ಶನಿವಾರ, ಅಕ್ಟೋಬರ್ 24, 2020
23 °C

ಉಸಿರಿನ ದುರ್ಗಂಧ ಪರಿಹಾರವೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಸ್‌ ಜನರಿಗೆ ಗಂಭೀರ ಸಮಸ್ಯೆಗಳನ್ನು ಒಡ್ಡಿರುವುದು ಮಾತ್ರವಲ್ಲ, ಸಣ್ಣ ಸಣ್ಣ ಖುಷಿಯನ್ನೂ ಕಸಿದುಕೊಂಡಿದೆ. ದೀರ್ಘಕಾಲ ಮಾಸ್ಕ್‌ ಧರಿಸುವುದರಿಂದ ಕೆಲವರಿಗೆ ಅಲರ್ಜಿಯಾಗಿ ಮೊಡವೆ, ವೈಟ್‌ಹೆಡ್‌ ಕಾಣಿಸಿಕೊಳ್ಳುವುದು ಒಂದು ಕಡೆಯಾದರೆ, ಇನ್ನು ಕೆಲವರಿಗೆ ಉಸಿರಿನ ದುರ್ವಾಸನೆ ಶುರುವಾಗಿದೆ. ‘ಮಾಸ್ಕ್‌ ಮೌಥ್‌’ ಎಂದೇ ಕರೆಯಲಾಗುವ ಈ ಬಾಯಿಯ ದುರ್ಗಂಧದಿಂದ ಮುಜುಗರವನ್ನೂ ಅನುಭವಿಸಬೇಕಾಗಿದೆ.

ಈ ಸಮಸ್ಯೆ ಬಾಯಿಯ ಸ್ವಚ್ಛತೆಯ ಕಡೆ ಅಷ್ಟಾಗಿ ಲಕ್ಷ್ಯ ಕೊಡದವರಲ್ಲಿ ಉರಿಯೂತ, ದಂತ ಕುಳಿ, ವಸಡಿನ ಕಾಯಿಲೆಗೆ ಕೂಡ ಕಾರಣವಾಗುತ್ತಿದೆ ಎಂಬುದು ದಂತವೈದ್ಯರ ಅಂಬೋಣ.

‘ದೀರ್ಘಕಾಲ ಮುಖಗವಸು ಧರಿಸಿದಾಗ ಕೆಲವರಿಗೆ ಸರಾಗವಾಗಿ ಉಸಿರಾಡುವುದು ಕಷ್ಟವೆನಿಸುತ್ತದೆ. ಹೀಗಾಗಿ ಕೇವಲ ಮೂಗಿನಿಂದ ಉಸಿರಾಡುವ ಬದಲು ಬಾಯಿಯನ್ನೂ ತೆರೆದು ಉಸಿರಾಡುತ್ತಾರೆ. ಇದರಿಂದ ಅವರಿಗೆ ಹೆಚ್ಚು ಗಾಳಿ ಲಭ್ಯವಾಗಿ ತಾತ್ಕಾಲಿಕವಾಗಿ ನಿರಾಳ ಎನಿಸಬಹುದು. ಆದರೆ ಉಸಿರಿನ ದುರ್ಗಂಧಕ್ಕೂ ಇದು ಕೊಡುಗೆ ನೀಡುತ್ತಿದೆ’ ಎನ್ನುತ್ತಾರೆ ದಂತವೈದ್ಯ ಡಾ. ನೀರಜ್‌ ರಾಮನಾಥ್.

ಸಾಮಾನ್ಯವಾಗಿ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳಿರುತ್ತವೆ. ಇದು ನಮ್ಮ ಎಂಜಲಿನ ಜೊತೆ ಸೇರಿ ಹಲ್ಲುಗಳನ್ನು ನಿರಂತರವಾಗಿ ಶುದ್ಧೀಕರಿಸುತ್ತಿರುತ್ತದೆ. ಆದರೆ ಬಾಯಿ ತೆರೆದು ಉಸಿರಾಡುವಾಗ ಲಾಲಾರಸ ಕಡಿಮೆಯಾಗಿ ಬ್ಯಾಕ್ಟೀರಿಯ ಹಲ್ಲಿಗೆ ಅಂಟಿಕೊಂಡು ದುರ್ವಾಸನೆ ಹೊರಡಿಸುತ್ತದೆ.

ಬಾಯಿ ಒಣಗಿದಾಗ ಹಲ್ಲು ಹಾಳಾಗುವುದು, ವಸಡಿನ ಕಾಯಿಲೆ ಕಾಣಿಸಿಕೊಳ್ಳುವುದು ಸಹಜ.

ಈ ಸಮಸ್ಯೆಗಳಿಗೆ ಪರಿಹಾರ ಇಲ್ಲವೇ? ಇದೆ. ಆಗಾಗ ನೀರು ಕುಡಿಯುತ್ತಿರಬೇಕು. ಇದರಿಂದ ದುರ್ಗಂಧಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತಡೆಯಬಹುದು. ಹಾಗೆಯೇ ಆದಷ್ಟು ಮೂಗಿನ ಮೂಲಕವೇ ಉಸಿರಾಡಿ. ಬಾಯಿ ತೆರೆದುಕೊಂಡಿರುವುದನ್ನು ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಾರೆ ತಜ್ಞರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು