ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

H3N2 ಭಯ ಬೇಡ: ರೋಗ ಲಕ್ಷಣ, ಚಿಕಿತ್ಸೆ ಏನು? ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?

Last Updated 6 ಮಾರ್ಚ್ 2023, 14:31 IST
ಅಕ್ಷರ ಗಾತ್ರ

ಬೆಂಗಳೂರು: ಜನರು ಕೊರೊನಾದಿಂದ ಹೊರಬಂದಿರುವ ಬೆನ್ನಲ್ಲೇ ರಾಜ್ಯದಲ್ಲಿ ಎಚ್3ಎನ್2 (H3N2) ವೈರಾಣು ಸೋಂಕು ಹರಡುತ್ತಿದೆ. ಇದರಿಂದ ಜನತೆ ಆತಂಕ ಪಡುವ ಅಗತ್ಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ ಮೂರು‌ ತಿಂಗಳಲ್ಲಿ 26 ಎಚ್3ಎನ್2 ಪ್ರಕರಣಗಳು ಪತ್ತೆಯಾಗಿವೆ. ಇವುಗಳ ಪೈಕಿ ಬೆಂಗಳೂರಿನಲ್ಲಿ‌ 2 ಪ್ರಕರಣಗಳು ವರದಿಯಾಗಿವೆ.

ಎಚ್3ಎನ್2 ಹರಡುತ್ತಿರುವುದರಿಂದ ಜನರಲ್ಲಿ ಸಹಜವಾಗಿಯೇ ಆತಂಕ ಮನೆ ಮಾಡಿದೆ. ವೈರಾಣುವಿನಿಂದ ಗಾಬರಿಪಡುವ ಅಗತ್ಯವಿಲ್ಲ, ಸಾಮಾನ್ಯವಾಗಿ ಜ್ವರ, ಕೆಮ್ಮು ಕಾಣಿಸಿಕೊಳ್ಳಲಿದ್ದು ಯಾವುದೇ ಅಪಾಯ ಇಲ್ಲ. ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ತಜ್ಞರು ಹೇಳಿದ್ದಾರೆ.

ಎಚ್3ಎನ್2 ಸೋಂಕಿನ ರೋಗ ಲಕ್ಷಣಗಳು...

* ಮೈ ಕೈ ನೋವು

* ತೀವ್ರಶೀತ

* ಜ್ವರ ಮತ್ತು ಕೆಮ್ಮು

* ಉಸಿರಾಟದ ಸಮಸ್ಯೆ ಕಾಡಬಹುದು

* ಜ್ವರ, ಕೆಮ್ಮು ಕಾಣಿಸಿಕೊಂಡ ಎರಡು ಮೂರು ದಿನಗಳ ಬಳಿಕ ಕಡಿಮೆಯಾಗಲಿದೆ.

* ಕೆಮ್ಮು ಮತ್ತು ಕಫ ಎರಡು ವಾರಗಳವರೆಗೂ ಇರಲಿದೆ ಎಂದು ಐಸಿಎಂಆರ್‌ ತಜ್ಞರು ಹೇಳಿದ್ದಾರೆ.

ಯಾರು ಎಚ್ಚರಿಕೆಯಿಂದ ಇರಬೇಕು...

15 ವರ್ಷದ ಕೆಳಗಿನ ಮಕ್ಕಳು ಹಾಗೂ 65 ವರ್ಷ ದಾಟಿದ ವೃದ್ದರಿಗೆ ಎಚ್‌3ಎನ್‌2 ಸೋಂಕು ಸುಲಭವಾಗಿ ತಗುಲಬಹುದು‌. ಗರ್ಭಿಣಿಯರಿಗೂ ಸೋಂಕು ತಗುಲುವ ಸಾಧ್ಯತೆಗಳಿವೆ. ಇವರೆಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ಐಸಿಎಂಆರ್‌ ತಜ್ಞರು ಹೇಳಿದ್ದಾರೆ.

ಮುಂಜಾಗ್ರತಾ ಕ್ರಮಗಳು...

* ಕೈಗಳನ್ನು ಸಾಬೂನು ಬಳಸಿ ಚೆನ್ನಾಗಿ ತೊಳೆದುಕೊಳ್ಳಬೇಕು

* ಪ್ರತಿನಿತ್ಯ ಹೆಚ್ಚು ನೀರನ್ನು ಕುಡಿಯಬೇಕು

* ಅನಗತ್ಯವಾಗಿ ಗುಂಪು ಸೇರುವುದು ಕಡಿಮೆ ಮಾಡಬೇಕು

* ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು

* ಆರೋಗ್ಯ ಸಿಬ್ಬಂದಿ ಇನ್ಫ್ಲುಯೆಂಜಾ ಲಸಿಕೆಯನ್ನು ಪಡೆದುಕೊಳ್ಳಬೇಕು

* ಅನಗತ್ಯ ಓಡಾಟ ನಿಲ್ಲಿಸಬೇಕು

* ಬೇಸಿಗೆ ಆಗಿರುವುದರಿಂದ ಬೆಳಿಗ್ಗೆ 11ರಿಂದ‌ 3 ಗಂಟೆವರೆಗೂ ಬಿಸಿಲಿನಲ್ಲಿ ಓಡಾಟ ಕಡಿಮೆ ಮಾಡಬೇಕು

ಚಿಕಿತ್ಸೆ ಏನು?

ಎಚ್‌2ಎನ್‌3ಗೆ ಟೆಸ್ಟ್ ಕಿಟ್ ಹಾಗೂ ಪ್ರಯೋಗಾಲಯದ ವ್ಯವಸ್ಥೆಯ ಬೇರೆಯೇ ಇದೆ. ವೈದ್ಯರು ಪರೀಕ್ಷೆ ಮಾಡಿದ ಬಳಿಕ ಅಗತ್ಯ ಇದ್ದರೆ ಸ್ವಾಬ್‌ ಟೆಸ್ಟ್ ಮಾಡುತ್ತಾರೆ. ಸಾಮಾನ್ಯ ಜ್ವರ ಅಥವಾ ಕೆಮ್ಮಿಗೆ ನೀಡುವ ಚಿಕಿತ್ಸೆ ನೀಡಲಾಗಲಾಗುವುದು. ಪ್ರತ್ಯೇಕ ಚಿಕಿತ್ಸೆ ಇಲ್ಲ ಎಂದು ಐಸಿಎಂಆರ್‌ ತಜ್ಞರು ಹೇಳಿದ್ದಾರೆ.

ನಿಮಗೆ ಯಾವುದೇ ರೋಗಲಕ್ಷಣವಿದ್ದರೆ: ಏನು ಮಾಡಬೇಕು...

* ಮಾಸ್ಕ್ ಧರಿಸಿ, ಜನಸಂದಣಿ ಪ್ರದೇಶದಿಂದ ದೂರವಿರಿ

* ಕೆಮ್ಮುವಾಗ, ಸೀನುವಾಗ ಮುಖವನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಿ

* ದ್ರವ ಆಹಾರವನ್ನು ಹೆಚ್ಚು ಸೇವಿಸಿ

* ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ

* ಜ್ವರ ಮತ್ತು ಮೈಕೈ ನೋವಿದ್ದರೆ ಪ್ಯಾರಾಸಿಟಮಲ್ ಮಾತ್ರೆ ತೆಗೆದುಕೊಳ್ಳಿ

ನಿಮಗೆ ಯಾವುದೇ ರೋಗಲಕ್ಷಣವಿದ್ದರೆ: ಏನು ಮಾಡಬಾರದು?

* ಯಾರೊಂದಿಗೂ ಹಸ್ತಲಾಘವ ಮಾಡದಿರಿ

* ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ

* ವೈದ್ಯರ ಸಲಹೆ ಇಲ್ಲದೇ ಆ್ಯಂಟಿ ಬಯೋಟಿಕ್ ಮತ್ತು ಇತರ ಔಷಧಿಯನ್ನು ತೆಗೆದುಕೊಳ್ಳಬೇಡಿ

* ಇತರರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡಬೇಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT