ಮಲಬದ್ಧತೆ ಎಲ್ಲರಲ್ಲೂ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆ. ಆದರೆ ಇತ್ತೀಚಿಗೆ ತೀರಾ 2 ವರ್ಷದ ಮಕ್ಕಳಲ್ಲೂ ಮಲಬದ್ಧತೆ ಕಂಡುಬರುತ್ತಿದೆ.

ಇದಕ್ಕೆ ಕಾರಣ ಈಗಿನ ಆಹಾರ ಪದ್ಧತಿ. ಜಂಕ್ ಫುಡ್, ಬ್ರೆಡ್, ಬಿಸ್ಕತ್ ಮತ್ತು ರಸ್ಕ್ ಅತಿಯಾದ ಸೇವನೆ. ಜತೆಗೆ ತರಕಾರಿ ಮತ್ತು ಹಣ್ಣುಗಳಂಥ ನಾರಿನಂಶ ಇರುವ ಆಹಾರಗಳನ್ನು ಸೇವನೆ ಮಾಡದೇ ಇರುವುದು. ಸಾಕಷ್ಟು ದ್ರವ ಸೇವನೆ ಮಾಡದಿರುವುದು ಪ್ರಮುಖ ಕಾರಣವಾಗಿದೆ. ಅಸಮತೋಲಿತ ಆಹಾರ ಸೇವನೆಯು ಮುಖ್ಯ ಕಾರಣ.

ಮಲಬದ್ಧತೆ ಸಮಸ್ಯೆ ಕಂಡುಬರಲು ಇಂಥದ್ದೆ ಋತು ಎಂದಿಲ್ಲ. ಆದರೆ, ಬೇಸಿಗೆಯಲ್ಲಿ ಸರಿಯಾಗಿ ನೀರು ಕುಡಿಯದೆ ಇದ್ದರೆ, ಜಡಜೀವನಶೈಲಿಯಿಂದ ಈ ಸಮಸ್ಯೆ ಹೆಚ್ಚುತ್ತದೆ. ಮನೆಯೊಳಗೆ ಸದಾ ಕುಳಿತಿರುವುದು, ಟಿ.ವಿ ಅಥವಾ ಮೊಬೈಲ್ ಪರದೆಯನ್ನು ನೋಡುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದು ಕಾರಣವಾಗಿದೆ. ಹಾಲು ಮತ್ತು ಡೈರಿ ಉತ್ಪನ್ನಗಳ ಅತಿಯಾದ ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು.

ಲಕ್ಷಣಗಳೇನು?: ಹೊಟ್ಟೆ ನೋವು, ಹಸಿವು ಕಡಿಮೆಯಾಗುವುದು, ಹೊಟ್ಟೆಯಲ್ಲಿ ಅಸ್ವಸ್ಥತೆ, ಗಟ್ಟಿಯಾದ ಮಲ ಮತ್ತು ಅನಿಯಮಿತವಾಗಿ ಕರುಳಿನಲ್ಲಿ ಸಂಕಟ ಉಂಟಾಗಬಹುದು.

ಮಕ್ಕಳಲ್ಲಿ ಕಂಡುಬರುವ ಮಲಬದ್ಧತೆಯನ್ನು ಪರಿಹರಿಸಲು ಮೊದಲು ಮಕ್ಕಳ ಆಹಾರ ಪದ್ಧತಿಯನ್ನು ಪೋಷಕರು ಪರಿಶೀಲಿಸಬೇಕು. ನಾರಿನಂಶ ಇರುವ ದ್ರವ ರೂಪದ ಆಹಾರ ಸೇವಿಸುವಂತೆ ನೋಡಿಕೊಳ್ಳಬೇಕು. ಇದರ ಜತೆಗೆ ನಿಯಮಿತವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.

ನಿರ್ಲಕ್ಷ್ಯ ಸಲ್ಲ: ದೀರ್ಘಕಾಲದ ಮಲಬದ್ಧತೆ ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಆಗಾಗ್ಗೆ ಹೊಟ್ಟೆ ನೋವಿಗೆ ತುತ್ತಾಗಬಹುದು. ಮಕ್ಕಳು ಆರೋಗ್ಯಕರ ದಿನಚರಿಯನ್ನು ಆರಂಭಿಸಲು ನಿಗದಿತ ಸಮಯದಲ್ಲಿ ಶೌಚಾಲಯ ಬಳಕೆಯನ್ನು ಪೋಷಕರು ಪ್ರೋತ್ಸಾಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.