ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಟ್ಟ ಕೊಲೆಸ್ಟ್ರಾಲ್‌ ಬಗ್ಗೆ ಎಚ್ಚರವಿರಲಿ

ಡಾ. ರಾಜ್‌ಪಾಲ್ ಸಿಂಗ್
Published : 27 ಸೆಪ್ಟೆಂಬರ್ 2024, 23:33 IST
Last Updated : 27 ಸೆಪ್ಟೆಂಬರ್ 2024, 23:33 IST
ಫಾಲೋ ಮಾಡಿ
Comments

ಜಾಗತಿಕವಾಗಿ ಹೃದ್ರೋಗಗಳಿಂದ ಸಾಯುತ್ತಿರುವವರ ಪೈಕಿ ಐದನೇ ಒಂದು ಭಾಗದಷ್ಟು ಭಾರತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. 

ಪರಿಧಮನಿಯ ಕಾಯಿಲೆ (ಕೊರೋನರಿ ಆರ್ಟರಿ ಡಿಸೀಸ್- ಸಿಎಡಿ) ಹೆಚ್ಚುತ್ತಿದೆ. ಹಾಗಾಗಿ ಕೊಲೆಸ್ಟ್ರಾಲ್‌ ಮಟ್ಟದ ಮೇಲೆ ನಿಗಾವಹಿಸಬೇಕು. 

ಕೆಟ್ಟ ಕೊಲೆಸ್ಟ್ರಾಲ್‌ 

ರಕ್ತದಲ್ಲಿ ಕಂಡುಬರುವ ಕೊಬ್ಬಿನ ಅಂಶ ಆರೋಗ್ಯಕರ ಕೋಶಗಳನ್ನು ರೂಪಿಸಲು ಬಹಳ ಸಹಾಯಕಾರಿ. ಉತ್ತಮ ಕೊಲೆಸ್ಟ್ರಾಲ್ ಜತೆ ಕೆಟ್ಟ ಕೊಲೆಸ್ಟ್ರಾಲ್ ಇರುತ್ತದೆ. ಇದನ್ನು ಎಲ್‌ಡಿಎಲ್‌ಸಿ ಎಂದೂ ಕರೆಯುತ್ತಾರೆ.

ಕೆಟ್ಟ ಕೊಲೆಸ್ಟ್ರಾಲ್‌ ಅಪಧಮನಿಗಳಲ್ಲಿ ಕೊಬ್ಬಿನ ಅಂಂಶಗಳನ್ನು ಉಂಟು ಮಾಡಿ, ರಕ್ತದ ಹರಿವನ್ನು ನಿರ್ಬಂಧಿಸುತ್ತದೆ.  ಅದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಬರುವ ಸಾಧ್ಯತೆ ಹೆಚ್ಚು. 

ಕೊಬ್ಬಿನಾಂಶದ ಮೇಲೆ ನಿಗಾವಹಿಸುವುದು ಬಹಳ ಮುಖ್ಯ. ಬಹುತೇಕರಿಗೆ ಇದರ ಬಗ್ಗೆ ಅರಿವಿರುವಿದಲ್ಲ. ಎಲ್‌ಡಿಎಲ್‌ಸಿ ಅಪಾಯದ ಮಟ್ಟ ಮೀರುವುದರಿಂದಲೇ   ಹೃದಯರಕ್ತನಾಳದ ಕಾಯಿಲೆ ಉಂಟಾಗುತ್ತಿದೆ. ಸಿಎಸ್ಐ ಮಾರ್ಗಸೂಚಿಗಳ ಪ್ರಕಾರ 18ನೇ ವಯಸ್ಸಿನಲ್ಲಿ ಲಿಪಿಡ್ ಪ್ರೊಫೈಲ್ ಸ್ಕ್ರೀನಿಂಗ್‌ಗಳನ್ನು ಪ್ರಾರಂಭಿಸಬೇಕು. ಅದರಿಂದ ಆರಂಭಿಕ ಹಂತದಲ್ಲಿಯೇ ಸಮಸ್ಯೆಗಳನ್ನು ಪತ್ತೆ ಹಚ್ಚಬಹುದು.

 ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (ಸಿಎಸ್ಐ) ಪ್ರಕಾರ ಎಲ್‌ಡಿಎಲ್‌ಸಿ ಮಟ್ಟ ಎಲ್ಲರಲ್ಲಿಯೂ ಒಂದೇ ಇರಬೇಕು ಎಂದಿಲ್ಲ. ವಯಸ್ಸು, ಲಿಂಗ, ವೈದ್ಯಕೀಯ ಇತಿಹಾಸ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಅಂಶಗಳ ಆಧಾರದ ಮೇಲೆ ಎಲ್‌ಡಿಎಲ್‌ಸಿ ಮಿತಿ ಅಥವಾ ಗುರಿ ಬೇರೆಯೇ ಆಗಿರುತ್ತದೆ.

  ಕೊಲೆಸ್ಟ್ರಾಲ್ ಅನ್ನು ನೀವು ಸೂಕ್ತ ರೀತಿಯಲ್ಲಿ ನಿಭಾಯಿಸಬಹುದು. ವಿಶೇಷವಾಗಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

 ಕೊಲೆಸ್ಟ್ರಾಲ್ ನಿರ್ವಹಣೆ ಹೇಗೆ?


ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇದ್ದರೆ  ಎಲ್‌ಡಿಎಲ್‌ಸಿ ಮೇಲೆ ನಿಗಾವಹಿಸುವುದು ಬೇರೆಯವರಿಗಿಂತ ಹೆಚ್ಚು ಮುಖ್ಯ. ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಕೊಲೆಸ್ಟ್ರಾಲ್ ಮೇಲೆ ಹೆಚ್ಚಿನ ಗಮನ ನೀಡಬೇಕು.  ಚಿಕಿತ್ಸಾ ಯೋಜನೆಯನ್ನು ಚಾಚೂ ತಪ್ಪದೆ ಪಾಲಿಸಬೇಕು.ಎಲ್‌ಡಿಎಲ್‌ಸಿ ಮಟ್ಟ ಮಿತಿಯಲ್ಲಿ ಅಂದಾಜು <70 mg/dl  [2] ಇದೆಯೇ ಎಂಬುದನ್ನು ತಿಳಿದುಕೊಳ್ಳಲು ಲಿಪಿಡ್ ಪ್ರೊಫೈಲ್ ಪರೀಕ್ಷೆ ನಡೆಸಲಾಗುತ್ತದೆ.

ಲೇಖಕರು: ಹೃದ್ರೋಗತಜ್ಞ, ಫೋರ್ಟಿಸ್‌ ಆಸ್ಪತ್ರೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT