ಎಲ್ಲಾ ವಯಸ್ಸಿನವರಲ್ಲಿಯೂ ಪ್ರೀತಿ ಹುಟ್ಟುತ್ತದೆ. ಆದರೆ, ಇದು ಹೆಚ್ಚು ಕಾಣಿಸಿಕೊಳ್ಳುವುದು ಯೌವ್ವನಾವಸ್ಥೆಯಲ್ಲಿರುವಾಗ. ಏಕೆಂದರೆ ಈ ವಯಸ್ಸಿನಲ್ಲಿ ಮನಸ್ಸು ಹೊಸ ಭಾವನೆಗಳೊಂದಿಗೆ ಬೆರೆಯಲು ಇಚ್ಚಿಸುತ್ತದೆ. ಹಾಗಾದರೆ ಈ ವಯಸ್ಸಿನಲ್ಲಿ ಪ್ರೀತಿ ಹುಟ್ಟಲು ಕಾರಣಗಳೇನು? ಅವುಗಳ ವಿಧಗಳು ಯಾವುವು ಎಂಬುದನ್ನು ತಿಳಿಯೋಣ.

ಯೌವ್ವನದ ಪ್ರೀತಿ ತುಸು ವಿಭಿನ್ನವಾಗಿರುತ್ತದೆ. ಆ ವೇಳೆ ಮನಸ್ಸು ಭಾವನಾತ್ಮಕ ಹಾಗೂ ಸ್ಪಂದನಾಶೀಲವಾಗಿರುತ್ತದೆ. ಇದು ಕೆಲವೊಮ್ಮೆ ಆಕರ್ಷಣೆ ಅಥವಾ ನಿಜವಾದ ಬಂಧನವೂ ಆಗಿರಬಹುದು. ಈ ಹಂತದಲ್ಲಿ ಪ್ರೀತಿ ಉತ್ಸಾಹ ಅಥವಾ ಆಕರ್ಷಣೆಯಿಂದ ಶುರುವಾಗಿ, ಆತ್ಮೀಯತೆ ಹಾಗೂ ಬದ್ಧತೆಯಾಗಿ ಬೆಳೆಯುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ.
.ಸಿನಿ ಸುದ್ದಿ: ಸೆಟ್ಟೇರಿದ ‘ಲವ್ ಕೇಸ್’ .ನಿನ್ನ ಪ್ರೀತಿ ನಿಜವಾಗಿದ್ದರೆ ವಿಷ ಸೇವಿಸು ಎಂದ ಪ್ರಿಯತಮೆಯ ಕುಟುಂಬ:ಮುಂದೇನಾಯ್ತು!.
ಪ್ರೀತಿಯ ತ್ರಿಕೋನ ಸಿದ್ದಾಂತ ಎನು ಹೇಳುತ್ತದೆ?

ಮನೋವಿಜ್ಞಾನಿ ರಾಬರ್ಟ್ ಸ್ಟರ್ನ್ಬರ್ಗ್ ಅವರು ಪ್ರೀತಿಯ ಕುರಿತು ‘ಪ್ರೀತಿಯ ತ್ರಿಕೋನ ಸಿದ್ದಾಂತ’ (Triangular Theory) ವನ್ನು ಪ್ರತಿಪಾದಿಸಿದ್ದಾರೆ. ಅವರ ಪ್ರಕಾರ ಪ್ರೀತಿಗೆ ಮೂರು ಪ್ರಮುಖ ಅಂಶಗಳು ಇವೆ. ಅವುಗಳೆಂದರೆ,

ಸೌಹಾರ್ದತೆ: ಮನಸ್ಸಿಗೆ ಹತ್ತಿರವಾಗುವುದು, ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವ ಭಾವನೆ ಹಾಗೂ ಆತ್ಮೀಯತೆ.

ಆಕರ್ಷಣೆ ಅಥವಾ ಉತ್ಸಾಹ : ಭಾವೋದ್ರೇಕ, ಉತ್ಸಾಹ ಅಥವಾ ದೈಹಿಕ ಆಕರ್ಷಣೆಯು ಪ್ರೀತಿಗೆ ಕಾರಣವಾಗಬಹುದು.

ಬದ್ಧತೆ: ಸಂಬಂಧವನ್ನು ಉಳಿಸಿಕೊಳ್ಳುವ ದೃಢನಂಬಿಕೆ ಮತ್ತು ನಿಷ್ಠೆ.

ಪ್ರೀತಿಯಲ್ಲಿನ 6 ವಿಧಗಳಿವು:

ಮನೋವಿಜ್ಞಾನಿ ರಾಬರ್ಟ್ ಸ್ಟರ್ನ್ಬರ್ಗ್ ಅವರು ಪ್ರೀತಿಯ ಆರು ವಿಧಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳೆಂದರೆ,

ವ್ಯಾಮೋಹ : ಆಕರ್ಷಣೆಯಿಂದ ಉಂಟಾದ ಪ್ರೀತಿ. ಇದು ತಾತ್ಕಾಲಿಕವಾಗಿ ಉತ್ಸಾಹದಿಂದ ಕೂಡಿರುತ್ತದೆ.

ಭಾವನೆ ಇಲ್ಲದ ಪ್ರೀತಿ: ಇದು ಬದ್ಧತೆ ಇರುವ ಪ್ರೀತಿಯಾಗಿದೆ. ಆದರೆ ಭಾವನೆಗಳು ಇರುವುದಿಲ್ಲ.

ಪ್ರಣಯ ಪ್ರೇಮ: ಈ ಪ್ರೀತಿ ಸೌಹಾರ್ದತೆ ಮತ್ತು ಆಕರ್ಷಣೆ ಎರಡನ್ನೂ ಒಳಗೊಂಡಿರುತ್ತದೆ. ಹೃದಯಕ್ಕೆ ಹತ್ತಿರವಾದ ಪ್ರೀತಿಯಾಗಿದೆ.

ಸ್ನೇಹಭಾವದ ಪ್ರೀತಿ : ಈ ಪ್ರೀತಿಯಲ್ಲಿ ಸೌಹಾರ್ದತೆ ಮತ್ತು ಬದ್ಧತೆ ಇರುತ್ತದೆ. ದೀರ್ಘಕಾಲದ ಸ್ನೇಹ ಪ್ರೀತಿಯ ರೂಪ ಪಡೆದು ವಿವಾಹವಾಗುತ್ತದೆ.

ಪರಿಪೂರ್ಣ ಪ್ರೀತಿ : ಸೌಹಾರ್ದತೆ, ಬದ್ಧತೆ ಹಾಗೂ ಆಕರ್ಷಣೆ ಮೂರೂ ಅಂಶಗಳ ಸಮನ್ವಯತೆ ಇರುತ್ತದೆ. ಈ ಪ್ರೀತಿ ನಿಜವಾದ ಹಾಗೂ ಶಾಶ್ವತ ಪ್ರೀತಿ ಎಂದು ಮನೋವಿಜ್ಞಾನ ಹೇಳುತ್ತದೆ.

ಪ್ರೀತಿಗೆ ವಯಸ್ಸಿಲ್ಲ, ಆದರೆ ಯೌವ್ವನದ ಪ್ರೀತಿ ಜೀವಂತವಾಗಿರುತ್ತದೆ. ಅದು ಮನಸ್ಸಿನ ಭಾವನೆ, ಆತ್ಮೀಯತೆ ಮತ್ತು ಅರಿವಿನ ಸೇತುವೆಯಾಗಿದೆ. ಮನೋವಿಜ್ಞಾನ ಹೇಳುವಂತೆ ಪ್ರೀತಿಯು ಕೇವಲ ಆಕರ್ಷಣೆಯಲ್ಲ. ಸೌಹಾರ್ದತೆ, ಬದ್ಧತೆ ಹಾಗೂ ಆಕರ್ಷಣೆಯ ಸಮತೋಲನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.