ಹೋಳಿ ಆಚರಣೆ ಜೊತೆಗೆ ಚರ್ಮ ಮತ್ತು ಕೂದಲಿನ ಆರೋಗ್ಯದ ಕಡೆಗೂ ಕಾಳಜಿವಹಿಸಬೇಕು ಎಂದು ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ದೀಪ್ತಿ ಟಿ.ಎನ್ ಹೇಳಿದ್ದಾರೆ.

ಪ್ರತಿಹಬ್ಬಕ್ಕೂ ಈ ನೆಲದಲ್ಲಿ ತನ್ನದೇ ಆದ ಇತಿಹಾಸ, ಮಹತ್ವವಿದೆ. ಈ ಪೈಕಿ ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ವಿವಿಧ ರೀತಿಯಲ್ಲಿ ಆಚರಿಸುವ ಹೋಳಿ ಹಬ್ಬಕ್ಕೆ ವಿಶೇಷ ಪ್ರಾಶಸ್ತ್ಯವಿದೆ.

ಹೋಳಿ ಎಂದರೆ ಬಣ್ಣದೋಕುಳಿಯ ಹಬ್ಬ. ರಂಗುರಂಗಿನ ಬಣ್ಣ ಎರಚುವುದರೊಂದಿಗೆ ಸ್ನೇಹಿತರು, ಬಂಧು-ಬಳಗದವರು, ನೆರೆಹೊರೆಯವರೊಂದಿಗೆ ಪ್ರೀತಿ ಬೆಸೆಯುವ ಹಬ್ಬ. ಹಬ್ಬದ ಸಂಭ್ರಮ ಒಂದೆಡೆಯಾದರೆ ಮತ್ತೊಂದೆಡೆ ಹೋಳಿಯಲ್ಲಿ ಬಳಕೆಯಾಗುವ ಬಣ್ಣಗಳಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ಲೆಕ್ಕಿಸದೆ ಅನೇಕ ಮಂದಿ ಹೋಳಿ ಆಚರಿಸಲು ಮುಂದಾಗುತ್ತಾರೆ.

ಹೋಳಿ ಆಚರಣೆಯಲ್ಲಿ ಬಳಸಲಾಗುವ ಸಿಂಥೆಟಿಕ್ ಬಣ್ಣಗಳು ಕೂದಲಿನ ಬುಡದಲ್ಲಿ, ಉಗುರಿನ ಕೆಳಗೆ ಅಥವಾ ಕಿವಿ ಹಿಂಭಾಗದಲ್ಲಿ ಉಳಿದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ನೈಸರ್ಗಿಕ ಬಣ್ಣಗಳಿಂದ ಹೋಳಿ ಹಬ್ಬದ ಆಚರಣೆ ಮಾಡುವುದು ಸೂಕ್ತ. ನೈಸರ್ಗಿಕ ಬಣ್ಣಗಳನ್ನು ಸ್ವಚ್ಛಗೊಳಿಸುವುದು ಸುಲಭ.

ಹೋಳಿ ಹಬ್ಬಕ್ಕೆ ಬಳಸಲಾಗುವ ಬಣ್ಣಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು: ಬಣ್ಣಗಳಲ್ಲಿ ಬಳಸಲಾದ ರಾಸಾಯನಿಕ ಅಂಶಗಳಿಂದ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ, ತುರಿಕೆ, ಸುಟ್ಟಂತಹ ಅನುಭವಗಳು ಕಂಡುಬರುತ್ತವೆ. ಕೆಲವರಿಗೆ ಚರ್ಮ ಕೆಂಪಾಗಾಗುವ ಸಾಧ್ಯತೆಯೂ ಇರುತ್ತದೆ.

ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇಲ್ಲಿವೆ:

* ತ್ವಚೆ, ಕೈ ಕಾಲುಗಳಿಗೆ ಅಗತ್ಯವಿರುವಷ್ಟು ಮಾಯಿಶ್ಚರೈಸರ್ ಮತ್ತು ಸನ್‌ಸ್ಕ್ರೀನ್ ಬಳಸಿ. ಕೂದಲಿಗೆ ಎಣ್ಣೆಯನ್ನು ಹಚ್ಚಿ. ಆದರೆ ಅತಿಯಾಗಿ ಬಳಸದಿರುವುದು ಉತ್ತಮ.

* ಕೈ ಕಾಲಿನ ಉಗುರುಗಳನ್ನು ಸರಿಯಾಗಿ ಟ್ರಿಮ್ ಮಾಡಿ. ಈ ಮೂಲಕವೂ ಉಗುರುಗಳ ಕೆಳಗೆ ಬಣ್ಣ ಶೇಖರಣೆಯಾಗುವುದನ್ನು ತಪ್ಪಿಸಬಹುದು.

* ತುಂಬು ತೋಳಿರುವ ಬಟ್ಟೆಯನ್ನು ಧರಿಸಿ.

* ಕೋಮಲವಾದ ತುಟಿಗಳಿಗೆ ಲಿಪ್ ಬಾಮ್/ಯಾವುದಾದರೂ ಪೆಟ್ರೋಲಿಯಂ ಜೆಲ್ಲಿಗಳನ್ನು ಹಚ್ಚುವುದು ಒಳಿತು.

* ಬಣ್ಣ ಎರಚುವ ವೇಳೆ ಮಹಿಳೆಯರು ನಿಮ್ಮ ಕೂದಲನ್ನು ಮೇಲೆತ್ತಿ ಕಟ್ಟುವುದು ಒಳಿತು.

* ಹೋಳಿ ಆಚರಣೆಯ ಮುಂಚಿನ ಐದು ದಿನಗಳಲ್ಲಿ ಅಥವಾ ಆಚರಣೆಯ ನಂತರದ ಐದು ದಿನಗಳಲ್ಲಿ ಚರ್ಮಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಥ್ರೆಡಿಂಗ್, ಬ್ಲೀಚಿಂಗ್, ಲೇಸರ್ ಚಿಕಿತ್ಸೆ, ವಾಕ್ಸಿಂಗ್‌ಗಳನ್ನು ಮಾಡಿಸದಿರುವುದು ಉತ್ತಮ.

ಸಾವಯವ ಬಣ್ಣಗಳ ಬಳಕೆ ಹೆಚ್ಚಲಿ: ಸಿಂಥೆಟಿಕ್ ಬಣ್ಣಗಳಿಗೆ ಪರ್ಯಾಯವಾಗಿ ಸಾವಯವ ಬಣ್ಣಗಳನ್ನು ಬಳಸುವುದು ಸುರಕ್ಷಿತ. ಚರ್ಮರೋಗ ಹೊಂದಿರುವವರು ಯಾವುದೇ ರೀತಿಯ ಬಣ್ಣದ ಬಳಕೆ ಮಾಡದಿರುವುದು ಸೂಕ್ತ. ಹೋಳಿ ಆಚರಣೆಯ ನಂತರ ಆದಷ್ಟು ಬೇಗನೆ ಚರ್ಮವನ್ನು ನೀರಿನಿಂದ ಸ್ವಚ್ಛಗೊಳಿಸುವುದು ಅಗತ್ಯ. ಈ ವೇಳೆ ಚರ್ಮವನ್ನು ಉಜ್ಜುವುದು ಅಥವಾ ಅತಿಯಾದ ಬಿಸಿನೀರಿನಿಂದ ತೊಳೆಯುವುದನ್ನು ಮಾಡಬೇಡಿ. ಹೋಳಿ ನಂತರದ ಎರಡು ದಿನಗಳು ಯಾವುದೇ ರೀತಿಯ ಚರ್ಮದ ಆರೈಕೆ ಚಟುವಟಿಕೆಗಳನ್ನು ಮಾಡಲೂ ಹೋಗಬೇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.