‘ಡಾಕ್ಟ್ರೆ, ದಿನಾ ಹತ್ತು ಸಾವಿರ ಹೆಜ್ಜೆಗಳನ್ನಿಡುವಷ್ಟಾದರೂ ನಡೆಯಬೇಕು ಎಂದಿದ್ದಿರಿ. ಆದರೆ ಬೆಳಿಗ್ಗೆ ಎದ್ದು ಮನೆಕೆಲಸಗಳನ್ನು ಮುಗಿಸಿ, ಆಫೀಸ್ಗೆ ಹೋಗಿ ಬರೋದಿಕ್ಕೇ ದಿನದ ಇಪ್ಪತ್ನಾಲ್ಕು ಗಂಟೆಗಳು ಸಾಕಾಗ್ತಿಲ್ಲ, ಇನ್ನು ಅದೆಲ್ಲ ಹೇಗೆ ಸಾಧ್ಯ ಹೇಳಿ?’ ಇದು ವೈದ್ಯರ ಬಳಿ ಬರುವ ಹಲವು ರೋಗಿಗಳ ದೂರು.

ನಿಜ, ಜೀವನಶೈಲಿಯ ಕಾಯಿಲೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ತಮ್ಮಲ್ಲಿ ಬರುವ ಪ್ರತಿಯೊಬ್ಬ ರೋಗಿಗೂ ವೈದ್ಯರು ನೀಡುವ ಸಲಹೆಗಳಲ್ಲಿ ಇದೂ ಒಂದು.

ಅಧಿಕ ರಕ್ತದೊತ್ತಡ, ಮಧುಮೇಹ, ಪಿಸಿಒಡಿ ಕಾಯಿಲೆಗಳ ನಿಯಂತ್ರಣದ ವಿಷಯಕ್ಕೆ ಬಂದಾಗ, ‘ಚಲನೆಯೇ ಆರೋಗ್ಯ, ಜಡತೆಯೇ ಅನಾರೋಗ್ಯ’ ಎಂಬ ಮಾತು ಹೆಚ್ಚು ಮಹತ್ವದ್ದು ಎನ್ನಿಸುತ್ತದೆ. ಹೆಚ್ಚು ಸಮಯ ಕುಳಿತೇ ಇರುವುದು ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತಯೇ ಸರಿ – ಎಂದು ಅಧ್ಯಯನಗಳು ತಿಳಿಸುತ್ತಿವೆ. ಹಾಗಾಗಿಯೇ ಈ ದಿನಗಳಲ್ಲಿ ದಿನನಿತ್ಯದ ವ್ಯಾಯಾಮ ಕಡ್ಡಾಯವಾಗಿ ಎಲ್ಲರ ಬದುಕಿನ ಭಾಗವಾಗಬೇಕಾಗಿದೆ. ಒಂದು ಪಕ್ಷ ವ್ಯಾಯಾಮದ ರೂಢಿ ಕಷ್ಟವೆನಿಸಿದರೆ ಆರೋಗ್ಯಕ್ಕಾಗಿ ನಿತ್ಯವೂ ಕನಿಷ್ಠ ಹತ್ತು ಸಾವಿರ ಹೆಜ್ಜೆಗಳನ್ನಿಡುವಷ್ಟು ದೂರವಾದರೂ ನಡೆಯಿರಿ ಎನ್ನುವುದು ಎಲ್ಲ ತಜ್ಞವೈದ್ಯರ ಅಭಿಮತ. ಆದರೆ ಪ್ರಾಯೋಗಿಕವಾಗಿ ಹತ್ತು ಸಾವಿರ ಹೆಜ್ಜೆಗಳು ಎಂದರೆ ಸುಮಾರು ಏಳರಿಂದ ಎಂಟು ಕಿಲೋಮೀಟರ್ ನಡಿಗೆ ಎಂದರ್ಥ. ಅದಕ್ಕೆ ಕನಿಷ್ಠ ಒಂದೂವರೆ ತಾಸುಗಳಾದರೂ ಬೇಕಾಗುತ್ತದೆ. ಅನೇಕರಿಗೆ ಒಂದು ತಾಸು ಮನೆಯಿಂದ ಹೊರಗೆ ಹೋಗಿ ನಡೆಯುವುದು ಕಷ್ಟಸಾಧ್ಯ ಎನ್ನಿಸಬಹುದು. ಮನೆಯಿಂದ ಹೊರಗೆ ಹೋಗಿ ನಡೆದರಷ್ಟೇ ಅಂತಹ ನಡಿಗೆ ಸಾಧ್ಯ ಎಂದೇ ಹಲವರು ಯೋಚಿಸುವುದಿದೆ. ಕಚೇರಿಯಲ್ಲಿಯೇ ಆರರಿಂದ ಎಂಟು ತಾಸುಗಳು ಕಳೆಯುವವರಂತೂ ಇವೆಲ್ಲ ನಮ್ಮಿಂದ ಸಾಧ್ಯವಿಲ್ಲದ ಕೆಲಸ ಎಂದು ಕುಗ್ಗಿ ಹೋಗುವುದಿದೆ. ಆದರೆ ಆ ರೀತಿ ಬೇಸರಿಸುವ ಅಗತ್ಯವಿಲ್ಲ. ಮನಸ್ಸಿದ್ದರೆ ಮಾರ್ಗ – ಎನ್ನುವಂತೆ, ಮನಸ್ಸು ಮಾಡಿದರೆ ವ್ಯಾಯಾಮವಿಲ್ಲದೆಯೂ ನಡಿಗೆಯಲ್ಲಿ ತೊಡಗಿಸಿಕೊಂಡು ದಿನದಲ್ಲಿ ಹತ್ತು ಸಾವಿರ ಹೆಜ್ಜೆಗಳನ್ನು ಹಾಕಿ ಪೂರೈಸಬಹುದು.

ಮನೆಯಲ್ಲಿಯೇ ನಡೆಯುವುದೇ?

ವ್ಯಾಯಾಮವಿಲ್ಲದೆಯೇ ದಿನವೊಂದರಲ್ಲಿ ಹತ್ತು ಸಾವಿರ ಹೆಜ್ಜೆಗಳನ್ನಿಡಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಖಂಡಿತ ಸಾಧ್ಯ. ಇದನ್ನು ‘ಎನ್‘ ಇ. ಎ. ಟಿ.’ ಅಂದರೆ ‘ನಾನ್ ಎಕ್ಸರ್ಸೈಸ್ ಆಕ್ಟಿವಿಟಿ ಥರ್ಮೊಜೆನೆಸಿಸ್’ ಎನ್ನುತ್ತಾರೆ. ಅಂದರೆ ವ್ಯಾಯಾಮವನ್ನು ಹೊರತು ಪಡಿಸಿಯೂ ನಾವು ಇದನ್ನು ಸಾಧಿಸಬಹುದು ಎಂದರ್ಥ.

ನೀವು ಮನೆಯಲ್ಲಿಯೇ ಇರುವವರಾದರೆ, ಯಾವುದೇ ಕಾರಣಕ್ಕೂ 40 ನಿಮಿಷಗಳವರೆಗೆ ಒಂದೇ ಜಾಗದಲ್ಲಿ ಕುಳಿತಿರಬೇಡಿ. ಪ್ರತಿ ನಲವತ್ತು ನಿಮಿಷಗಳಿಗೊಮ್ಮೆ ಎದ್ದು ಅಡುಗೆಮನೆಗೆ ಹೋಗಿ ಒಂದು ಸಣ್ಣ ಲೋಟದಲ್ಲಿ ನೀರನ್ನು ಕುಡಿಯಿರಿ, ಇಲ್ಲವೇ ದೇವರ ಮನೆಗೆ ಹೋಗಿ ಪ್ರಾರ್ಥನೆಯನ್ನು ಸಲ್ಲಿಸಿ ಅಥವಾ ಹೊರಗಿನ ಹೂದೋಟದಲ್ಲಿ ಒಂದು ಸುತ್ತು ಹಾಕಿ ಅಥವಾ ಶೌಚಾಲಯಕ್ಕೆ ತೆರಳಿ ಮೂತ್ರವಿಸರ್ಜನೆಯನ್ನು ಮಾಡಿ ಬನ್ನಿ. ನಿಮ್ಮ ಈ ಚಟುವಟಿಕೆಯಲ್ಲಿ ಸುಮಾರು ನೂರರಿಂದ ನೂರೈವತ್ತು ಹೆಜ್ಜೆಗಳನ್ನಾದರೂ ಕ್ರಮಿಸಿರುತ್ತೀರಿ. ಮನೆಗೆ ಅಗತ್ಯವಾದ ಹಾಲು, ತರಕಾರಿ, ದಿನಸಿ ಸಾಮಗ್ರಿಗಳನ್ನು ಮನೆ ಹತ್ತಿರದ ಅಂಗಡಿಗೆ ತೆರಳಿ ನೀವೇ ತರುವ ರೂಢಿ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಈ ಸಣ್ಣ ಕೆಲಸಗಳಿಗೆ ವಾಹನ ಬಳಸಬೇಡಿ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವಾದ ಬಳಿಕ ಕಡ್ಡಾಯವಾಗಿ ಐದರಿಂದ ಹತ್ತು ನಿಮಿಷಗಳ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮಗೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಊಟದ ನಂತರದ ನಡಿಗೆ ನಿಮ್ಮನ್ನು ಬೊಜ್ಜು ಮತ್ತು ಅಧಿಕ ದೇಹತೂಕದ ಸಮಸ್ಯೆಯಿಂದ ದೂರವಿಡಬಲ್ಲದು. ನಿಮ್ಮ ಮನೆಯಲ್ಲಿ ಮೊದಲ ಮಹಡಿಯಿದ್ದು, ಮೆಟ್ಟಿಲುಗಳಿದ್ದರೆ ದಿನದಲ್ಲಿ ನಾಲ್ಕೈದು ಬಾರಿ ಹತ್ತಿ ಇಳಿಯುವ ರೂಢಿ ಕೂಡ ನಿಮ್ಮ ಹತ್ತು ಸಾವಿರ ಹೆಜ್ಜೆಗಳ ಲೆಕ್ಕಕ್ಕೆ ಸೇರ್ಪಡೆಯಾಗಬಲ್ಲದು.

ನಗರ ಸಾರಿಗೆ ಬಸ್ಸುಗಳನ್ನು ಬಳಸುವವರು ವಾರದಲ್ಲಿ ಕೆಲವು ದಿನಗಳಾದರೂ, ನಿಮ್ಮ ಮನೆಯ ಹಿಂದಿನ ನಿಲ್ದಾಣದಲ್ಲಿ ಇಳಿದು ಮನೆಗೆ ನಡೆದು ಹೋಗಲು ಪ್ರಯತ್ನಿಸಿ. ಕಚೇರಿಗಳಿಗೆ ಸ್ವಂತ ವಾಹನದಲ್ಲಿ ತೆರಳುವವರು ಸ್ವಲ್ಪ ಅಂತರದಲ್ಲಿ ವಾಹನವನ್ನು ನಿಲ್ಲಿಸಿ, ನಡೆದು ಕಚೇರಿಯನ್ನು ತಲುಪುವ ಅಭ್ಯಾಸ ಮಾಡಿಕೊಳ್ಳಿ. ಕಚೇರಿಯ ಆರು ಗಂಟೆಗಳ ಕೆಲಸದ ಮಧ್ಯೆ ನಾಲ್ಕು ಬಾರಿ ನಿಮ್ಮ ಕೊಠಡಿಯಿಂದ ಎದ್ದು ಅಲ್ಲಿ ಸಮೀಪದಲ್ಲಿರುವ ಮೆಟ್ಟಿಲುಳನ್ನು ಹತ್ತಿ ಇಳಿಯುವುದನ್ನು ರೂಢಿಸಿಕೊಳ್ಳಿ. ಮೊಬೈಲ್ನಲ್ಲಿ ಮಾತನಾಡುವಾಗ ದಯಮಾಡಿ ಒಂದೆಡೆ ಕುಳಿತುಕೊಳ್ಳದೆ, ಎದ್ದು ನಡೆದಾಡುತ್ತಾ ಮಾತನ್ನು ಮುಂದುವರೆಸಿ. ಆತ್ಮೀಯರೊಡನೆ ಧೀರ್ಘಕಾಲದವರೆಗೆ ಮೊಬೈಲ್ನಲ್ಲಿ ಮಾತನಾಡುವಾಗ, ಕಡ್ಡಾಯವಾಗಿ ನಡೆದಾಡುತ್ತಾ ಮಾತನಾಡುವ ಅಭ್ಯಾಸ ಮಾಡಿಕೊಳ್ಳಿ. ಮೊದಮೊದಲು ಕಷ್ಟವೆನಿಸಿದರೂ ಒಂದೇ ಸಮಯದಲ್ಲಿ ಮನಸ್ಸು ಮತ್ತು ದೇಹಕ್ಕೆ ಆಹ್ಲಾದ ಕೊಡುವ ಈ ಏಕೈಕ ಕೆಲಸ ನಿಮಗೆ ಅತಿ ಶೀಘ್ರದಲ್ಲಿ ಕರಗತವಾಗುತ್ತದೆ.

ದೂರದರ್ಶನದಲ್ಲಿ ಧಾರಾವಾಹಿ ಅಥವಾ ಚಲನಚಿತ್ರವನ್ನು ವೀಕ್ಷಿಸುವ ಸಂದರ್ಭಗಳಲ್ಲಿ ಗಟ್ಟಿಯಾಗಿ ಒಂದೆಡೆ ಕುಳಿತು ಬಿಡಬೇಡಿ. ಮಧ್ಯದ ಜಾಹಿರಾತು ಪ್ರಸಾರವಾಗುವಾಗ ಎದ್ದು ಕೆಲವು ನಿಮಿಷಗಳ ಕಾಲವಾದರೂ ಅತ್ತಿಂದಿತ್ತ ನಡೆದಾಡಿ. ಮೊಬೈಲ್ನಲ್ಲಿ ನಿಮ್ಮ ನೆಚ್ಚಿನ ಕಾರ್ಯಕ್ರಮ ವೀಕ್ಷಿಸುವಾಗ, ಮೂವತ್ತರಿಂದ ನಲವತ್ತು ನಿಮಿಷಗಳಾಗುತ್ತಲೂ ಎದ್ದು ನಡೆದಾಡಿ, ಆ ಸಮಯದಲ್ಲಿ ನಿಮಗಿಷ್ಟವಾದ ಹಾಡುಗಳನ್ನು ಕೇಳುವ ಪ್ರಯತ್ನವನ್ನೂ ಮಾಡಬಹುದು. ಇಂತಹ ಸಣ್ಣ ಪುಟ್ಟ ದೈನಂದಿನ ಬದಲಾವಣೆಗಳು ಜಡತ್ವವನ್ನು ದೂರಮಾಡಿ, ನಿಮ್ಮನ್ನು ಸದಾ ಚಟುಚಟಿಕೆಯಿಂದ ಇರಲು ನೆರವಾಗುತ್ತವೆ.

ಬೆಳಿಗ್ಗೆ ಅಥವಾ ಸಂಜೆ ವ್ಯಾಯಾಮಕ್ಕೆಂದೇ ಪ್ರತ್ಯೇಕ ಸಮಯ ಮೀಸಲಿಡದೆಯೂ ನೀವು ಕ್ಯಾಲೊರಿಗಳನ್ನು ಕರಗಿಸಬಹುದು, ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಬಹುದು. ಇದರೊಂದಿಗೆ ಆಹಾರಕ್ರಮದಲ್ಲಿಯೂ ಕೊಂಚ ಕಾಳಜಿಯನ್ನು ವಹಿಸಿದರೆ ನೀವು ಹಲವು ಆರೋಗ್ಯ ಸಮಸ್ಯೆಗಳನ್ನು ದೂರವಿಡುವುದು ಖಂಡಿತ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.