ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಂಕಷ್ಟ: ಸೀಮಂತವೂ ವಿಶಿಷ್ಟ

Last Updated 2 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮೊದಲ ಮಗು ಎಂದರೆ ಯಾರಿಗೆ ನಿರೀಕ್ಷೆ ಇರುವುದಿಲ್ಲ ಹೇಳಿ! ತಾನು ಗರ್ಭಿಣಿ ಎಂದು ಗೊತ್ತಾದಾಗಿನಿಂದ ಮಗು ಮಡಿಲು ಸೇರುವವರೆಗೂ ಆತಂಕದ ಜೊತೆ ನಿರೀಕ್ಷೆ, ನಿರೀಕ್ಷೆ ಜೊತೆ ಸಂತಸ.. ಹೀಗೆ ನಾನಾ ಭಾವಗಳು ಸುಳಿಯುತ್ತಿರುತ್ತವೆ. ಈ ಒಂಭತ್ತು ತಿಂಗಳ ಕಾಲಘಟ್ಟದಲ್ಲಿ ಸೀಮಂತ ಕೂಡ ಸಂಭ್ರಮದ ಭಾಗವೇ ಆಗಿದೆ.

ಕುಟುಂಬದವರನ್ನು, ನೆರೆಯವರನ್ನು ಕರೆದು ಭರ್ಜರಿ ಊಟ ಹಾಕಿಸಿ, ಹುಟ್ಟುವ ಮಗುವಿಗೆ ಅಮ್ಮನ ಮೂಲಕ ಹಿರಿಯರ ಹಾರೈಕೆ, ಆಶೀರ್ವಾದ ತಲುಪಿಸುವ ಸಂಭ್ರದ ಆಚರಣೆಯಿದು. ಆದರೆ, ಕೋವಿಡ್‌ ಈ ಸಂಭ್ರಮಕ್ಕೆ ಅಡ್ಡಿಯಾಗಿದೆ. ಹಾಗೆಂದು ಬೇಸರಿಸಬೇಕಾಗಿಲ್ಲ; ಕೋವಿಡ್‌ ಕಾರಣ ಒಡ್ಡಿ ಈ ಆಚರಣೆಯನ್ನು ಕೈಬಿಡಬೇಕಾಗಿಲ್ಲ. ಸೀಮಂತದ ಆಚರಣೆಗಾಗಿಯೇ ಹಲವರು ವೈವಿಧ್ಯಮಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ಕೋವಿಡ್ ಕಾಲದಲ್ಲಿ ಹೆಚ್ಚು ಜನ ಸೇರುವುದು ನಿಯಮದ ವಿರುದ್ಧ. ಹಾಗೆಯೇ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯ ನಿರ್ಧಾರವೂ ಅಲ್ಲ. ಆದರೆ ಬೇರೆ ರೀತಿಯಲ್ಲಿ ಸುರಕ್ಷಿತವಾಗಿ ನಾವು ಸಂಭ್ರಮ ಪಡಬಹುದು. ಹಾಗಾದರೆ, ಏನವು, ಬನ್ನಿ ನೋಡೋಣ...

1ಪ್ರದೇಶದಿಂದ ಪ್ರದೇಶಕ್ಕೆ ಕೊರೊನಾ ಸೋಂಕಿನ ಪ್ರಮಾಣದಲ್ಲಿ ವ್ಯತ್ಯಾಸ ಇರುತ್ತದೆ. ನಾವು ಇರುವುದು ಇಂಥ ಯಾವ ಪ್ರದೇಶದಲ್ಲಿ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಸೀಮಂತ ಕಾರ್ಯಕ್ರಮವನ್ನು ಮಾಡಿಕೊಳ್ಳಬಹುದು. ಸರ್ಕಾರ ನೀಡಿರುವ ಎಲ್ಲಾ ಕೋವಿಡ್‌ ನಿಯಮಗಳನ್ನು ‍‍ಪಾಲಿಸಿಕೊಂಡು, ಸುರಕ್ಷಿತ ಅಂತರ ಕಾಯ್ದುಕೊಂಡು ಆಚರಣೆ ಮಾಡಬಹುದು.

2 ಆನ್‌ಲೈನ್‌ ಮೂಲಕವೂ ಈ ಕಾರ್ಯಕ್ರಮವನ್ನು ಆಯೋಜಿಸಬಹುದು. ಮನೆಗೆ ಕರೆದು ದೊಡ್ಡ ಕಾರ್ಯಕ್ರಮ ಮಾಡಿದರೂ, ದೂರದ ಊರಿನಲ್ಲಿ ನೆಲೆಸಿರುವ ಆತ್ಮೀಯರನ್ನು ಕರೆಯಲು ಸಾಧ್ಯವಿಲ್ಲ. ಆದರೆ ಹೆಚ್ಚು ಜನರನ್ನು ಒಟ್ಟುಗೂಡಿಸುವ ಆನ್‌ಲೈನ್‌ನಲ್ಲಿ ಆಚರಣೆಯ ವಿಡಿಯೊಗಳನ್ನ ಹಂಚಿಕೊಳ್ಳಬಹುದು ಅಥವಾ ಲೈವ್‌ಗಳನ್ನು ಮಾಡಿ ದೂರದಲ್ಲಿದ್ದವರು ನೋಡುವಂತೆ ಮಾಡಬಹುದು. ಆನ್‌ಲೈನ್‌ ಮೂಲಕವೇ ಉಡುಗೊರೆಗಳನ್ನೂ ಕಳುಹಿಸಬಹುದು.

3 ಮನೆಗೆ ಹೆಚ್ಚು ಜನರನ್ನು ಆಹ್ವಾನಿಸುವಂತಿಲ್ಲ ಎನ್ನುವುದು ನಿಯಮ. ತೀರಾ ಹತ್ತಿರದವರನ್ನು ಕರೆದು ಕಾರ್ಯಕ್ರಮವನ್ನು ಮಾಡಬಹುದು. ಆದರೆ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಕಡ್ಡಾಯವಾಗಿರಲಿ. ಜೊತೆಗೆ, ತುಂಬಾ ಸಣ್ಣ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸುವ ಬದಲು, ವಿಸ್ತಾರವಾದ, ಗಾಳಿ ಬೆಳಕು ಹೆಚ್ಚಿರುವ ಜಾಗದಲ್ಲಿ ಕಾರ್ಯ‌ಕ್ರಮ ಮಾಡಿದರೆ ಹೆಚ್ಚು ಸೂಕ್ತ.

4 ತೀರಾ ಹತ್ತಿರದವರನ್ನು ಮನೆಗೆ ಕರೆದು ಕಾರ್ಯಕ್ರಮ ಮಾಡುವುದು, ಉಳಿದವರನ್ನು ಆನ್‌ಲೈನ್‌ ಮೂಲಕ ಸಂಪರ್ಕ ಮಾಡುವುದರಿಂದ ಒಂದೇ ಸಮಯದಲ್ಲಿ ಹೆಚ್ಚು ಜನರೊಂದಿಗೆ ಸಂಭ್ರಮ ಹಂಚಿಕೊಂಡಂತೆಯೂ ಆಗುತ್ತದೆ, ಹತ್ತಿರದವರು ಹತ್ತಿರ ಇದ್ದಂತೆಯೂ ಆಗುತ್ತದೆ.

ಸೀಮಂತ ಎನ್ನುವುದು ಸಂಭ್ರಮದ ಆಚರಣೆ; ಸಂತೋಷದ ಕ್ಷಣಗಳನ್ನು ಅನುಭವಿಸಲು ಇರುವ ಅವಕಾಶ. ಒಂದು ವೇಳೆ ಕೋವಿಡ್‌ ಕಾರಣ ಈ ಯಾವ ಮಾರ್ಗದಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡಲಾಗಲಿಲ್ಲ ಎಂದಾದರೆ ಬೇಸರಿಸಬೇಡಿ. ತಾಯಿ–ಮಗುವಿನ ಆರೋಗ್ಯವೇ ಮುಖ್ಯ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡರೆ ಸಾಕು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT