ನವೆಂಬರ್ 14 ಸ್ಮರಣೀಯ ದಿನವಾಗಿದೆ. ಈ ದಿನವನ್ನು ವಿಶ್ವ ಮಧುಮೇಹ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸುತ್ತೇವೆ. ವಿಶ್ವ ಮಧುಮೇಹ ದಿನವನ್ನು ನವೆಂಬರ್ 14 ರಂದು ಆಚರಿಸಲು ಭಾವನಾತ್ಮಕವಾದ ಕಾರಣವಿದೆ. ಅದೇನೆಂದರೆ, ನವೆಂಬರ್ 14 ಇನ್ಸುಲಿನ್ ಅನ್ನು ಕಂಡುಹಿಡಿದ ಡಾ. ಫ್ರೆಡರಿಕ್ ಬ್ಯಾಂಟಿಂಗ್ ಅವರ ಜನ್ಮದಿನವಾಗಿದೆ. ಡಾ. ಫ್ರೆಡರಿಕ್ ಬ್ಯಾಂಟಿಂಗ್ ಚಾರಲ್ಸ್ ಬೆಸ್ಟ್ ಎಂಬ ವೈದ್ಯ ವಿದ್ಯಾರ್ಥಿ ಜೊತೆಗೂಡಿ 1922ರ ಜನವರಿ 11ರಂದು ಇನ್ಸುಲಿನ್ ಅನ್ನು ಕಂಡುಹಿಡಿದರು.

'ಟೈಪ್-2 ಮಧುಮೇಹ ಅಲ್ವಾ? ಅದನ್ನು ಆರಾಮವಾಗಿ ರಿವರ್ಸ್ (ಹಿಮ್ಮೆಟ್ಟಿಸುವುದು) ಮಾಡಬಹುದು. ಮತ್ತೆ ಬರೋದೇ ಇಲ್ಲ, ಸಂಪೂರ್ಣ ವಾಸಿಯಾಗುತ್ತದೆ' ಎಂದು ಭರವಸೆ ನೀಡುವ ಆ್ಯಪ್ಗಳು, ಸಂಸ್ಥೆಗಳು ಇಂದು ಮಾರುಕಟ್ಟೆಯಲ್ಲಿ ತಲೆಯೆತ್ತಿವೆ.
.Diabetes | ಮಕ್ಕಳಿಗೂ ಬರಬಹುದು ಮಧುಮೇಹ!.ಮಳೆಗಾಲದಲ್ಲಿ ಮಧುಮೇಹ ನಿರ್ವಹಣೆ ಹೇಗೆ?.
ಗುಣಪಡಿಸಲಾಗದ ಟೈಪ್-1 ಮಧುಮೇಹವನ್ನೂ ವಾಸಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಿದ್ದಾರೆ. ಇವರೆಲ್ಲರೂ. ನಿಜಕ್ಕೂ ಮಧುಮೇಹದ ಹಿಮ್ಮೆಟ್ಟಿಸುವಿಕೆ ಸಾಧ್ಯವೇ ಅಥವಾ ಉಪಶಮನ ಮಾತ್ರ ನಮ್ಮ ಆಯ್ಕೆಯೇ? ಈ ಎರಡರಲ್ಲಿ ಯಾವುದು ನಿಜ? ಇಂಥ ಪ್ರಶ್ನೆಗಳು ಮಧುಮೇಹಿಗಳನ್ನು ಕಾಡುತ್ತಿವೆ. ಇಂದಿನ ಮಾರುಕಟ್ಟೆ ವ್ಯವಸ್ಥೆ ಅಂಥ ಗೊಂದಲವನ್ನು ಸೃಷ್ಟಿಸಿದ್ದು, ಮಧುಮೇಹದಿಂದ ಆರೋಗ್ಯರಕ್ಷಣೆಗಾಗಿ ಅವೈಜ್ಞಾನಿಕ ಹಾದಿಯತ್ತ ಜನರು ಸಾಗುತ್ತಿರುವುದು ಇನ್ನಷ್ಟು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಬಹುದು.

ಇಂದು, ಶೇ 50ರಷ್ಟು ಮಧುಮೇಹ ಇರುವವರು ಸಮಸ್ಯೆ ಕಂಡುಬಂದ ಹತ್ತು ವರ್ಷಗಳ ಅವಧಿಯಲ್ಲಿ ಇನ್ಸುಲಿನ್ ಅನ್ನು ತೆಗೆದುಕೊಳ್ಳುವ ಹಂತವನ್ನು ತಲುಪುತ್ತಿದ್ದಾರೆ. ದೇಶದ ಶೇ 51.7ರಷ್ಟು ಜನರಲ್ಲಿ ಗುರುತಿಸಲಾಗದೇ ಇರುವ ಮಧುಮೇಹವಿದ್ದು, ಈ ಸಂಖ್ಯೆಯಲ್ಲಿ ನಾವು ಪ್ರಪಂಚದ 2ನೇ ಸ್ಥಾನದಲ್ಲಿದ್ದೇವೆ. ದೇಹದ ಅಗತ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಪಿಷ್ಠ (ಕಾರ್ಬೋಹೈಡ್ರೆಟ್ಸ್ ) ಪದಾರ್ಥಗಳನ್ನು ಸೇವಿಸುವುದು ಇದಕ್ಕೆ ಪ್ರಮುಖ ಕಾರಣ.

ಹಿಮ್ಮಟ್ಟಿಸುವಿಕೆ ಮತ್ತು ಉಪಶಮನ:

ಮಧುಮೇಹ ಹಿಮ್ಮೆಟ್ಟಿಸುವಿಕೆ ಎಂಬ ಮಾತು ಇತ್ತೀಚೆಗೆ ಹೆಚ್ಚು ಪ್ರಚಲಿತವಾಗಿದೆ. ಸಮಸ್ಯೆಯಿಂದ ಸಾಕಷ್ಟು ಖರ್ಚು ಮಾಡಿರುವ, ದೀರ್ಘಕಾಲದ ಔಷಧ ಸೇವನೆಯಿಂದ ಅಡ್ಡ ಪರಿಣಾಮ ಎದುರಿಸುತ್ತಿರುವವರು ಸಹಜವಾಗಿಯೇ ಈ ಬಗ್ಗೆ ಕೂತೂಹಲ ತಾಳುತ್ತಾರೆ. ಹಿಮ್ಮೆಟ್ಟಿಸುವಿಕೆ ಎಂದರೆ ಮತ್ತೆ ಮೊದಲಿನಂತಾಗುವುದು, ಪೂರ್ಣ ವಾಸಿಯಾಗುವುದು ಎಂದರ್ಥ.

ಉಪಶಮನ ಎಂದರೆ ಕಾಯಿಲೆಯು ಸುಪ್ತವಾಗಿ ಇರುವಂತೆ ದೇಹವನ್ನು ನಿಯಮಬದ್ದವಾಗಿ ಇರಿಸಿಕೊಳ್ಳುವುದು. ಅಮೆರಿಕನ್ ಡಯಾಬಿಟಿಸ್ ಸಂಸ್ಥೆ (ಎಡಿಎಸ್) ಈ ರೀತಿ ಉಪಶಮನದಲ್ಲೂ ರಕ್ತದಲ್ಲಿನ ಗ್ಲೋಕೋಸ್ ಅಂಶ, ಸರಾಸರಿ ಅವಧಿಯನ್ನು ಪರಿಗಣಿಸಿ 3 ಹಂತಗಳನ್ನು ಗುರುತಿಸಿದೆ. ಯಾವುದೇ ಔಷಧವಿಲ್ಲದೆ 3 ತಿಂಗಳು ಸಹಜವಾಗಿದ್ದರೆ ಭಾಗಶಃ ಉಪಶಮನ, 1 ವರ್ಷ ಅವಧಿಗೂ ಸಮಸ್ಯೆ ಎದುರಾಗದಿದ್ದರೆ ಸಂಪೂರ್ಣ ಉಪಶಮನ ಹಾಗೂ ಐದು ವರ್ಷಗಳವರೆಗೆ ಯಾವುದೇ ವ್ಯತಿರಿಕ್ತತೆ ಕಂಡು ಬರದಿದ್ದರೆ ಸುದೀರ್ಘ ಉಪಶಮನ ಎಂದು ಕರೆದಿದೆ. ಇದರರ್ಥ ಮರುಕಳಿಸುವುದಿಲ್ಲ ಎಂದಲ್ಲ. ಉತ್ತಮ ಸ್ಥಿತಿ ಎನ್ನಬಹುದು.

ಮಧುಮೇಹ ಚಿಕಿತ್ಸೆ ವಿಚಾರದಲ್ಲಿ:

ವಾಸ್ತವವೆಂದರೆ, ಇಂದು ಎಷ್ಟೇ ತಂತ್ರಜ್ಞಾನ, ಅವಿಷ್ಕಾರಗಳು ನಡೆದಿದ್ದರೂ ಮಧುಮೇಹವನ್ನು ಹತೋಟಿಯಲ್ಲಿಡುವ ವಿಚಾರದಲ್ಲಿ ನಿರ್ದಿಷ್ಟ ಮತ್ತು ಸಮಾಧಾನಕರ ಮಾರ್ಗ ಇದುವಗೂ ಸ್ಪಷ್ಟವಾಗಿ ಕಂಡುಬಂದಿಲ್ಲ. ನನ್ನ 25 ವರ್ಷಗಳ ಅನುಭವದಿಂದ ಹೇಳುವುದಾದರೆ, ಔಷಧಿಗಳನ್ನು ಉಪಯೋಗಿಸುವುದರಿಂದ ಮಧುಮೇಹ ಹತೋಟಿಯಲ್ಲಿದೆ ಎಂದು ಕಂಡುಬಂದರೂ ಕಾಲ ಕ್ರಮೇಣ ಹೆಚ್ಚು ಹೆಚ್ಚು ಗುಳಿಗೆಗಳನ್ನು ಉಪಯೋಗಿಸುವ ಸನ್ನಿವೇಶ ಎದುರಾಗುತ್ತದೆ. ಕೊನೆಗೆ ಇನ್ಸುಲಿನ್ ತೆಗೆದುಕೊಳ್ಳುವ ಪ್ರಮೇಯವೂ ಬರುತ್ತದೆ.
ಮಧುಮೇಹವನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಹೊಸ ಪುರಾವೆಗಳ ಪ್ರಕಾರ ಟೈಪ್ 2 ಮಧುಮೇಹವನ್ನು ಉಪಶಮನ ಮಾಡಬಹುದು. ಆದರೆ ಅದು ದೀರ್ಘಕಾಲ ಉಪಶಮನದಲ್ಲಿಯೇ ಇರುತ್ತದೆಂಬುದಕ್ಕೂ ಅಂಕಿಅಂಶಗಳಿಲ್ಲ.

ಉಪಶಮನ ಕ್ರಿಯೆಗೆ ಯಾರು ಅರ್ಹರು?

ರಕ್ತದಲ್ಲಿ ತೀರ ಅತಿಯಾದ ಸಕ್ಕರೆ ಪ್ರಮಾಣ ಇಲ್ಲದಿರುವವರು.

ಅಧಿಕ ತೂಕ ಅಥವಾ ಬಿಎಂಐ ಉಳ್ಳವರು.

ಶರೀರದಲ್ಲಿ ಇನ್ಸುಲಿನ್ ಸಂಗ್ರಹ ಇರಬೇಕು.

8 ವರ್ಷಕ್ಕಿಂತಲೂ ಕಡಿಮೆ ಅವಧಿಯಿಂದ ಮಧುಮೇಹ ಹೊಂದಿರುವವರು.

ಹೆಚ್ಚು ಉತ್ಸಾಹಪೂರ್ಣರಾಗಿ ಜೀವಿಸುವವರು.

ಮಧುಮೇಹ ನಿಯಂತ್ರಿಸುವವರ ಗುಂಪಿನಲ್ಲಿ ಗುರುತಿಸಿಕೊಂಡಿರುವವರು.

ಮಧುಮೇಹ ಉಪಶಮನದ ಪ್ರಾಯೋಗಿಕ ವಿಧಾನ:

ಅಮೆರಿಕನ್ ಡಯಾಬಿಟಿಸ್ ಸಂಸ್ಥೆ ಪ್ರಕಾರ, ಕಡಿಮೆ ಕ್ಯಾಲೊರಿಸ್ ಮತ್ತು ಕಡಿಮೆ ಕಾರ್ಬೋಹೈಡ್ರೆಟ್ಸ್ ಆಹಾರವನ್ನು ಸ್ವೀಕರಿಸುವ, ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಜೀವನಶೈಲಿಯ ನಿರ್ವಹಣೆಯಿಂದ ಮಧುಮೇಹ ಉಪಶಮನ ಸಾಧಿಸಿಕೊಳ್ಳಬಹುದು ಎಂದು ಪ್ರಾಯೋಗಿಕವಾಗಿ ಹೇಳಿದ್ದಾರೆ.
ನಮ್ಮ ದೇಶದಲ್ಲಿಯೂ 'ಚರಕ ಸಂಹಿತಾ' ಮತ್ತು 'ಸುಶ್ರುತ ಸಂಹಿತಾ' ಎಂಬ ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ದೇಹದಲ್ಲಿನ ರೋಗನಿರೋಧಕ ಮದ್ದುಗಳಿಗೆ ಅಗತ್ಯವಾದ 4 ತತ್ವಗಳ ಬಗ್ಗೆ ಮಾತನಾಡುತ್ತಾರೆ. ಇವುಗಳೇ ಆ ವಿಧಾನ ಎನ್ನಬಹುದು.

ಆಚಾರ - ನಾವು ದಿನ ನಿತ್ಯ ನಡೆದುಕೊಳ್ಳುವ ರೀತಿನೀತಿಗಳು.

ಆಹಾರ - ದೇಹಕ್ಕೆ ಸೂಕ್ತವಾದ, ವಾತಾವರಣಕ್ಕೆ ಅಗತ್ಯವಾದ ಆಹಾರ ಸೇವನೆ.

ವ್ಯಾಯಾಮ- ದೇಹದ ಎಲ್ಲ ಅಂಗಗಳು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವುದು.

ಯೋಗ- ಮನಸ್ಸನ್ನು ತಲ್ಲಣಗೊಳಿಸದೆ, ಅದನ್ನು ಸದಾ ಸಮತೋಲನದಲ್ಲಿ ಇಟ್ಟುಕೊಳ್ಳುವುದು.

ಸರಿಯಾದ ಜೀವನಶೈಲಿ ಅನುಸರಿಸಿದರೆ ಟೈಪ್-2 ಮಧುಮೇಹವನ್ನು ಹಿಮ್ಮೆಟ್ಟಿಸಬಹುದಾದರೂ, ಒಮ್ಮೆ ಏರುಪೇರಾದರೂ ಮತ್ತೆ ಮರುಕಳಿಸುತ್ತದೆ. ಉಪಶಮನ ಸಾಧಿಸಲು ವೈಜ್ಞಾನಿಕ ಮಾರ್ಗಗಳನ್ನು ಉಪಯೋಗಿಸಬೇಕು. ಸೂಕ್ತವಾದ ಮಧುಮೇಹವಿರುವ ವ್ಯಕ್ತಿ ಮತ್ತು ಆತನ ಅನುಮತಿ ಅವಶ್ಯ. ಟೈಪ್-1 ಮಧುಮೇಹದವರಿಗೆ ಉಪಶಮನ ಪ್ರಕ್ರಿಯೆ ಅನ್ವಯಿಸುವುದಿಲ್ಲ. ಏಕೆಂದರೆ, ಇನ್ಸುಲಿನ್ ಅನ್ನು ನಿಲ್ಲಿಸುವುದು ಪ್ರಾಣಾಪಾಯಕ್ಕೆ ಕಾರಣವಾಗುತ್ತದೆ.

ಮಧುಮೇಹ ಹಿಮ್ಮೆಟ್ಟಿಸುವ ಅಥವಾ ಉಪಶಮದ ವಿಚಾರದಲ್ಲಿ ತೀರ್ಮಾನವೆನೆಂದರೆ, ಮಿತಿಮೀರಿ ಬೆಳೆಯುತ್ತಿರುವ ಮಧುಮೇಹ ಮತ್ತು ಅದರ ಜಠಿಲತೆಗಳ ಒತ್ತಡವು ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿದೆ. ಮೇಹವನ್ನು ವಾಸಿಮಾಡುವ ದಿಕ್ಕಿನಲ್ಲಿ ಸಂಭವನೀಯ ಅಥವಾ ಸಾಧ್ಯವಾಗಬಲ್ಲ ವಿಧಿವಿಧಾನಗಳ ಅನ್ವೇಷಣೆಯಲ್ಲಿ ತೊಡಗಿರುವುದನ್ನು ನೋಡಿದಾಗ ಗೋಚರವಾಗುತ್ತಿರುವುದೇನೆಂದರೆ ನಾವು ಮಧುಮೇಹ ಉಪಶಮನಕ್ಕೆ ಹತ್ತಿರದಲ್ಲಿದ್ದೇವೆ ಎಂಬುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.