ಶನಿವಾರ, ಸೆಪ್ಟೆಂಬರ್ 26, 2020
22 °C

ಕೋವಿಡ್‌ 19‌: ವಿಶ್ವದ ಶೇ 50ರಷ್ಟು ಯುವ ಜನರಲ್ಲಿ ಹೆಚ್ಚಿದ ಖಿನ್ನತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ವಿಶ್ವದ ಅರ್ಧದಷ್ಟು ಯುವ ಜನರು ಸಂದರ್ಭ, ಸನ್ನಿವೇಶಗಳಿಂದ ಖಿನ್ನತೆ ಅಥವಾ ಆತಂಕಕ್ಕೆ ಒಳಗಾಗುತ್ತಿದ್ದರೆ, ಮೂರನೇ ಒಂದು ಭಾಗದಷ್ಟು ಯುವ ಜನರು ಕೋವಿಡ್‌ 19 ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ಭವಿಷ್ಯದ ವೃತ್ತಿ ಜೀವನದ ಅನಿಶ್ಚತತೆ, ಅಭದ್ರತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐಎಲ್‌ಒ) ‘ಕೋವಿಡ್‌–19: ವೃತ್ತಿ, ಶಿಕ್ಷಣ, ಹಕ್ಕು ಮತ್ತು ಮಾನಸಿಕ ಯೋಗಕ್ಷೇಮದ ಮೇಲಿನ ಪರಿಣಾಮ’ ಕುರಿತು ನಡೆಸಿರುವ ಸಮೀಕ್ಷೆಯಿಂದ ಇದು ಗೊತ್ತಾಗಿದೆ. ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳದಿದ್ದರೆ, ಯುವ ಸಮೂಹ ಗಂಭೀರವಾದ ಸಂಕಷ್ಟದಲ್ಲಿ ಸಿಲುಕುತ್ತಾದೆ. ಇದು ಕೋವಿಡ್‌ನಿಂದ ಸಂಭವಿಸುವ ದೀರ್ಘಕಾಲಿಕ ಪರಿಣಾಮವೂ ಆಗಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

‘ಕೋವಿಡ್‌ ಬಿಕ್ಕಟ್ಟು ಎದುರಾಗುವುದಕ್ಕೂ ಮುನ್ನ ಯುವ ಸಮೂಹ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುವಲ್ಲಿ ನಿರತವಾಗಿತ್ತು. ಈಗ ಕೋವಿಡ್‌, ಜೀವನದ ಪ್ರತಿ ಹಂತದಲ್ಲೂ ಅಡ್ಡಿಯುಂಟು ಮಾಡುತ್ತಿದೆ. ಈಗ ತುರ್ತು ಕ್ರಮ ಕೈಗೊಳ್ಳಬೇಕಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಮೀಕ್ಷೆಯಲ್ಲಿ 112 ದೇಶಗಳಿಂದ 12 ಸಾವಿರಕ್ಕೂ ಹೆಚ್ಚು ಮಂದಿಯಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. 18 ರಿಂದ 29 ವಯಸ್ಸಿನೊಳಗಿನ ವಿದ್ಯಾವಂತರು ಮತ್ತು ಅಂತರ್ಜಾಲ ಸೌಕರ್ಯ ಹೊಂದಿರುವವರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು