯತೆ ಇದೆಯೇ ಪರಿಶೀಲಿಸಿ: ಬೇರೆ ಸಂದರ್ಭದಲ್ಲಿ ಕೋಪ ಬರುತ್ತಿದ್ದರೂ, ಅವುಗಳ ಮೂಲ ಕಾರಣಗಳ ಸ್ವರೂಪದಲ್ಲಿ ಏನಾದರೂ ಸಾಮ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಿ. ಎಷ್ಟೋ ಬಾರಿ ಪ್ರತಿ ಪ್ರಕರಣವೂ ಬೇರೆ ಬೇರೆ ಎಂದು ಅನ್ನಿಸಿದರೂ ಅವುಗಳ ಆಳಕ್ಕೆ ಇಳಿದು ನೋಡಿದಾಗ ಸಾಮ್ಯತೆ ಕಂಡುಬರುತ್ತದೆ.

3. ತಕ್ಷಣ ಹೊರಹಾಕಬೇಡಿ: ಕೋಪ ಬರುವಂತಹ ಯಾವುದೇ ಸಂದರ್ಭದಲ್ಲಿ, ಇತರರ ಮೇಲೆ ಏಕಾಏಕಿ ಹರಿಹಾಯುವ ಬದಲು, ನಿಮಗೆ ಬರುತ್ತಿರುವ ಸಿಟ್ಟಿನ ಕಾರಣಗಳನ್ನು ಒಂದು ಕಾಗದದಲ್ಲಿ ಬರೆಯುತ್ತಾ ಹೋಗಿ. ಆಮೇಲೆ ಅದನ್ನು ಓದಿ, ನಿಮ್ಮ ಗ್ರಹಿಕೆಯಲ್ಲಿ ಏನಾದರೂ ತಪ್ಪಾಗಿದೆಯೇ ಎಂದು ನೋಡಿ. ಮಾತ್ರವಲ್ಲ, ನಿಮ್ಮ ಕೋಪವನ್ನು ಇತರರ ಮುಂದೆ ಹೇಗೆ ಅಭಿವ್ಯಕ್ತ
ಪಡಿಸಬಹುದು ಎಂಬ ಬಗ್ಗೆ ಮನಸ್ಸಿನಲ್ಲೇ ಚರ್ಚಿಸಿ. ಆಮೇಲೆ, ಸಂಬಂಧಪಟ್ಟವರಿಗೆ ಅರ್ಥವಾಗುವ ರೀತಿಯಲ್ಲಿ ಕೋಪವನ್ನು ವ್ಯಕ್ತಪಡಿಸಿ. ಆಗ, ಅವರಿಂದ ಏನಾದರೂ ತಪ್ಪಾಗುತ್ತಿದ್ದರೆ, ಅದನ್ನು ತಿದ್ದಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ನೀವು ಸಿಡುಕಿದ ತಕ್ಷಣ ಅವರ ಪ್ರತಿಕ್ರಿಯೆ ಹೆಚ್ಚಾಗಿ ಪ್ರತಿರೋಧವೇ ಆಗಿರಬಹುದು.

4. ಕಾರಣ ಗುರುತಿಸಿ:
ನಿಮ್ಮೊಳಗೆ ಎಲ್ಲೋ ಅಸಹಾಯಕತೆ ಕಂಡುಬರುತ್ತಿದೆ. ಅದಕ್ಕೆ ಕಾರಣವೇನೆಂದು ಗುರುತಿಸಿ. ಅದನ್ನು ಸರಿಪಡಿಸುವ ಮೂಲಕವೂ ನಿಮ್ಮ ಸಿಡುಕುತನವನ್ನು ಕಡಿಮೆ ಮಾಡಿಕೊಳ್ಳ
ಬಹುದು. ಇವಿಷ್ಟನ್ನು ಮಾಡಿದ ಮೇಲೂ ಸಿಡುಕುತನ ಕಡಿಮೆ ಆಗದಿದ್ದರೆ, ಮಾನಸಿಕ ತಜ್ಞರನ್ನು ಭೇಟಿ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.