ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ರ ಮಧ್ಯಭಾಗದ ವರೆಗೆ ಕೋವಿಡ್‌ ಲಸಿಕೆ ನಿರೀಕ್ಷೆ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ

Last Updated 4 ಸೆಪ್ಟೆಂಬರ್ 2020, 13:35 IST
ಅಕ್ಷರ ಗಾತ್ರ

ಜಿನಿವಾ: ಕೊರೊನಾ ವೈರಸ್‌ ತೊಡೆದು ಹಾಕಲು ವ್ಯಾಪಕವಾಗಿ ಬಳಕೆಯಾಗಬಲ್ಲ ಲಸಿಕೆಯನ್ನು ಮುಂದಿನ ವರ್ಷದ ಮಧ್ಯಭಾಗದ ವರೆಗೂ ನಿರೀಕ್ಷಿಸುವುದಿಲ್ಲ ಎಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆ, ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆಗಳಿಗೆ ಸಂಬಂಧಿಸಿದಂತೆ ಸತ್ವ ಪರೀಕ್ಷೆಗಳು ನಡೆಯಬೇಕಾದ ಅಗತ್ಯವನ್ನು ಒತ್ತಿ ಹೇಳಿದೆ.

ಸುಧಾರಿತ ಕ್ಲಿನಿಕಲ್ ಟ್ರಯಲ್‌ನಲ್ಲಿರುವ ಯಾವುದೇ ಲಸಿಕೆಗಳು ಡಬ್ಲ್ಯುಎಚ್‌ಒ ಬಯಸುತ್ತಿರುವ ಪರಿಣಾಮಕಾರಿತ್ವದ ಸ್ಪಷ್ಟ ಸಂಕೇತದ ಕನಿಷ್ಠ 50% ಮಟ್ಟವನ್ನೂ ಪ್ರದರ್ಶಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ವಕ್ತಾರರಾದ ಮಾರ್ಗರೇಟ್ ಹ್ಯಾರಿಸ್ ಹೇಳಿದ್ದಾರೆ.

ಎರಡು ತಿಂಗಳಿಗಿಂತ ಕಡಿಮೆ ಹ್ಯೂಮನ್‌ ಟ್ರಯಲ್‌ ನಡೆಸಿರುವ ಲಸಿಕೆ ಬಳಕೆಗೆ ರಷ್ಯಾ ಆಗಸ್ಟ್‌ನಲ್ಲಿ ಅನುಮೋದನೆ ನೀಡಿದೆ. ಆದರೆ, ಕೆಲವು ಐರೋಪ್ಯ ತಜ್ಞರು ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪ್ರಶ್ನೆ ಮಾಡಿದ್ದಾರೆ.

ಕೋವಿಡ್‌–19 ಲಸಿಕೆ ಅಮೆರಿಕದಲ್ಲಿ ಅಕ್ಟೋಬರ್‌ ಅಂತ್ಯದ ವೇಳೆಗೆ ವಿತರಿಸಲು ಲಭ್ಯವಾಗಬಹುದು ಎಂದು ಅಲ್ಲಿನ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಹೇಳಿದಿದ್ದಾರೆ. ಆದರೆ, ನವೆಂಬರ್ 3ರಂದು ಅಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯುತ್ತಿವೆ. ಡೊನಾಲ್ಡ್‌ ಟ್ರಂಪ್‌ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಲು ಇಚ್ಚಿಸಿದ್ದಾರೆ. ಆ ದೇಶದಲ್ಲಿ ಕೋವಿಡ್‌ ಲಸಿಕೆ ಎಂಬುದು ರಾಜಕೀಯ ದಾಳವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT