ಬೇಸಿಗೆ ಆರಂಭವಾಗುತ್ತಿದ್ದಂತೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ಆದ್ದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಯಾವ ಪಾನೀಯಗಳು ಸೂಕ್ತ ಎಂಬ ಮಾಹಿತಿ ಇಲ್ಲಿದೆ.

ಬೇಸಿಗೆಯಲ್ಲಿ ಸೇವಿಸಬಹುದಾದ ತಂಪು ಪಾನೀಯಗಳು

ಮಸಾಲ ಮಜ್ಜಿಗೆ

1ಲೋಟ ಮಜ್ಜಿಗೆಗೆ ಅರ್ಧ ಲೋಟ ನೀರು ಸೇರಿಸಿ, ಚಿಟಿಕೆಯಷ್ಟು ಉಪ್ಪು, ಜೀರಿಗೆ, ಅರ್ಧ ಚಮಚ ಶುಂಠಿ ರಸ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ ಸೇವಿಸಿ. ಮಸಾಲ ಇಷ್ಟವಾಗದೆ ಇದ್ದರೆ ಬರೀ ಮಜ್ಜಿಗೆಯನ್ನು ಸೇವಿಸುವುದರಿಂದ ದೇಹ ತಂಪಾಗಿರಿಸಲು ಸಹಕಾರಿ.

ಎಳನೀರಿನ ತಿರುಳಿನ ಪಾನೀಯ

ಎಳನೀರು ಹಾಗೂ ಅದರ ತಿರುಳುನ್ನು ತೆಗೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಕಾಲು ಕಪ್ ಬೆಲ್ಲ,ಎಳನೀರು ಹಾಗೂ ಅದರ ಒಳಗಿನ ತಿರುಳುನ್ನು ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಅದಕ್ಕೆ ಚಿಟಿಕೆಯಷ್ಟು ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ ಸೇವನೆ ಮಾಡಬಹುದು. ಪ್ರತಿದಿನ ನಿಯಮಿತವಾಗಿ ಎಳನೀರು ಸೇವನೆ ಮಾಡುವುದರಿಂದ ಆರೋಗ್ಯಕ್ಕೂ ಉಪಯುಕ್ತವಾಗಿದೆ.

ಕಲ್ಲಂಗಡಿ ಜ್ಯೂಸ್

ಕಲ್ಲಂಗಡಿ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಇದನ್ನು ಹಾಗೆ ಸೇವನೆ ಮಾಡಲು ಇಷ್ಟವಾಗದೆ ಇದ್ದರೆ ಕಲ್ಲಂಗಡಿ ಹಣ್ಣಿನ ಬೀಜ, ಸಿಪ್ಪೆ ತೆಗೆದುಕೊಳ್ಳಿ. ಸಿಪ್ಪೆ ತೆಗೆದ ಅರ್ಧ ಕಲ್ಲಂಗಡಿ ಹಣ್ಣಿನ ಜೊತೆ 1ರಿಂದ2 ಚಮಚ ಸಕ್ಕರೆ ಅಥವಾ ಬೆಲ್ಲ ಸೇರಿಸಿ ರುಬ್ಬಿಕೊಂಡು ಸೇವನೆ ಮಾಡುವುದರಿಂದ ದೇಹದ ನಿರ್ಜಲೀಕರಣ ತಡೆಯಲು ಸಹಕರಿಸುತ್ತದೆ.

ಕರಬೂಜ ಹಣ್ಣಿನ ಜ್ಯೂಸ್

ಅರ್ಧ ಕರಬೂಜ ಹಣ್ಣಿನ ಬೀಜ, ಸಿಪ್ಪೆ ತೆಗೆದು ಕಾಲು ಕಪ್ ಬೆಲ್ಲ ಸೇರಿಸಿ ರುಬ್ಬಿಕೊಳ್ಳಿ. ಈ ಪಾನೀಯವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹ ನಿರ್ಜಲೀಕರಣ ಆಗುವುದನ್ನು ತಡೆಗಟ್ಟಲು ಸಹಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.