ಹೃದ್ರೋಗವು ವಿಶ್ವದಾದ್ಯಂತ ಮರಣ ಪ್ರಮಾಣವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಆಗ್ನೇಯ ಏಷ್ಯಾ ಮತ್ತು ಭಾರತದ ಅಂಕಿಅಂಶಗಳು ಆತಂಕಕಾರಿ ಪರಿಸ್ಥಿತಿಯನ್ನು ಬಹಿರಂಗಪಡಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಲ್ಲಿ ಪ್ರತಿ ನಿಮಿಷಕ್ಕೆ 8 ಮಂದಿ ಹೃದ್ರೋಗದಿಂದ ಮೃತಪಟ್ಟಿದ್ದಾರೆ. ಈ ಪೈಕಿ ಅರ್ಧದಷ್ಟು ಮಂದಿ 70ವರ್ಷ ವರ್ಷಕ್ಕಿಂತ ಚಿಕ್ಕವರು ಮೃತಪಟ್ಟಿದ್ದಾರೆ. ಇದು ಹೃದಯ ರಕ್ತನಾಳದ ಕಾಯಿಲೆಗಳು ಎಷ್ಟು ಪರಿಣಾಮಕಾರಿ ಎಂದು ತೋರಿಸುತ್ತದೆ.

ಒಂದು ಕಾಲದಲ್ಲಿ ವಯಸ್ಸಾದವರನ್ನು ಬಾಧಿಸುವ ಅಸ್ವಸ್ಥತೆ ಎಂದು ಭಾವಿಸಲಾಗಿತ್ತು. ಆದರೆ ಇಂದು ಯುವಕರದಲ್ಲಿಯೂ ಸಾಮಾನ್ಯ ಕಾಯಿಲೆಯಾಗಿದೆ. ಭಾರತದಲ್ಲಿನ ಸಾವುಗಳ ಪೈಕಿ ಮೂರನೇ ಒಂದು ಭಾಗವು ಹೃದ್ರೋಗಗಳಿಂದ ಉಂಟಾಗುತ್ತವೆ.
.ಹಾಲಿನ ಉತ್ಪನ್ನಗಳು: ಚಳಿಗಾಲದಲ್ಲಿ ಇವುಗಳ ಸೇವನೆ ಆರೋಗ್ಯಕರವೇ? ಇಲ್ಲಿದೆ ಮಾಹಿತಿ.Joint Pain | ಚಳಿಗಾಲದಲ್ಲಿ ಕೀಲು ನೋವು, ಉರಿಯೂತ: ಇಲ್ಲಿವೆ ಪರಿಣಾಮಕಾರಿ ಸಲಹೆಗಳು.
ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ನೀವು ತಪ್ಪಿಸಬೇಕಾದ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿಯೋಣ.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು: ಅನ್ನ, ಬ್ರೆಡ್ ಹಾಗೂ ಪಿಜ್ಜಾದಂತಹ ಆಹಾರಗಳು ಹೆಚ್ಚಿನ ಜಿಐ (ಗ್ಲೈಸೆಮಿಕ್ ಇಂಡೆಕ್ಸ್) ಹೊಂದಿರುತ್ತವೆ. ಇವುಗಳಲ್ಲಿ ಕಾರ್ಬೋಹೈಡ್ರೇಟ್ ಸಮೃದ್ಧವಾಗಿವೆ. ಇವುಗಳ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹಠಾತ್ತಾಗಿ ಏರಿಕೆ ಮಾಡಬಹುದು.

ಅತಿಯಾದ ಉಪ್ಪು: ಅಧಿಕ ರಕ್ತದೊತ್ತಡವು ಹೃದ್ರೋಗಕ್ಕೆ ಪ್ರಮುಖ ಕೊಡುಗೆಯಾಗಿದೆ. ಹೆಚ್ಚು ಉಪ್ಪು ಸೇವಿಸುವುದರಿಂದ ನಿಮ್ಮ ರಕ್ತದೊತ್ತಡ ಹೆಚ್ಚಾಗಬಹುದು. ಇದು ಹೃದ್ರೋಗದ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಶೀತಲ ಪಾನೀಯ ಮತ್ತು ಸಿಹಿ ಪದಾರ್ಥ: ಶೀತಲ ಪಾನೀಯಗಳು ನಿಮ್ಮ ಹೃದಯವನ್ನು ಹಾನಿಗೊಳಿಸಬಹುದು. ಏಕೆಂದರೆ ಈ ಪಾನೀಯಗಳು ದೊಡ್ಡ ಪ್ರಮಾಣದಲ್ಲಿ ಸಕ್ಕರೆಯಿಂದ ತುಂಬಿವೆ. ಸಕ್ಕರೆಯ ಹೆಚ್ಚಿನ ಸೇವನೆ ಬೊಜ್ಜು, ರಕ್ತದಲ್ಲಿನ ಸಕ್ಕರೆಯ ಹೆಚ್ಚಿನ ಮಟ್ಟ ಮತ್ತು ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಧ್ಯಯನಗಳ ಪ್ರಕಾರ ಪ್ರತಿದಿನ 200 ಮಿಲಿ ಶೀತಲ ಪಾನೀಯವು ಹೃದಯ ವೈಫಲ್ಯದ ಅಪಾಯವನ್ನು ಶೇ 23ರಷ್ಟು ಹೆಚ್ಚಿಸುತ್ತದೆ.

ಸಂಸ್ಕರಿಸಿದ ಮಾಂಸ: ಸಂಸ್ಕರಿಸಿದ ಮಾಂಸವು ನೈಟ್ರೇಟ್ಗಳು ಎಂಬ ಸಂರಕ್ಷಕವನ್ನು ಹೊಂದಿದೆ. ಇದು ಸಕ್ಕರೆಯನ್ನು ಉತ್ಪಾದಿಸುವ ನಿಮ್ಮ ದೇಹದ ನೈಸರ್ಗಿಕ ಸಾಮರ್ಥ್ಯಕ್ಕೆ ಅಡ್ಡಿಪಡಿಸಬಹುದು. ಅಧಿಕ ರಕ್ತದೊತ್ತಡ ಮತ್ತು ಬೊಜ್ಜಿನ ಅಪಾಯವನ್ನು ಹೆಚ್ಚಿಸಬಹುದು. ಅಲ್ಲದೆ ಹೃದಯಾಘಾತಕ್ಕೆ ಕಾರಣವಾಗಬಹುದು.

ಹುರಿದ ಆಹಾರ: ಹುರಿದ ಆಹಾರಗಳು ಟ್ರಾನ್ಸ್ ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಸೋಡಿಯಂ ಮಟ್ಟ ಹೆಚ್ಚಾಗಿರುತ್ತವೆ. ಇವು ಅಪಧಮನಿಗಳ ಅಡಚಣೆಗೆ ನೇರವಾಗಿ ಸಂಬಂಧಿಸಿವೆ. ಹುರಿದ ಆಹಾರದ ಅತಿಯಾದ ಸೇವನೆ ಅಧಿಕ ರಕ್ತದೊತ್ತಡ, ಟೈಪ್ 2 ಮಧುಮೇಹ ಮತ್ತು ಬೊಜ್ಜಿಗೆ ಕಾರಣವಾಗಬಹುದು.

ಮದ್ಯಪಾನ: ಅತಿಯಾದ ಮದ್ಯ ಸೇವನೆ ಅಧಿಕ ರಕ್ತದೊತ್ತಡವನ್ನು ಉಂಟುಮಾಡಬಹುದು. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಮದ್ಯವು ವೆಂಟ್ರಿಕ್ಯುಲರ್ ಟಾಕಿಕಾರ್ಡಿಯಾ ಎಂಬ ಅನಿಯಮಿತ ಹೃದಯ ಲಯವನ್ನು ಉಂಟುಮಾಡಬಹುದು. ಇದು ಕೆಲವೊಮ್ಮೆ ಮಾರಣಾಂತಿಕವಾಗಬಹುದು.

ಲೇಖಕರು: ಡಾ. ಜಿ ಡಿಂಪು ಎಡ್ವಿನ್ ಜೊನಾಥನ್, ಸಲಹೆಗಾರ - ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್, ಆಸ್ಟರ್ ಆರ್ವಿ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.