ಶುಕ್ರವಾರ, ಏಪ್ರಿಲ್ 3, 2020
19 °C
ಒಂದೇ ಸೂರಿನಡಿ ಸಕಲ ಚಿಕಿತ್ಸೆ

ರಾಮಯ್ಯ ಸ್ಮಾರಕ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನಲ್ಲಿ, ಅಷ್ಟೇ ಏಕೆ, ರಾಜ್ಯದಲ್ಲಿ ಎಂ.ಎಸ್‌. ರಾಮಯ್ಯ ಸ್ಮಾರಕ ಆಸ್ಪತ್ರೆಯ ಕುರಿತು ಕೇಳದವರು ಯಾರಿದ್ದಾರೆ ಹೇಳಿ? ಅತ್ತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇತ್ತ ನಗರದ ಕೇಂದ್ರ ಭಾಗ ಎರಡಕ್ಕೂ ಹತ್ತಿರದಲ್ಲಿರುವ ಈ ಆಸ್ಪತ್ರೆ, ನಗರದ ಬಹುತೇಕ ಪ್ರದೇಶಗಳಿಗೆ ನೇರ ಸಂಪರ್ಕ ಸೌಲಭ್ಯವನ್ನು ಹೊಂದಿದೆ. 85 ಎಕರೆಗಳಷ್ಟು ದೊಡ್ಡ ಕ್ಯಾಂಪಸ್‌ನಲ್ಲಿ 4 ಲಕ್ಷ ಚದರ ಅಡಿಗಳಷ್ಟು ವಿಶಾಲವಾದ ಕಟ್ಟಡದಲ್ಲಿ ಅತ್ಯಾಧುನಿಕ ಎಲ್ಲ ಚಿಕಿತ್ಸಾ ಸೌಲಭ್ಯಗಳೂ ಮೇಳೈಸಿವೆ. ಶ್ರೇಷ್ಠಗುಣಮಟ್ಟದ ಡಯಾಗ್ನೊಸ್ಟಿಕ್‌ (ರೋಗ ಪರೀಕ್ಷೆ) ಸೌಲಭ್ಯವನ್ನು ಆಸ್ಪತ್ರೆ ಹೊಂದಿದೆ. ತುರ್ತು ನಿಗಾ ಘಟಕದ 108 ಹಾಸಿಗೆಗಳೂ ಸೇರಿದಂತೆ 500 ಹಾಸಿಗೆಗಳ ಸಾಮರ್ಥ್ಯದ ದೊಡ್ಡ ಆಸ್ಪತ್ರೆ ಇದಾಗಿದೆ.

ಎನ್‌ಎಬಿಎಚ್‌ ಮತ್ತು ಎನ್‌ಎಬಿಎಲ್‌ನಂತಹ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಿಂದ ಮಾನ್ಯತೆ ಪಡೆದಿರುವ ಈ ಆಸ್ಪತ್ರೆಯಲ್ಲಿ ಎಲ್ಲ ಸೂಪರ್‌ ಸ್ಪೆಷಾಲಿಟಿ ಸೌಲಭ್ಯಗಳೂ ಇವೆ. ಭಾರತದಲ್ಲಿರುವ ಜಾಗತಿಕ ಗುಣಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಒಂದೆನಿಸಿದ ಈ ಆಸ್ಪತ್ರೆಯು ಗುಣಮಟ್ಟದ ಚಿಕಿತ್ಸೆ, ಸ್ಪಷ್ಟವಾದ ರೋಗನಿರ್ಣಯ ಮತ್ತು ನಿಖರ ಸಂಶೋಧನೆಗೆ ಹೆಸರಾಗಿದೆ. ದಿನದ 24 ಗಂಟೆಗಳ ಕಾಲವೂ ತಜ್ಞ ವೈದ್ಯರ ಸೇವೆಯನ್ನು ಹೊಂದಿದ ನಗರದ ಕೆಲವೇ ಆಸ್ಪತ್ರೆಗಳಲ್ಲಿ ರಾಮಯ್ಯ ಸ್ಮಾರಕ ಆಸ್ಪತ್ರೆ ಕೂಡ ಒಂದಾಗಿದೆ. ಆಸ್ಪತ್ರೆಯು 350 ತಜ್ಞ ವೈದ್ಯರು, 600 ನರ್ಸ್‌ಗಳು ಹಾಗೂ 300 ಅರೆವೈದ್ಯಕೀಯ ಸಿಬ್ಬಂದಿಯನ್ನು ಹೊಂದಿದ್ದು, ‘ಸಂತಸದಿಂದ ಸೇವೆ’ ಎಂಬ ಧ್ಯೇಯವಾಕ್ಯದೊಂದಿಗೆ ಅವರೆಲ್ಲ ಕರ್ತವ್ಯನಿರತರಾಗಿದ್ದಾರೆ.

ಜಾಗತಿಕ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಹೊಂದಿದ ಹಲವು ವಿಶೇಷ ವಿಭಾಗಗಳನ್ನು ಆಸ್ಪತ್ರೆ ಹೊಂದಿದೆ. ವ್ಯಾಸ್ಕುಲರ್‌ ಸರ್ಜರಿ (ರಕ್ತನಾಳಗಳ ಶಸ್ತ್ರಚಿಕಿತ್ಸೆ) ಯುರಾಲಜಿ (ಮೂತ್ರಪಿಂಡ ಹಾಗೂ ಮೂತ್ರರೋಗ ಚಿಕಿತ್ಸೆ), ನ್ಯೂರೋ ಸರ್ಜರಿ ಮತ್ತು ನ್ಯೂರೋಲಜಿ (ನರರೋಗ ಶಸ್ತ್ರಚಿಕಿತ್ಸೆ ಹಾಗೂ ನರಶಾಸ್ತ್ರ) ಚಿಕಿತ್ಸೆಗೆ ಸಂಬಂಧಿಸಿದ ಸೂಪರ್‌ ಸ್ಪೆಷಾಲಿಟಿ ಸೌಲಭ್ಯಗಳು ಆಸ್ಪತ್ರೆಯಲ್ಲಿವೆ.

ವ್ಯಾಸ್ಕುಲರ್‌ ಸರ್ಜರಿ

ವ್ಯಾಸ್ಕುಲರ್‌ ಸರ್ಜರಿಗೆ ಸಂಬಂಧಿಸಿ ದೇಶದಲ್ಲಿರುವ ಕೆಲವೇ ಕೆಲವು ಅತ್ಯುತ್ತಮ ಆಸ್ಪತ್ರೆಗಳಲ್ಲಿ ರಾಮಯ್ಯ ಸ್ಮಾರಕ ಆಸ್ಪತ್ರೆ ಕೂಡ ಒಂದಾಗಿದೆ. ರಕ್ತನಾಳಗಳ ಕಾಯಿಲೆಗಳ ನಿರ್ವಹಣೆಗೆ ಪ್ರತ್ಯೇಕ ವಿಭಾಗ ಹೊಂದಿದ ಬೆಂಗಳೂರಿನ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಇದರದ್ದಾಗಿದೆ. ‘ಮಧುಮೇಹ ಪಾದ’ದ ಚಿಕಿತ್ಸೆಗೂ ಇಲ್ಲಿ ಸೌಲಭ್ಯ ಉಂಟು. ವ್ಯಾಸ್ಕುಲರ್‌ ಸರ್ಜರಿಗೆ ಸಂಬಂಧಿಸಿ ಅಂತರ ವಿಭಾಗೀಯ ಸಂಯೋಜಿತ ಚಿಕಿತ್ಸಾ ಸೌಲಭ್ಯವಿರುವುದು ಆಸ್ಪತ್ರೆಯ ಹೆಚ್ಚುಗಾರಿಕೆಯಾಗಿದೆ.

ಯುರಾಲಜಿ

ರಾಮಯ್ಯ ಸ್ಮಾರಕ ಆಸ್ಪತ್ರೆಯ ಯುರಾಲಜಿ ವಿಭಾಗವು ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳ ರೋಗಿಗಳಿಗೂ ಅತ್ಯುತ್ತಮ ಚಿಕಿತ್ಸಾ ಕೇಂದ್ರವೆನಿಸಿದೆ. ಪ್ರತಿವರ್ಷ 20 ಸಾವಿರಕ್ಕೂ ಅಧಿಕ ರೋಗಿಗಳು ಈ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಮೂತ್ರರೋಗಕ್ಕೆ ಸಂಬಂಧಿಸಿದ ಅತ್ಯಂತ ಸವಾಲೆನಿಸುವ ಪ್ರಕರಣಗಳಲ್ಲೂ ಯಶಸ್ವಿಯಾಗಿ ಚಿಕಿತ್ಸೆ ನೀಡಿರುವುದು ಆಸ್ಪತ್ರೆಯ ಹೆಗ್ಗುರುತು. ನವಜಾತ ಶಿಶುಗಳಿಂದ ಹಿರಿಯವರೆಗೆ ಎಲ್ಲ ವಯೋಮಾನದವರ ಮೂತ್ರರೋಗಗಳಿಗೂ ಇಲ್ಲಿ ಪರಿಹಾರವಿದೆ.

ಯುರಾಲಜಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ. ಈ ರೋಗಕ್ಕೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗಾಗಿ ಪ್ರತ್ಯೇಕ ಒ.ಟಿ. ವ್ಯವಸ್ಥೆ ಮಾಡಲಾಗಿದೆ. ಕಿಡ್ನಿ ಕಸಿ, ಇಎಸ್‌ಡಬ್ಲ್ಯುಎಲ್‌ ಮತ್ತು ಯುರೊಡೈನಾಮಿಕ್‌ ಘಟಕಗಳನ್ನೂ ಹೊಂದಿದೆ. 46 ಡಯಾಲಿಸಿಸ್‌ ಯಂತ್ರಗಳು ಮತ್ತು ಒಂದು ಸಿಆರ್‌ಆರ್‌ಟಿ ಯಂತ್ರ ಇಲ್ಲಿದ್ದು, ದಿನದ 24 ಗಂಟೆಗಳ ಕಾಲ ಡಯಾಲಿಸಿಸ್‌ ಸೌಲಭ್ಯ ಲಭ್ಯವಿದೆ. ನಿತ್ಯ ಸರಾಸರಿ 140 ರೋಗಿಗಳು ಇಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಾರೆ. 

ಸ್ಟ್ರೋಕ್‌ (ಲಕ್ವ) ಪೀಡಿತರ ಆರೈಕೆ, ಪಾರ್ಕಿನ್ಸನ್‌ ಕಾಯಿಲೆಗೆ ಚಿಕಿತ್ಸೆ, ಮೂರ್ಛೆರೋಗ ಚಿಕಿತ್ಸೆ, ಬೊಟಾಕ್ಸ್‌ ಚಿಕಿತ್ಸೆ ಸೌಲಭ್ಯವನ್ನು ರಾಮಯ್ಯ ಸ್ಮಾರಕ ಆಸ್ಪತ್ರೆ ಹೊಂದಿದೆ. ಬೆಂಗಳೂರಿನ ನಾಲ್ಕನೇ ಶ್ರೇಷ್ಠ ಆಸ್ಪತ್ರೆ ಎಂಬ ಹಿರಿಮೆ ಇದರದ್ದಾಗಿದೆ. ಎಎಚ್‌ಪಿಐನಿಂದ ‘ಗ್ರೀನ್‌ ಹಾಸ್ಪಿಟಲ್‌’ ಪ್ರಶಸ್ತಿ ಸಂದಿದೆ. ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳನ್ನೂ ಹೊಂದಿರುವುದು ಆಸ್ಪತ್ರೆಯ ಹೆಗ್ಗಳಿಕೆ.

ನಿಯೋಜಿತ ಅಧ್ಯಕ್ಷ ಡಾ. ನರೇಶ್‌ ಶೆಟ್ಟಿ
ಹೆಸರಾಂತ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ನರೇಶ್‌ ಶೆಟ್ಟಿ ಅವರು ಎಂ.ಎಸ್‌.ರಾಮಯ್ಯ ಸ್ಮಾರಕ ಆಸ್ಪತ್ರೆಯ ನಿಯೋಜಿತ ಅಧ್ಯಕ್ಷರಾಗಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿ 30 ವರ್ಷಗಳ ವ್ಯಾಪಕ ಅನುಭವ ಹೊಂದಿರುವ ಅವರು, ಜೆಜೆಎಂ ಮೆಡಿಕಲ್‌ ಕಾಲೇಜಿನಿಂದ ಎಂಬಿಬಿಎಸ್‌ ಪದವಿ ಪಡೆದವರು. ಗ್ಲಾಸ್ಗೊದ ರಾಯಲ್‌ ಕಾಲೇಜ್‌ ಆಫ್‌ ಫಿಸಿಶಿಯನ್‌ನಿಂದ ಎಫ್‌ಆರ್‌ಸಿಎಸ್‌ ಆಗಿರುವ ಅವರು, ಆಸ್ಪತ್ರೆ ವ್ಯವಸ್ಥಾಪನೆಯಲ್ಲಿ ಸಿದ್ಧಹಸ್ತರು. ಹಲವು ಪುರಸ್ಕಾರಗಳು ಅವರ ಮುಡಿಗೇರಿವೆ.

ನರರೋಗ

ನರರೋಗಗಳಿಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು 1989ರಷ್ಟು ಹಿಂದೆಯೇ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಾದ ಆಧುನಿಕ ಸೌಲಭ್ಯಗಳನ್ನೂ ಹೊಂದಿದೆ. ಲೈಕಾ ಮೈಕ್ರೊಸ್ಕೋಪ್ಸ್‌, ಕ್ಯೂಸಾ, ಮಿಡಾಸ್‌ ರೆಕ್ಸ್‌ ಡ್ರಿಲ್‌ ಸಿಸ್ಟಮ್‌, ನ್ಯೂರೋ ನೆವಿಗೇಷನ್‌, ಸ್ಟಿರಿಯೊಟಾಕ್ಸಿ, ಇಂಟ್ರಾ ಒಪಿ ಸೌಲಭ್ಯಗಳನ್ನು ಈ ವಿಭಾಗ ಹೊಂದಿದೆ.

l ವಿವರಗಳಿಗೆ: ರಾಮಯ್ಯ ಸ್ಮಾರಕ ಆಸ್ಪತ್ರೆ, ನ್ಯೂ ಬಿಇಎಲ್‌ ರಸ್ತೆ, ಎಂಎಸ್‌ಆರ್‌ಐಟಿ, ಬೆಂಗಳೂರು–560054
ದೂರವಾಣಿ: 080–40508888/9999

l ವೆಬ್‌ಸೈಟ್‌: www.msrmh.com
ಇ–ಮೇಲ್‌: contact@msrmh.com

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು