ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

World Heart Day | ಹೃದಯದ ಆರೋಗ್ಯಕ್ಕೆ ಪಿಸ್ತಾ ಸೇವನೆಯಿಂದ ಏನು ಪ್ರಯೋಜನ?

ಡಾ. ಅತುಲ್ ಮಾಥುರ್
Published : 28 ಸೆಪ್ಟೆಂಬರ್ 2024, 7:02 IST
Last Updated : 28 ಸೆಪ್ಟೆಂಬರ್ 2024, 7:02 IST
ಫಾಲೋ ಮಾಡಿ
Comments

ಪ್ರತಿ ಸೆಪ್ಟೆಂಬರ್‌ 29ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಆನಂದಮಯ ಈ ಬದುಕಿಗೆ ಆ ಪುಟ್ಟ ಹೃದಯ ಅದೆಷ್ಟು ಕೆಲಸ ಮಾಡುತ್ತಿದೆ. ಕ್ಷಣಮಾತ್ರವೂ ವಿಶ್ರಾಂತಿ ಪಡೆಯದೇ ಬಡಿದುಕೊಳ್ಳುವ ಈ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದರ ಆರೋಗ್ಯ ಕಾಪಾಡಿಕೊಳ್ಳಲು ಪಿಸ್ತಾ ಅಮೃತದಂತೆ ಸಹಾಯ ಮಾಡಲಿದೆ ಎಂಬುದು ನಿಮಗೆ ಗೊತ್ತೇ? ಹೌದು, ಪ್ರತಿನಿತ್ಯ ಅಲ್ಪ ಪ್ರಮಾಣದಲ್ಲಿ ಪಿಸ್ತಾ ಸೇವನೆಯಿಂದ ಹೃದಯದ ಮೇಲೆ ಯಾವೆಲ್ಲಾ ಪ್ರಯೋಜನಗಳಿದೆ ಎಂಬುದರ ಬಗ್ಗೆ ವೈದ್ಯರು ವಿವರಿಸಿದ್ದಾರೆ.

ಪಿಸ್ತಾದಲ್ಲಿದೆ ಆರೋಗ್ಯಕರ ಕೊಬ್ಬು

ಪಿಸ್ತಾದಲ್ಲಿ ಆರೋಗ್ಯಕಾರಿ ಕೊಬ್ಬು ಇದೆ. ಅದರಲ್ಲೂ ಅಪರ್ಯಾಪ್ತ ಮತ್ತು ಏಕಪರ್ಯಾಪ್ತ (monounsaturated) ಹಾಗೂ ಬಹುಪರ್ಯಾಪ್ತ (polyunsaturated)ಕೊಬ್ಬಿನಾಮ್ಲಗಳು ಈ ಪುಟ್ಟ ಬೀಜಗಳಲ್ಲಿ ಅಪಾರಪ್ರಮಾಣದಲ್ಲಿ ಕಂಡು ಬರುತ್ತದೆ. ಈ ಕೊಬ್ಬುಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಇದರಿಂದ ಹೃದಯ ರಕ್ತನಾಳದ ಅಪಾಯವನ್ನು ತಗ್ಗಿಸಬಹುದು. ಹೀಗಾಗಿ ಪ್ರತಿಯೊಬ್ಬರು ಪಿಸ್ತಾವನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಉತ್ತಮ.

ಎಷ್ಟು ಪಿಸ್ತಾ ಸೇವಿಸಿದರೆ ಒಳ್ಳೆಯದು

ಪಿಸ್ತಾ ಹೆಚ್ಚು ಉಪ್ಪುಪ್ಪಾಗಿರುವ ಕಾರಣ ಕೆಲವರಿಗೆ ಇಷ್ಟವಾದರೆ, ಇನ್ನೂ ಕೆಲವರಿಗೆ ಇಷ್ಟವಾಗುವುದಿಲ್ಲ. ಕೆಲವರು ಪಿಸ್ತಾವನ್ನು ಹಿಡಿಹಿಡಿಯಾಗಿ ತಿಂದರೆ, ಇನ್ನೂ ಕೆಲವರು ತಿನ್ನುವುದೇ ಇಲ್ಲ. ಈ ಎರಡೂ ಅಭ್ಯಾಸ ತಪ್ಪು. ಪಿಸ್ತಾವನ್ನು ಸಮಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಆರೋಗ್ಯಕ್ಕೆ ಅದರಲ್ಲೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಪ್ರತಿನಿತ್ಯ ಗರಿಷ್ಠ 42 ಗ್ರಾಂನಷ್ಟು ಅಂದರೆ 10ರಿಂದ 12 ಪಿಸ್ತಾ ಸೇವನೆ ದೇಹಕ್ಕೆ ಹೆಚ್ಚು ಪ್ರಯೋಜನ. ಇದಕ್ಕೂ ಮೀರಿ ತಿನ್ನುವ ಅಭ್ಯಾಸ ಬೇಡ. ಸುಮಾರು 28 ಗ್ರಾಂ ಪಿಸ್ತಾವು 6 ಗ್ರಾಂ ಉತ್ತಮ ಗುಣಮಟ್ಟದ ಪ್ರೊಟೀನ್ ಅನ್ನು ಒದಗಿಸುತ್ತವೆ. ಸಸ್ಯ-ಆಧಾರಿತ ಪ್ರೋಟೀನ್ ಅವಲಂಬಿಸುವವರಿಗೆ ಪಿಸ್ತಾ ಸೂಕ್ತ ಆಯ್ಕೆ. ಮಾಂಸಾಹಾರಿಗಳು ಬೇರೆ ಮೂಲಗಳಿಂದ ಪ್ರೋಟಿನ್‌ ಪಡೆಯುತ್ತಾರೆ. ಸಸ್ಯಾಹಾರಿಗಳಿಗೆ ಪ್ರೋಟಿನ್‌ ಆಯ್ಕೆ ಕಡಿಮೆ. ಅಂಥವರು ಪ್ರತಿನಿತ್ಯ ಪಿಸ್ತಾ ಸೇವಿಸುತ್ತಾ ಬನ್ನಿ.

ಜೀರ್ಣಾಂಗ ವ್ಯವಸ್ಥೆಗೆ ಪಿಸ್ತಾ ಪ್ರಯೋಜನ

ಆಹಾರ ಸೇವಿಸಿದ ಬಳಿಕ ಅದರ ಪಚನಕ್ರಿಯೆ ಚೆನ್ನಾಗಿರಬೇಕು, ಇಲ್ಲದಿದ್ದರೆ ಜೀರ್ಣಕ್ರಿಯೆ ಸಮಸ್ಯೆ ಉಲ್ಬಣಗೊಂಡು ಇತರೆ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡಿತ್ತದೆ. ಪಿಸ್ತಾ ಸೇವನೆಯು ಜೀರ್ಣಕ್ರಿಯೆಗೂ ಹೆಚ್ಚು ಪ್ರಯೋಜನ. ಸುಮಾರು 28 ಗ್ರಾಂ ಪಿಸ್ತಾಗಳು 3 ಗ್ರಾಂ ಫೈಬರ್ ಹೊಂದಿದ್ದು, ಫೈಬರ್‌ ಜೀರ್ಣಕ್ರಿಯೆಗೆ ಸಹಕಾರಿ. ಇದರಲ್ಲಿನ ಪ್ರೋಟಿನ್‌, ಫೈಬರ್‌ ಹಾಗೂ ಆರೋಗ್ಯಕರ ಕೊಬ್ಬಿನ ಅಂಶವು ನಿಮ್ಮನ್ನು ಹೆಚ್ಚು ಸಮಯ ಹಸಿವಾಗದಂತೆಯೂ ಕಾಪಾಡಿಕೊಳ್ಳಲಿದೆ.

ಇತರೆ ಆರೋಗ್ಯದ ಪ್ರಯೋಜನಗಳು

ಪಿಸ್ತಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದೆ ಮತ್ತು ಇದರಲ್ಲಿ ನಾರಿನಾಂಶ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಸಲಿದೆ. ಜೊತೆಗೆ, ಲುಟೇನ್ ಮತ್ತು ಝೆಕ್ಸಾಥಿನ್ ಎನ್ನುವ ಆ್ಯಂಟಿ ಆಕ್ಸಿಡೆಂಟ್ ಇದ್ದು, ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಅಷ್ಟೇ ಅಲ್ಲದೆ ಈ ಪುಟ್ಟ ಬೀಜಗಳಲ್ಲಿ ವಿಟಮಿನ್ ಎ, ವಿಟಮಿನ್ ಇ, ಜಿಂಕ್, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಪ್ರಮಾಣ ಕೂಡ ಹೇರಳವಾಗಿ ಕಂಡು ಬರುವುದರಿಂದ ಉರಿಯುತ ನಿಯಂತ್ರಣವಾಗುತ್ತದೆ ಹಾಗೂ ಮೂಳೆ ಹಲ್ಲುಗಳ ಆರೋಗ್ಯವು ಕೂಡ ಚೆನ್ನಾಗಿರುತ್ತದೆ. ಪಿಸ್ತಾದಲ್ಲಿ ವಿಟಮಿನ್ ಬಿ6 ಮತ್ತು ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು, ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಅನೇಕ ಪ್ರಯೋಜನವನ್ನು ಈ ಪಿಸ್ತಾ ಹೊಂದಿದೆ.

ಲೇಖಕರು: ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ ಕ್ಯಾಥ್ ಲ್ಯಾಬ್‌ನ ಮುಖ್ಯಸ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT