ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಬೊಜ್ಜು ಎಂದರೆ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಹೆಚ್ಚುವರಿ ದೇಹದ ತೂಕವಾಗಿದೆ. ಇದನ್ನು ಬಾಡಿ ಮಾಸ್ ಇಂಡೆಕ್ಸ್ನೊಂದಿಗೆ(ಬಿಎಂಐ) ಅಳೆಯಲಾಗುತ್ತದೆ. ಈ ಅಳತೆ ಶೇ.95ಕ್ಕಿಂತ ಅಧಿಕವಾಗಿದ್ದರೆ ಬೊಜ್ಜು ಎಂದೂ, ಶೇ.85ಕ್ಕಿಂತ ಹೆಚ್ಚಿದ್ದರೆ ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ.

ಕಳೆದ ಎರಡು ದಶಕಗಳಲ್ಲಿ ಚಿಕ್ಕ ವಯಸ್ಸಿನವರಲ್ಲಿ ಬೊಜ್ಜು ದ್ವಿಗುಣಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆಯಂತೆ 2025ರಲ್ಲಿ ಹತ್ತು ಮಕ್ಕಳಲ್ಲಿ ಒಬ್ಬರು ಅಥವಾ ಜಾಗತಿಕವಾಗಿ 188 ಮಿಲಿಯನ್ ಮಕ್ಕಳು ಬೊಜ್ಜು ಹೊಂದಿದ್ದಾರೆ.
.ಎಳೆಯ ಮಕ್ಕಳ ಅಭ್ಯಂಗ ಹೀಗಿರಬೇಕು ಎನ್ನುತ್ತದೆ ಭಾರತದ ಆರೋಗ್ಯ ಪದ್ಧತಿ .Health Tips: ಬೊಜ್ಜು ಇಳಿಸಲು ಇಲ್ಲಿವೆ ಸರಳ ಮಾರ್ಗಗಳು.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಮಕ್ಕಳಲ್ಲಿ ಬೊಜ್ಜು ಗಣನೀಯವಾಗಿ ಏರಿಕೆಯಾಗುತ್ತಿದೆ. ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರಮಾಣ 2005–2006ರಲ್ಲಿ ಶೇ1.5 ರಷ್ಟಿತ್ತು. ಅದು 2019–21ರಲ್ಲಿ ಶೇ 3.4ಕ್ಕೆ ಏರಿಕೆಯಾಗಿದೆ.

ಬೊಜ್ಜಿಗೆ ಪ್ರಮುಖ ಕಾರಣಗಳು

ಶಕ್ತಿಯ ಅಸಮತೋಲನ: ಕ್ಯಾಲೋರಿ ಸೇವನೆ ಅಧಿಕವಾಗಿದ್ದು, ಆ ಕ್ಯಾಲೋರಿಯನ್ನು ವ್ಯಹಿಸಲು ದೈಹಿಕ ಚಟುವಟಿಕೆಗಳು ಇಲ್ಲದಿರುವುದರಿಂದ, ಇದು ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. ಇದರಿಂದ ದೇಹ ಹಿಗ್ಗುವುದು ಮತ್ತು ಹೊಸ ಕೊಬ್ಬಿನ ಕೋಶ ರಚನೆಯಾಗುತ್ತವೆ.

ಹಾರ್ಮೋನುಗಳ ಅಸಮತೋಲನ: ವಿಸ್ತರಿಸಿದ ಕೊಬ್ಬಿನ ಕೋಶಗಳು ಲೆಪ್ಟಿನ್ ಕಿಣ್ವ, ಇನ್ಸುಲಿನ್, ಗ್ರೆಲಿನ್ ಹಾಗೂ ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುತ್ತವೆ.

ಲೆಪ್ಟಿನ್ ಹಸಿವನ್ನು ಹೆಚ್ಚಿಸುತ್ತದೆ: ಇನ್ಸುಲಿನ್ ಪ್ರತಿರೋಧವು ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸುತ್ತದೆ. ಗ್ರೆಲಿನ್ ನಿರಂತರ ಹಸಿವನ್ನು ಉಂಟುಮಾಡುತ್ತದೆ. ಕಾರ್ಟಿಸೋಲ್ ಮಟ್ಟ ಹೆಚ್ಚಾಗಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ.

ದೀರ್ಘಕಾಲದ ಉರಿಯೂತ: ಕರುಳಿನ ವಿಷಗಳೊಂದಿಗೆ ವಿಸ್ತರಿಸಿದ ಕೊಬ್ಬಿನ ಕೋಶಗಳು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತವೆ. ಇದು ಈ ಪ್ರತಿರಕ್ಷಣಾ ಕೋಶಗಳನ್ನು ಕೊಬ್ಬಿನ ಅಂಗಾಂಶಕ್ಕೆ ಆಕರ್ಷಿಸುತ್ತದೆ. ಪ್ರತಿರಕ್ಷಣಾ ಕೋಶಗಳು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಹೆಚ್ಚಿನ ಕೊಬ್ಬಿನಾಂಶ ಶೇಖರಣೆಯನ್ನು ಉತ್ತೇಜಿಸುತ್ತವೆ.

ವಿಷ ವರ್ತುಲ: ಇನ್ಸುಲಿನ್ ಪ್ರತಿರೋಧ ಮತ್ತು ಕರುಳಿನಲ್ಲಿ ಸೂಕ್ಷ್ಮಾಣುಗಳ ಅಸಮತೋಲನದ ಜೊತೆಗೆ ದೀರ್ಘಕಾಲದ ಉರಿಯೂತ ಕಾಣಿಸಿಕೊಳ್ಳುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತದೆ, ಕೊಬ್ಬಿನ ಶೇಖರಣೆಯನ್ನು ಬೆಂಬಲಿಸುತ್ತದೆ. ಬೊಜ್ಜನ್ನು ಉಲ್ಬಣಗೊಳಿಸುತ್ತದೆ. ಮದ್ಯಪಾನ ಮತ್ತು ಹೃದಯ ಕಾಯಿಲೆಗಳಿಂದ ಉಂಟಾಗುವ ಮಧುಮೇಹ, ಯಕೃತ್ತಿನ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಬಾಲ್ಯದ ಬೊಜ್ಜಿಗೆ ಕಾರಣವಾಗುವ ಅಂಶಗಳು

ಸಂಸ್ಕರಿಸಿದ ಆಹಾರ ಮತ್ತು ಅಧಿಕ ಕ್ಯಾಲೋರಿ ಆಹಾರಗಳ ಅತಿಯಾದ ಸೇವನೆ.

ದೈಹಿಕ ನಿಷ್ಕ್ರಿಯತೆ, ಮೊಬೈಲ್, ಟಿವಿಯ ವ್ಯಾಪಕ ಬಳಕೆ.

ನಗರೀಕರಣ ಮತ್ತು ದೈಹಿಕ ವ್ಯಾಯಾಮ ಮಾಡದಿರುವುದು.

ಆನುವಂಶಿಕ ಪ್ರವೃತ್ತಿ

ಡಿಜಿಟಲ್ ಮಾಧ್ಯಮ ಪ್ರಭಾವ ಮತ್ತು ಸಾಮಾಜಿಕ ಒತ್ತಡ.

ಶಾಲೆಗಳಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗಳ ಕೊರತೆ

ಪರಿಣಾಮಗಳು

ಚಿಕ್ಕ ವಯಸ್ಸಿನಲ್ಲಿಯೇ ಟೈಪ್ 2 ಮಧುಮೇಹ.

ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಅಪಾಯಗಳು

ಚಿಕ್ಕ ವಯಸ್ಸಿನಲ್ಲಿಯೇ ಮೂಳೆ ಆರೋಗ್ಯದ ಮೇಲೆ ಪರಿಣಾಮ

ಖಿನ್ನತೆ, ಭಯ ಮತ್ತು ಅವಮಾನದಂಥ ಸನ್ನಿವೇಶಗಳು ಬಾಲ್ಯದಿಂದ ಪ್ರೌಢಾವಸ್ಥೆಯವರೆಗೆ ಬೊಜ್ಜು ಮುಂದುವರಿದರೆ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ನಿಯಂತ್ರಣ ಹೇಗೆ?

ಸಕ್ಕರೆಯುಕ್ತ ಪಾನೀಯ ಸೇವನೆ ನಿಲ್ಲಿಸಿರಿ. ನೀರು, ಮಜ್ಜಿಗೆ ಮತ್ತು ಸೂಪ್ಗಳಂತಹ ಪರ್ಯಾಯ ದ್ರವಗಳನ್ನು ಸೇವಿಸಿ.

ನಿಯಮಿತ ಊಟ

ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಹೊರಾಂಗಣ ಚಟುವಟಿಕೆ ಮಾಡಿ.

ಮೊಬೈಲ್, ಟಿವಿಯಂಥ ಸ್ಕ್ರೀನ್ ಸಮಯವನ್ನು ದಿನಕ್ಕೆ 2 ಗಂಟೆಗಳಿಗಿಂತ ಕಡಿಮೆಗೆ ಸೀಮಿತಗೊಳಿಸುವುದು.

ಹಣ್ಣು, ತರಕಾರಿ, ಧಾನ್ಯ ಹಾಗೂ ಪ್ರೋಟೀನ್ಗಳಂತಹ ಆಹಾರಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು.

ನಿದ್ರೆಯ ಸಮಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು.

ಪ್ಯಾಕ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು.

ನಗರೀಕರಣದಿಂದಾಗಿ ಮನೆಯಲ್ಲಿ ಆರೋಗ್ಯಯುತವಾದ ಅಡುಗೆ ಸೇವಿಸುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ವೃತ್ತಿ ಬದುಕಿನಲ್ಲಿರುವ ಪಾಲಕರೇ ಮಕ್ಕಳಿಗೆ ಜಂಕ್ ಫುಡ್ಗಳನ್ನು ಅಭ್ಯಾಸ ಮಾಡಿಸುತ್ತಿದ್ದಾರೆ. ಬಾಯಿ ರುಚಿ ಹೆಚ್ಚಿಸುವ ಟೇಸ್ಟಿ ಪೌಡರ್ಗಳಿಂದ ಕೂಡಿದ ಈ ಆಹಾರಗಳು ಮಕ್ಕಳನ್ನು ಆಕರ್ಷಿಸುತ್ತವೆ. ಸಾಧ್ಯವಾದಷ್ಟು ಮನೆಯ ಊಟವನ್ನು ಅಭ್ಯಾಸ ಮಾಡಿಸಿ. ಹಣ್ಣು, ತರಕಾರಿ, ನಟ್ಸ್ ಹಾಗೂ ಕಾಳುಗಳಂತಹ ಆರೋಗ್ಯಯುತ ಆಹಾರವನ್ನು ಪ್ರೋತ್ಸಾಹಿಸಿ.

ಲೇಖಕರು: ಡಾ. ಸಂಧ್ಯಾ ಸಿಂಗ್ ಎಸ್, ಮುಖ್ಯ ವೈದ್ಯಕೀಯ ಆಹಾರ ತಜ್ಞರು, ಅಪೋಲೋ ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.