ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೇ ಯೋಗಶಾಲೆ

Last Updated 2 ಜುಲೈ 2020, 5:49 IST
ಅಕ್ಷರ ಗಾತ್ರ

ಇಂದು ಯೋಗ ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ. ಕೊರೊನಾದಿಂದ ಜಗತ್ತು ತಲ್ಲಣಗೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಅದರ ಮಹತ್ವ ಮತ್ತೂ ಹೆಚ್ಚಿದೆ. ಕೊರೊನಾದ ಭಯ ಒಂದು ಕಡೆ; ಲಾಕ್‌ಡೌನ್‌ನ ಬಂಧನ ಮತ್ತೊಂದು ಕಡೆ. ಈ ಕಾರಣದಿಂದ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ – ಎರಡೂ ಒತ್ತಡದಲ್ಲಿದೆ. ಹೀಗಾಗಿ ಎರಡನ್ನೂ ಸ್ವಸ್ಥವಾಗಿಟ್ಟುಕೊಳ್ಳುವ ಅನಿವಾರ್ಯವಿದೆ. ಈ ಹಿನ್ನೆಲೆಯಲ್ಲಿ ಯೋಗ ಹೇಗೆ ನೆರವಾಗಬಲ್ಲದು ಎಂಬುದನ್ನು ಯೋಗಗುರು ‘ನಿರಾಮಯ ಯೋಗಕುಟೀರಮ್‌‘ನ ಮುಖ್ಯಸ್ಥ ಬಿ. ರಾಘವೇಂದ್ರ ಶೆಣೈ ವಿವರಿಸಿದರು.

ಬೆನ್ನುನೋವು, ತಲೆನೋವು, ಆಯಾಸ, ರಕ್ತದೊತ್ತಡ – ಇಂಥ ದಿನನಿತ್ಯದ ಹಲವು ಸಮಸ್ಯೆಗಳಿಗೆ ಈ ಲಾಕ್‌ಡೌನ್‌ ಸಮಯದಲ್ಲಿ ವೈದ್ಯಕೀಯ ನೆರವನ್ನು ಪಡೆಯುವುದು ಕೂಡ ಸುಲಭವಲ್ಲ. ಯೋಗ ಇವುಗಳ ನಿವಾರಣೆಗೆ ಹೇಗೆ ನೆರವಾಗಬಲ್ಲದು ಎಂಬುದನ್ನು ಅವರು ವಿಶದವಾಗಿ ವಿವರಿಸಿದರು. ಮನೆಯಲ್ಲಿಯೇ ಸುಲಭವಾಗಿ ದೊರೆಯುವ ಕುರ್ಚಿ, ಟೇಬಲ್‌ಗಳಂಥವನ್ನೂ ಕಿಟಕಿ, ಮಹಡಿ ಮೆಟ್ಟಿಲುಗಳನ್ಣೂ ಬಳಸಿಕೊಂಡು ಮಾಡಬಹುದಾದ ಯೋಗದ ಸುಲಭ ವಿಧಾನಗಳ ಬಗ್ಗೆ ಮಾಹಿತಿಯನ್ನು ಒದಗಿಸಿದರು.

‘ಸಾಮಾನ್ಯವಾಗಿ ಯೋಗ ಎಂದರೆ ಕಾಯಿಲೆಗಳನ್ನು ಗುಣಪಡಿಸುವ ತಂತ್ರಗಾರಿಕೆ ಎಂದಷ್ಟೆ ಅಭಿಪ್ರಾಯವಿದೆ. ಆದರೆ ಯೋಗ ಸಮಗ್ರ ಜೀವನವಿಧಾನದ ದರ್ಶನ; ಯೋಗದ ಮೂಲಕ ಮೋಕ್ಷವನ್ನೂ ಪಡೆಯಬಹುದು. ನನ್ನ ಗುರುಗಳಾದ ಯೋಗಾಚಾರ್ಯ ಬಿ.ಕೆ.ಎಸ್‌. ಐಯ್ಯಂಗಾರ್‌ ಅವರು ಯೋಗಶಿಕ್ಷಣದ ಬಗ್ಗೆ ಹಲವು ಸಂಶೋಧನೆಗಳನ್ನು ನಡೆಸಿ, ಅದರ ಫಲವನ್ನು ನಮಗೆ ನೀಡಿದ್ದಾರೆ’ ಎಂದು ರಾಘವೇಂದ್ರ ಶೆಣೈ ಹೇಳಿದರು. ವಿಶ್ವ ಯೋಗ ದಿನದ ಪ್ರಯುಕ್ತ ‘ಮನೆಯೇ ಯೋಗಶಾಲೆ’ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮವನ್ನು ‘ಪ್ರಜಾವಾಣಿ’ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT