ಕೊರೊನಾ ಸೋಂಕು ಹರಡುತ್ತಿರುವ ಈ ಹೊತ್ತಿನಲ್ಲಿ ಬಸ್ ಅಥವಾ ಕಾರುಗಳಲ್ಲಿ ಭಯದೊಂದಿಗೆ ಜನ ಪ್ರಯಾಣ ಮಾಡುತ್ತಿದ್ದಾರೆ. ಭಯದ ಬದಲಿಗೆ ಎಚ್ಚರಿಕೆ ವಹಿಸಿದರೆ ಸಾಕು ಎನ್ನುತ್ತಾರೆ ವೈದ್ಯರು.

‘ಪ್ರಯಾಣಕ್ಕೆ ಹೊರಡುವ ಮುನ್ನ ಕುಡಿಯುವ ನೀರಿನಷ್ಟೇ ಮುಖ್ಯವಾಗಿ ಸಣ್ಣದಾದ ಸ್ಯಾನಿಟೈಸರ್ ಬಾಟಲಿಯನ್ನು ಕಿಸೆಯಲ್ಲಿ ಇಟ್ಟುಕೊಳ್ಳಬೇಕು. ಬಸ್ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆಗಳು ಹೇಳುತ್ತಿವೆ. ಆದರೂ ಅನುಮಾನಗಳಿದ್ದರೆ ಬಸ್ ಹತ್ತಿ ಕೂರುವ ಮುನ್ನ ಸೀಟಿಗೂ ಸ್ಯಾನಿಟೈಸರ್ ಹಾಕಿ ಸ್ವಚ್ಛಗೊಳಿಸಿಕೊಂಡೇ ಕುಳಿತುಕೊಳ್ಳಿ’ ಎಂಬುದು ಅವರು ನೀಡುವ ಸಲಹೆ.

‘ಬಸ್ ಹತ್ತುವಾಗ ಹ್ಯಾಂಡಲ್ಗಳನ್ನು ಹಿಡಿದುಕೊಳ್ಳುವ ಕಾರಣ ಕುಳಿತ ಕೂಡಲೇ ಎರಡೂ ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಳ್ಳಬೇಕು. ಪ್ರಯಾಣದ ಉದ್ದಕ್ಕೂ ಮಾಸ್ಕ್ ಕಡ್ಡಾಯವಾಗಿ ಮುಖಕ್ಕೆ ಧರಿಸಬೇಕೇ ಹೊರತು ಕುತ್ತಿಗೆಗೆ ಅಲ್ಲ. ಅದು ನಮ್ಮ ಮತ್ತು ಸಹ ಪ್ರಯಾಣಿಕರ ದೃಷ್ಟಿಯಿಂದ ಒಳ್ಳೆಯದು. ಮುಖ ಮುಟ್ಟಿಕೊಳ್ಳುವುದನ್ನು ಆದಷ್ಟೂ ಕಡಿಮೆ ಮಾಡಬೇಕು. ಕೈಗಳಿಗೂ ಗ್ಲೌಸ್ ಧರಿಸುವುದು ಉತ್ತಮ’ ಎನ್ನುತ್ತಾರೆ ರಾಯಚೂರಿನ ನವೋದಯ ಆಸ್ಪತ್ರೆಯ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಡಾ. ಭುವನೇಶ್ವರಿ ದಶರಥ್.

ಸ್ಲೀಪರ್ ಬಸ್ಗಳಲ್ಲಿ ರಾತ್ರಿ ಪ್ರಯಾಣ ಮಾಡುವುದಾದರೆ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ. ಸೀಟಿನ ಮೇಲೆ ಹಾಸುವ ಮತ್ತು ಹೊದಿಕೆಗಳನ್ನು ಮನೆಯಿಂದಲೇ ತಂದುಕೊಳ್ಳಬೇಕು. ಸ್ವಂತ ಕಾರಿನಲ್ಲಿ ಪ್ರಯಾಣ ಮಾಡುವುದಾದರೆ ಅಡ್ಡಿ ಇಲ್ಲ. ಟ್ಯಾಕ್ಸಿಗಳಲ್ಲಿ ಹೋಗುವಾಗ ಸೀಟನ್ನು ಸ್ಯಾನಿಟೈಸ್ ಮಾಡಿಕೊಂಡರೆ ಒಳ್ಳೆಯದು. ಬೇರೆ ವಸ್ತು ಮುಟ್ಟುವುದನ್ನು ಆದಷ್ಟೂ ಕಡಿಮೆ ಮಾಡುವುದು ಸೂಕ್ತ.

‘ಮನೆಗೆ ಹೋದ ನಂತರ ಪ್ರಯಾಣದ ವೇಳೆ ಧರಿಸಿದ್ದ ಬಟ್ಟೆ, ಹೊದಿಕೆ ಎಲ್ಲವನ್ನೂ ತೊಳೆಯುವುದು ಒಳ್ಳೆಯದು. ಮನೆಯಲ್ಲಿರುವ ಬೇರೆಯವರು ಆ ವಸ್ತುಗಳನ್ನು ಮುಟ್ಟದಂತೆ ನೋಡಿಕೊಳ್ಳಬೇಕು’ ಎಂಬುದು ಅವರು ನೀಡುವ ಸಲಹೆ.

ಪ್ರಯಾಣ ಮಾಡಿದವರ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಸೋಂಕಿನ ಯಾವುದೇ ಲಕ್ಷಣ ಕಾಣಿಸದೆ ಇರಬಹುದು. ಮನೆಯಲ್ಲಿದ್ದವರ ಶಕ್ತಿ ಕಡಿಮೆ ಇದ್ದರೆ ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಮನೆಯವರಿಂದ ಅಂತರ ಕಾಪಾಡುವುದು ಉತ್ತಮ.
–ಡಾ. ಭುವನೇಶ್ವರಿ ದಶರಥ್, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.