ಶನಿವಾರ, ಮೇ 30, 2020
27 °C

ಕೊರೊನಾ ಸಾಂತ್ವನ | ಹಿರಿಯ ನಾಗರಿಕರೆ? ಚಿಂತೆಗೆ ಬೈ ಹೇಳಿ

ಡಾ. ಪಿ.ಟಿ. ಸಿವಕುಮಾರ್ Updated:

ಅಕ್ಷರ ಗಾತ್ರ : | |

Prajavani

ನಿವೃತ್ತ ಬ್ಯಾಂಕ್ ಉದ್ಯೋಗಿ ನಿರಂಜನ (75) ಅವರು 70 ವರ್ಷದ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರಿಗೆ ಮಧುಮೇಹ, ರಕ್ತದೊತ್ತಡ ವಲ್ಲದೆ ಆಸ್ತಮಾ ಸಮಸ್ಯೆ ಕೂಡ ಇದೆ. ದಂಪತಿ, ಕೊರೊನಾ ಸೋಂಕಿನ ಚಿಂತೆಯಿಂದ ಕಂಗೆಟ್ಟಿದ್ದಾರೆ.

ತುರ್ತು ಸಂದರ್ಭ ಎದುರಾದರೆ ಏನು ಮಾಡಬೇಕು ಎಂಬ ಆತಂಕ ಶುರುವಾಗಿದೆ. ಅಮೆರಿಕದಲ್ಲಿ ನೆಲೆಸಿರುವ ತಮ್ಮ ಮಕ್ಕಳ ಆರೋಗ್ಯದ ಬಗ್ಗೆಯೂ ಚಿಂತೆ. ಹೊರಗೆ ಹೋಗಲಾಗದಂಥ ಪರಿಸ್ಥಿತಿ. ಹೆಚ್ಚಿನ ಸಮಯ ಟಿ.ವಿ. ಮುಂದೆ ಕುಳಿತಿರುತ್ತಾರೆ. ಇಬ್ಬರಿಗೂ ನಿದ್ರೆ ಸರಿಯಾಗಿ ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರಲ್ಲಿ ಇಂಥ ಸ್ಥಿತಿ ಸಾಮಾನ್ಯ ಎಂಬಂತಾಗಿದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿದ್ರೆಯ ಕೊರತೆ, ಆತಂಕ, ಭಯ, ಅಸಹಾಯಕತೆ ಮುಂತಾದ ಸಮಸ್ಯೆಗಳು ತಲೆದೋರಬಹುದು.

ಪರಿಹಾರಗಳೇನು?

* ಹತ್ತಿರದಲ್ಲಿ ವಾಸವಾಗಿರುವ ಬಂಧು- ಮಿತ್ರರು, ಸ್ವಯಂಸೇವಕರ ಸಹಾಯ ತೆಗೆದುಕೊಳ್ಳಬಹುದು.

* ದೈನಂದಿನ ದಿನಚರಿ ಸಿದ್ಧಪಡಿಸಿ, ಪಾಲಿಸಿ. ದಿನಕ್ಕೆ 6– 7 ಗಂಟೆ ನಿದ್ರಿಸಿ.

* ದೈನಂದಿನ ವ್ಯಾಯಾಮ: ನಿತ್ಯ 15 ನಿಮಿಷಗಳ ಕಾಲ ಸಾಧ್ಯವಿರುವ ಸರಳವಾದ ಯೋಗಾಸನ, ಪ್ರಾಣಾಯಾಮ ಮುಂತಾದವುಗಳನ್ನು ಮಾಡಿ.

* ಮನೆಗೆಲಸಗಳಲ್ಲಿ ತೊಡಗಿಕೊಳ್ಳಿ. ತರಕಾರಿ ಹೆಚ್ಚುವುದು,ಕಸ ಗುಡಿಸುವುದು, ಬಟ್ಟೆ ಮಡಿಸುವುದು, ಜೋಡಿಸುವುದು ಇತ್ಯಾದಿ.

* ಕೊರೊನಾ ಸೋಂಕಿನ ಕುರಿತ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಮಾತ್ರ ಪಡೆಯಿರಿ.

* ಓದುವುದು, ಬರವಣಿಗೆ, ಬುದ್ಧಿಗೆ ಕಸರತ್ತು ಕೊಡುವ ಚೆಸ್, ಸುಡೊಕು ಇತ್ಯಾದಿ ಆಟಗಳನ್ನು ಆಡುವುದು, ಹವ್ಯಾಸಗಳಾದ ಚಿತ್ರಕಲೆ, ಸಂಗೀತಗಳಲ್ಲಿ ತೊಡಗಿಸಿಕೊಳ್ಳುವುದು.

* ಸ್ನೇಹಿತರು, ಸಂಬಂಧಿಕರ ಜೊತೆ ಕರೆಗಳ ಮೂಲಕ ಸಂಪರ್ಕ ಇಟ್ಟುಕೊಳ್ಳಿ.

* ಹಿರಿಯ ನಾಗರಿಕರಲ್ಲಿಯೂ ಹೆಚ್ಚಿನ ಮಂದಿ ಈ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಮುಂಜಾಗ್ರತಾ ಕ್ರಮಗಳನ್ನು ಅವಶ್ಯವಾಗಿ ಪಾಲಿಸಿ.

ಸಹಾಯವಾಣಿ: 080 - 46110007 ಲೇಖಕ: ಪ್ರಾಧ್ಯಾಪಕರು, ಹಿರಿಯ ನಾಗರಿಕರ
ಮನೋವೈದ್ಯಕೀಯ ಸೇವೆ, ನಿಮ್ಹಾನ್ಸ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು