ಕುಟುಂಬಗಳಲ್ಲಿ ಹೊಂದಾಣಿಕೆ, ಸಂತೃಪ್ತಿಯನ್ನು ಹೆಚ್ಚಿಸಿಕೊಂಡು ವಿರಸಗಳನ್ನು ಕಡಿಮೆ ಮಾಡಿಕೊಳ್ಳಲು ಈ ಕೆಲವು ಉಪಾಯಗಳನ್ನು ಪ್ರಯತ್ನಿಸಬಹುದು.

ಹೊಣೆಗಾರಿಕೆಯಲ್ಲಿ ಸ್ಪಷ್ಟತೆ: ಕುಟುಂಬದ ಪ್ರತೀ ಸದಸ್ಯರು ವಹಿಸಬೇಕಾದ ಪಾತ್ರ ಮತ್ತು ಹೊರಬೇಕಾದ ಹೊಣೆಗಾರಿಕೆಯಲ್ಲಿ ಸ್ಪಷ್ಟತೆ ಇರಬೇಕು. ಸಂಪ್ರದಾಯಕ್ಕೆ ಆದ್ಯತೆ ಕೊಡುವ ಮೊದಲು ಯಾವುದು ಸೂಕ್ತ ಎನ್ನುವುದನ್ನು ಗಮನಿಸಬೇಕು. ಗಂಡ ಮತ್ತು ಹೆಂಡತಿ ಇಬ್ಬರೂ ಒಟ್ಟಿಗೆ ಹೋಗುತ್ತಿದ್ದಾಗ ಮಳೆ ಬಂದರೆ ಛತ್ರಿಯನ್ನು ಸಂಪ್ರದಾಯದ ಪ್ರಕಾರ ಯಾರು ಹಿಡಿಯಬೇಕು? ಸಂಪ್ರದಾಯವೇ ಮುಖ್ಯ ಎಂದಾದರೆ, ಗಂಡನೇ. ನೆನೆಯಬಾರದು ಎಂದಾದರೆ, ಎತ್ತರವಾಗಿದ್ದವರು. ಮನೆಯ ಕೆಲಸಕ್ಕೆ ಸಂಪ್ರದಾಯ ಮತ್ತು ಲಿಂಗ ತಾರತಮ್ಯವನ್ನು ತಳುಕು ಹಾಕದೆ, ಯಾರಿಗೆ ಯಾವುದು ಸಾಧ್ಯವಾಗುವುದೋ ಆ ಕೆಲಸವನ್ನು ಮಾಡಬೇಕು. ಮನೆಗೆಲಸವನ್ನು ಹಂಚಿಕೊಳ್ಳಬೇಕು. ಮಕ್ಕಳಿದ್ದರೆ, ವಯಸ್ಸಿಗೆ ತಕ್ಕಂತೆ ಹೊಣೆಗಾರಿಕೆಯನ್ನು ಅವರಿಗೆ ಕೊಡಬೇಕು.

ಸ್ಪೇಸ್ ಇರಲಿ: ಮನೆಗಳಲ್ಲಿ ಹಾರಾಡುವ ಒಂದು ಕೋಣೆ ಇರಬೇಕು. ದಂಪತಿಗಳಾದರೆ ಅವರ ಮಲಗುವ ಕೋಣೆ. ಮಿಕ್ಕವರಿಗೆ ಪ್ರತ್ಯೇಕತೆ ಇರುವ ಜಾಗ. ತಮ್ಮ ಕೋಪ ಆರುವ ತನಕ ಕುಪಿತರು ಅಲ್ಲಿ ಕೆಲ ಕಾಲ ಇದ್ದು, ಕೋಪ ಕಡಿಮೆಯಾದ ನಂತರ ಹೊರ ಬರುವುದು ಕೋಪವನ್ನು ನಿಭಾಯಿಸುವ ಸುಲಭ ಕೌಶಲ್ಯ. ಕೋಪ ಬಂದಾಗ ನಿಯಂತ್ರಿಸಲು ಸಾಧ್ಯವಿಲ್ಲದೆ ಬಾಯಿ ಸಡಿಲವಾಗಿ ಸಲ್ಲದ ಮಾತುಗಳು ಹೊರಬೀಳುತ್ತವೆ. ಮೂರನೆಯವರು ಎದುರಿಗಿದ್ದರಂತೂ ಅಹಮಿಕೆ ಕೋಪವನ್ನು ಉತ್ತೇಜಿಸುತ್ತದೆ. ಕೋಪ ಬಂದಾಗ ಅರ್ಧ ನಿಮಿಷ ಉಸಿರನ್ನು ಬಿಗಿ ಹಿಡಿಯುವುದು ಸುಲಭವಾದ ಉಪಾಯ.

ಕೇಳಿಸಿಕೊಳ್ಳಿ: ಮತ್ತೊಬ್ಬರ ಮಾತು ಪೂರ್ತಿಯಾಗುವ ಮೊದಲೇ ನಮ್ಮ ಪ್ರತಿಕ್ರಿಯಿಸುವುದು, ಕೊಡಬಹುದಾದ ಪ್ರತಿಕ್ರಿಯೆಯನ್ನು ರೂಪಿಸಿಕೊಳ್ಳುತ್ತಿರುವುದು ಮುಕ್ತ ಸಂವಹನಕ್ಕೆ ದೊಡ್ಡ ಅಡಚಣೆ. ನಿನಗೇನು ಗೊತ್ತು ಎನ್ನುವುದು, ನಿನ್ನ ಜಾಗದಲ್ಲಿ ನೀನಿರು ಎನ್ನುವುದು, ಚೋಟುದ್ದ ಇದೀಯ, ಎಷ್ಟು ಮಾತಾಡ್ತೀಯ ಎನ್ನುವುದು, ಹೆಚ್ಚು ಮಾತಾಡಿದರೆ ಮದುವೆ ಮಾಡಿ ಕಳುಹಿಸಿ ಬಿಡುವೆ ಎಂದು ಹೆದರಿಸುವುದು, ನನ್ನ ಮಾತು ಕೇಳಕ್ಕಾಗಲ್ಲ ಅಂದರೆ ನಿನ್ನ ತವರು ಮನೆಗೆ ವಾಪಸು ಹೋಗು ಎಂದು ಬಾಯಿ ಮುಚ್ಚಿಸುವ ಪ್ರಯತ್ನ ಮಾಡುವುದು ಸಂವಹನ ಹೇಗಿರಬಾರದು ಎನ್ನುವುದಕ್ಕೆ ಕೆಲವು ಸ್ಯಾಂಪಲ್ಗಳು.

ಪರಸ್ಪರ ಗೌರವ: ಪ್ರತಿಯೊಬ್ಬರಿಗೂ ತಮ್ಮದೇ ಆದ ಅನಿಸಿಕೆಗಳಿರುತ್ತವೆ, ಭಾವನೆಗಳಿರುತ್ತವೆ, ಕನಸುಗಳಿರುತ್ತವೆ ಎಂಬುದನ್ನು ಗೌರವಿಸಬೇಕು. ಯಾವುದೇ ಒಂದು ಸಂಧರ್ಭದಲ್ಲಿ ಎಲ್ಲರೂ ಒಂದೇ ರೀತಿ ನಡೆದುಕೊಳ್ಳಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ನಮ್ಮ ಮನಸ್ಸು ಆಲ್ಜೀಬ್ರಾದ ಸೂತ್ರಗಳನ್ವಯ ನಡೆಯದು. ಕೆಲವರು ಪ್ರತಿಕ್ರಿಯೆಯಲ್ಲಿಯೇ ನಿರತರಾದರೆ ಕೆಲವರು ಸ್ಪಂದಿಸುವ ಗುಣ ಹೊಂದಿರುತ್ತಾರೆ. ಪ್ರತಿಕ್ರಿಯಿಸುವ ನಮ್ಮ ಅಭ್ಯಾಸವನ್ನು ಸ್ಪಂದಿಸುವ ಅಭ್ಯಾಸಕ್ಕೆ ಬದಲಿಸಿಕೊಂಡರೆ, ಪರಸ್ಪರ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಪ್ರತಿಕ್ರಿಯೆಯಲ್ಲಿ ಕೇವಲ ಪದಗಳ ಎಸೆತ ನಡೆಯುತ್ತದೆ. ಸ್ಪಂದಿಸುವುದರಲ್ಲಿ ಸಮಸ್ಯೆಯನ್ನು ಅಥವ ವಿವಾದವನ್ನು ಬಗೆಹರಿಸುವ ಕ್ರಿಯೆ ಇರುತ್ತದೆ.

ಸ್ವ ಆರೈಕೆ: ವಿಮಾನಯಾನದಲ್ಲಿ ಕೊಡುವ ಸೂಚನೆಗಳಲ್ಲಿ ಒಂದು, ಅನಾಹುತವಾದಲ್ಲಿ ಮೊದಲು ನೀವು ಆಮ್ಲಜನಕದ ಮಾಸ್ಕನ್ನು ಧರಿಸಿ ಅನಂತರ ಇತರರಿಗೆ ಸಹಾಯ ಮಾಡಿ ಎನ್ನುವುದು. ಗೃಹಿಣಿಯರು, ಇತರ ಸೇವೆ ಮಾಡುವುದರಲ್ಲಿ ತಮ್ಮ ಆರೈಕೆಯನ್ನೇ ಮರೆತು ಬಿಟ್ಟಿರುತ್ತಾರೆ. ಕೈ ಹಿಡಿದವರ ಅಥವ ತಮ್ಮ ಮಕ್ಕಳ ಅಗತ್ಯಗಳಿಗೆ ಕೊಡಬೇಕಾದ ಗಮನವನ್ನು ಕೊಡಲು ಸಮಯವೇ ಸಿಗದು. ಇವೆರಡೂ ಸಮಸ್ಯೆಗಳ ಎರಡು ಸ್ಯಾಂಪಲ್ಗಳು. ಇಲ್ಲಿ ಒತ್ತಿ ಹೇಳಬೇಕಾಗಿರುವ ಪ್ರಮುಖ ಅಂಶ ಎಂದರೆ ನಮ್ಮ ಮನಸ್ಸು ಮತ್ತು ದೇಹ ಆರೋಗ್ಯಕರವಾಗಿದ್ದರೆ ಮಾತ್ರ ನಾವು ಇತರರ ಆರೈಕೆ ಮಾಡುವುದಾಗಲೀ, ಇತರರ ಕ್ಷೇಮವನ್ನು ಗಮನಿಸುವುದಾಗಲೀ ಸಾಧ್ಯ. ಆದ್ದರಿಂದ ಸ್ವಂತ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಗಮನವನ್ನು ಕೊಡಲೇಬೇಕು.

ಸ್ವಸಮಯ: ತಮ್ಮದೇ ಆದ ವೇಳೆ, ತಮ್ಮದೇ ಆದ ಕೆಲಸಗಳು, ತಮ್ಮದೇ ಆದ ಆದ್ಯತೆಗಳು, ತಮ್ಮದೇ ಆದ ಆಯ್ಕೆಗಳು ಇರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದನ್ನು ಗುರುತಿಸಬೇಕು ಮತ್ತು ಗೌರವಿಸಬೇಕು.

ನಿರೀಕ್ಷೆಗಳು: ನಾವು ಯಾರಿಂದ ಏನು ನಿರೀಕ್ಷಿಸುತ್ತೇವೆ ಎನ್ನುವುದು ನಮಗೆ ಸ್ಪಷ್ಟವಾಗಿ ಗೊತ್ತಿರುತ್ತದೆ. ಆದರೆ ಅವರು ನಮ್ಮಿಂದ ಏನು ನಿರೀಕ್ಷಿಸುವರು ಎನ್ನುವುದನ್ನು ಅರಿಯುವ ಗೋಜಿಗೆ ಹೋಗಿರುವುದಿಲ್ಲ. ಎಷ್ಟೋ ವೇಳೆ ನಮ್ಮ ನಿರೀಕ್ಷೆಗಳನ್ನು ಸ್ಪಷ್ಟ ಪಡಿಸಿರುವುದೂ ಇಲ್ಲ. ಅನೇಕ ಕುಟುಂಬಗಳಲ್ಲಿ ಚೌಕಟ್ಟನ್ನು ಮೀರುವುದು ಮತ್ತು ಮತ್ತೊಬ್ಬರ ನಿರೀಕ್ಷೆಗಳನ್ನು ಅರಿಯಲು ಪ್ರಯತ್ನ ಮಾಡದಿರುವುದೇ ದಿನನಿತ್ಯದ ಕಲಹಗಳಿಗೆ ಕಾರಣವಾಗಿರುತ್ತದೆ.

ನಿಂದನೆ ಮೀರುವುದು: ಪ್ರಗತಿಗೆ, ನೆಮ್ಮದಿಗೆ ಭಂಗ ತರುವ ವ್ಯಕ್ತಿಗಳು ಎಲ್ಲ ಕುಟುಂಬಗಳಲ್ಲಿಯೂ ಇದ್ದೇ ಇರುತ್ತಾರೆ. ಅಂತಹವರ ನಿಂದನೆಯಲ್ಲಿಯೇ ನಮ್ಮ ಸಮಯ ಮತ್ತು ಶಕ್ತಿಯನ್ನು ಪೋಲು ಮಾಡುವ ಬದಲಿಗೆ ಅವರನ್ನು ಮೀರಿಯೂ ನಾವು ಏನು ಮಾಡಬಹುದು ಎನ್ನುವುದರ ಕಡೆ ಗಮನ ಕೊಡುವುದು ಕುಟುಂಬದಲ್ಲಿ ಸಕಾರಾತ್ಮಕತೆಯನ್ನು ಸೃಷ್ಟುಸುತ್ತದೆ.

ಸಮಯ ಹಂಚಿಕೆ: ಒಂಭತ್ತನೆಯದಾಗಿ ಪರಿವಾರಕ್ಕೆ ಮತ್ತು ಸÀ್ವಂತಿಕೆಗೆ ಸಮಯವನ್ನು ಕೊಟ್ಟುಕೊಳ್ಳಬೇಕು. ಇದಕ್ಕಾಗಿ ಪ್ರತಿದಿನವೂ ನಿಗದಿ ಪಡಿಸಲಾಗದೇ ಹೋಗಬಹುದು. ದಿನಗಟ್ಟೆಲೆ ಕನಿಷ್ಠ ಸಂಹವನವೂ ಇಲ್ಲದ ಅನೇಕ ಕುಟುಂಬಗಳಿವೆ. ಪ್ರತಿದಿನವೂ ಶುಭೋದಯ ಮತ್ತು ಶುಭರಾತ್ರಿಯನ್ನು ತಪ್ಪದೇ ಹೇಳುವುದು ಒಂದು ಮುಖ್ಯ ಸಂವಹನ. ಇದನ್ನು ಔಪಚಾರಿಕತೆ ಎಂದು ಭಾವಿಸದೆ, ಭಾವನಾತ್ಮಕ ಕರ್ತವ್ಯದ ರೀತಿ ಮಾಡಬೇಕು.

ಪ್ರವಾಸ: ಪ್ರವಾಸದಲ್ಲಿ ದಿನದ 24 ತಾಸು ಜೊತೆಯಲ್ಲಿರಲು ಸಾಧ್ಯ. ಪ್ರವಾಸ ನಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತವೆ. ಒಟ್ಟಾಗಿ ಎಲ್ಲರೂ ಸೇರಿ ಊಟ ಮಾಡುವ, ಒಂದೆಡೆ ಸೇರಿ ಮೋಜು ಮಾಡುವ ಚಟುವಟಿಕೆಗಳನ್ನು ಎಲ್ಲೆಡೆ ನೋಡುತ್ತೇವೆ. ಇವೆರಡೂ ತೀವ್ರ ಒತ್ತಡದ ಬದುಕಿನಲ್ಲಿ ಕಾಣುತ್ತಿರುವ ನೆಮ್ಮದಿಯ ಓಯಸಿಸ್ಗಳು.

ಈ ದಶ ಸೂತ್ರಗಳು ಬದುಕಿನಲ್ಲಿ ನೆಮ್ಮದಿಯನ್ನು ಸಂತಸವನ್ನು ತೃಪ್ತಿಯನ್ನು ಪೂರೈಸುವಲ್ಲಿ ತುಂಬ ಸಹಕಾರಿ.

ಕೌಟುಂಬಿಕ ಜೀವನದಲ್ಲಿ ವಿವಿಧ ಆದ್ಯತೆಗಳ ನಡುವೆ ಸಮತೋಲನವನ್ನು ಕಾಪಾಡಿಕೊಂಡು ಒತ್ತಡವನ್ನು ನಿಭಾಯಿಸಿ ಖುಷಿಯಿಂದ ಬದುಕುವುದು ಕಲಿಯಬೇಕು. ಮದುವೆಗೆ ಮುಂಚೆ ಮತ್ತು ಮದುವೆಯಾಗಿ ಮೂರು ತಿಂಗಳ ನಂತರ ಆಪ್ತಸಲಹೆಯನ್ನು ಪಡೆಯುವುದು ಉತ್ತಮ ದಾಂಪತ್ಯಕ್ಕೆ ದಾರಿ ತೋರಿಸಬಲ್ಲದು.
ಜಪಾನಿಯರು ಒಂದು ಮಾತು ಹೇಳುತ್ತಾರಂತೆ. ನೀವು ತಪ್ಪು ರೈಲು ಹತ್ತಿದ್ದೀರಿ ಎಂದು ಗೊತ್ತಾದರೆ, ತಕ್ಷಣವೇ ಮುಂದಿನ ನಿಲ್ದಾಣದಲ್ಲಿಯೇ ಇಳಿದು ಬಿಡಿ ಎಂದು. ನಿಮ್ಮ ಬದುಕು ನೀವು ಬಯಸಿದ ರೀತಿಯಲ್ಲಿ ಸಾಗುತ್ತಿಲ್ಲ ಎನಿಸಿದರೆ, ಅಗತ್ಯದ ಕ್ರಮಗಳನ್ನು ಹೆಚ್ಚು ವಿಳಂಬವಿಲ್ಲದೆ ತೆಗೆದುಕೊಂಡು ತೃಪ್ತ ಜೀವನದತ್ತ ಸಾಗುವುದು ವಿವೇಕದ ಹೆಜ್ಜೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.