ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 19 ಸೋಂಕಿತ ಮಕ್ಕಳಲ್ಲಿ ಉರಿಯೂತ ಲಕ್ಷಣ

ಹೊಸ ಅಧ್ಯಯನದಿಂದ ದೊರೆತ ಮಾಹಿತಿ
Last Updated 6 ಸೆಪ್ಟೆಂಬರ್ 2020, 7:14 IST
ಅಕ್ಷರ ಗಾತ್ರ

ಹೂಸ್ಟನ್: ಕೋವಿಡ್‌ 19 ಸೋಂಕಿನಿಂದ ಗುಣಮುಖರಾಗಿರುವ ಮಕ್ಕಳಲ್ಲಿ ಉರಿಯೂತದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳು ತ್ತಿದ್ದು, ಇದು ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಇಂಥ ಆರೋಗ್ಯ ಸಮಸ್ಯೆ ಎದುರಿಸುವ ಮಕ್ಕಳನ್ನು ಜೀವನಪೂರ್ತಿ ನಿಗಾವಹಿಸಿ ನೋಡಿಕೊಳ್ಳಬೇಕಾಗಬಹುದು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಇಕ್ಲಿನಿಕಲ್‌ಮೆಡಿಸಿನ್ ಎಂಬ ಪತ್ರಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ಆ ವರದಿಯ ವಿಶ್ಲೇಷಣೆ ಪ್ರಕಾರ, 600 ಮಕ್ಕಳನ್ನು ಮಲ್ಟಿ ಇನ್‌ಫ್ಲಮೇಟರಿ ಸಿಂಡ್ರೋಮ್‌ ಎಂಬ ರೋಗ ಲಕ್ಷಣ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಲಕ್ಷಣ ರಹಿತ ಕೋವಿಡ್‌ 19 ಸೋಂಕಿನಿಂದ ಗುಣಮುಖಗಿರುವ ಮಕ್ಕಳಲ್ಲಿ ಉರಿಯೂತದ ಲಕ್ಷಣಗಳು ಕಾಣಿಸಿಕೊಂಡಿವೆ.

‘ಅಧ್ಯಯನದ ಪ್ರಕಾರ, ಎಂಐಎಸ್‌–ಸಿ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮಕ್ಕಳಲ್ಲಿ ಕೋವಿಡ್‌ 19 ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲೇ ಬೇಕೆಂದೇನಿಲ್ಲ‘ ಎಂದುಅಮೆರಿಕದ ಸ್ಯಾನ್‌ಆಂಟೊನಿಯೊದ ಟೆಕ್ಸಾಸ್‌ ಆರೋಗ್ಯ ವಿಜ್ಞಾನ ಕೇಂದ್ರೀಯ ವಿಶ್ವವಿದ್ಯಾಲಯದ ಅಲ್ವಾರೊ ಮೊರೆರಾ ಅಭಿಪ್ರಾಯಪಟ್ಟಿದ್ದಾರೆ.

‘ಕೋವಿಡ್ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರಬಹುದು. ಹಾಗೆಯೇ, ಆ ಮಕ್ಕಳಲ್ಲಿ ರೋಗವಿರುವುದೂ ಯಾರಿಗೂ ತಿಳಿಯದಿರಬಹುದು. ಆದರೆ, ಕೆಲವು ವಾರಗಳ ನಂತರ ಆ ಮಕ್ಕಳ ದೇಹದಲ್ಲಿ ಉರಿಯೂತದ ಲಕ್ಷಣಗಳೂ ಕಾಣಿಸಿಕೊಳ್ಳಬಹುದು‘ ಎಂದು ಮೊರೆರಾ ಹೇಳಿದ್ದಾರೆ.

ಅಧ್ಯಯನದಲ್ಲಿ ಜನವರಿ 1 ರಿಂದ ಜುಲೈ 25ರ ನಡುವೆ ವಿಶ್ವದಾದ್ಯಂತ ವರದಿಯಾದ 662 ಎಂಐಎಸ್‌–ಸಿ ಪ್ರಕರಣಗಳನ್ನು ವಿಜ್ಞಾನಿಗಳು ಪರಿಶೀಲನೆಗೆ ಒಳಪಡಿಸಿದ್ದಾರೆ. ಅದರಲ್ಲಿ ಶೇ 71ರಷ್ಟು ಮಕ್ಕಳನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಶೇ 60ಷ್ಟು ಮಕ್ಕಳು ಏಳರಿಂದ ಒಂಬತ್ತು ದಿನಗಳವರೆಗೆ ಆಸ್ಪತ್ರೆಯಲ್ಲಿದ್ದು ರೋಗನಿರೋಧಕವನ್ನು ಹೆಚ್ಚಿಸಿಕೊಂಡಿದ್ದಾರೆ.

ವಿಜ್ಞಾನಿಗಳ ಪ್ರಕಾರ, ಅಧ್ಯಯನಕ್ಕೊಳಪಟ್ಟ 662 ಮಕ್ಕಳಿಗೂ ಜ್ವರವಿತ್ತು ಮತ್ತು ಶೇ 73.7 ಮಕ್ಕಳಿಗೆ ಹೊಟ್ಟೆನೋವು ಮತ್ತು ಅತಿಸಾರದಿಂದ ಬಳಲುತ್ತಿದ್ದರು. ಸೇ 68.3ರಷ್ಟ ಮಕ್ಕಳು ವಾಂತಿಯಿಂದ ಬಳಲುತ್ತಿದ್ದರು. 90 ಮಕ್ಕಳಿಗೆ ಎಕೋಕಾರ್ಡಿಯೊಗ್ರಾಂ ಪರೀಕ್ಷೆ ಮಾಡಿಸಲಾಗಿದ್ದು, ಶೇ 54ರಷ್ಟು ಪ್ರಕರಣಗಳು ಅಸಹಜವಾಗಿವೆ ಎಂದು ಅವರು ಹೇಳಿದ್ದಾರೆ.

‘ಇದು ಮಕ್ಕಳಿಗೆ ತಗಲುವ ಹೊಸ ಕಾಯಿಲೆಯಾಗಿದ್ದು, ಕೋವಿಡ್‌ 19 ಸೋಂಕಿಗೆ ಸಂಬಂಧಿಸಿರಬಹುದು‘ ಎಂದು ಮೊರೆರಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT