ಮೊಬೈಲ್, ಮೊಬೈಲ್, ಮೊಬೈಲ್... ಮನೆಯವರನ್ನು ಬಿಟ್ಟರೂ ಬಿಟ್ಟೇವು ಮೊಬೈಲ್ ಫೋನನ್ನು ಮಾತ್ರ ಬಿಡೆವು ಎನ್ನುವ ಹಂತಕ್ಕೆ ಬಹುತೇಕರು ಈಗ ಬಂದುಬಿಟ್ಟಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮನೆ, ಮಠ, ಉದ್ಯಾನ, ರಸ್ತೆ ಎನ್ನದೆ ಎ್ಲ್ಲಲೆಂದರಲ್ಲಿ ಕಿವಿಗೆ ಮೊಬೈಲ್ ಹಚ್ಚಿ ತಮ್ಮದೇ ಲೋಕದಲ್ಲಿ ವಿಹರಿಸುವವರನ್ನು ಸರ್ವೇ ಸಾಮಾನ್ಯವಾಗಿ ಈಗ ನಾವು ಕಾಣುತ್ತೇವೆ. ಹಿಂದೆ ಊರಿಗೊಂದು ಲ್ಯಾಂಡ್ ಲೈನ್ ದೂರವಾಣಿ ಇರುತ್ತಿತ್ತು. ಆದರೆ ಈಗ ಬಡವರಿಂದ ಆಗರ್ಭ ಶ್ರೀಮಂತರವರೆಗೆ ತಮ್ಮ ಶಕ್ತ್ಯಾನುಸಾರ ಗುಣಮಟ್ಟದ ಮೊಬೈಲ್ ಫೋನ್ ಇಟ್ಟುಕೊಳ್ಳುವುದು ಫ್ಯಾಷನ್ ಕೂಡ.

ಈ ಪುಟ್ಟ ಉಪಕರಣದ ಶಬ್ಬತರಂಗಗಳು ರೇಡಿಯೊ ತರಂಗಗಳಾಗಿ ಪರಿವರ್ತನೆ ಹೊಂದಿ ಮತ್ತೊಂದು ಫೋನ್‌ಗೆ ಸಂಪರ್ಕ ಕಲ್ಪಿಸುತ್ತವೆ. ನಿತ್ಯ ಬಳಕೆಯ ವಸ್ತುಗಳಾದ ಟಿ.ವಿ, ರೆಫ್ರಿಜಿರೇಟರ್, ಮೈಕ್ರೊವೋವನ್‌ನಂತಹ ವಸ್ತುಗಳಲ್ಲೂ ಈ ರೀತಿಯ ವಿಕಿರಣ ಹೊರಹೊಮ್ಮುತ್ತದೆ. ಆದರೆ ಮೊಬೈಲ್ ನಮಗೆ ಅತ್ಯಂತ ಸನಿಹದಲ್ಲಿ ಇರುವುದರಿಂದ ಅದು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ ಭಾರತೀಯ ದೂರ ಸಂಪರ್ಕ ಇಲಾಖೆ ಮೊಬೈಲ್ ತಯಾರಕರಿಗೆ ಕೆಳಗಿನ ನಿರ್ಬಂಧಗಳನ್ನು ವಿಧಿಸಿದೆ.

ರೇಡಿಯೊ ಉಪಕರಣದ ಪ್ರಮಾಣವನ್ನು ಮೊಬೈಲ್ ಉತ್ಪಾದಕರು ಕಡ್ಡಾಯವಾಗಿ ನಮೂದಿಸಿರಬೇಕು.

ಮೊಬೈಲ್ ಬಳಸಲು 16 ವರ್ಷದ ಕೆಳಗಿನವರನ್ನು ಪ್ರಚೋದಿಸಬಾರದು.

ವಿಕಿರಣ ಪ್ರಮಾಣ ಮಿತಿಮೀರಿದಾಗ ಕಾನೂನು ಕ್ರಮ ಜರುಗಿಸಬೇಕು.

ಶಾಲಾ ಕಾಲೇಜು, ಆಸ್ಪತ್ರೆ ಮತ್ತಿತರ ಕಡೆ ಮೊಬೈಲ್ ಗೋಪುರ ನಿರ್ಮಾಣ ಮತ್ತು ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು.

ಆರೋಗ್ಯದ ಮೇಲೆ ಪರಿಣಾಮ

ಮೊಬೈಲ್ ಪೋನ್‌ನ ವಿದ್ಯುತ್ ಕಾಂತೀಯ ವಿಕಿರಣದಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನಮ್ಮ ದೇಹದಲ್ಲಿ ವಿವಿಧ ರಾಸಾಯನಿಕ ಕ್ರಿಯೆಗಳಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಪಚನಕ್ರಿಯೆ, ಹೃದಯದ ಬಡಿತ, ಏರಿಳಿತ ಕ್ರಿಯೆಗಳು ವಿದ್ಯುತ್ ಅಲೆಗಳ ಮೂಲಕ ನಡೆಯುತ್ತವೆ. ಹೀಗೆ ಆಂತರಿಕವಾಗಿ ಇರುವ ವಿದ್ಯುತ್‌ನ ಜೊತೆಗೆ ಬಾಹ್ಯ ವಿದ್ಯುತ್ ಕಾಂತೀಯ ಶಕ್ತಿಗಳೂ ಒಮ್ಮೆಲೇ ನುಗ್ಗಿ ದೇಹದ ಮೇಲೆ ಪರಿಣಾಮ ಬೀರಬಹುದು. ವಿದ್ಯುತ್ ಕಾಂತೀಯ ವಿಕಿರಣದಲ್ಲಿ ಶಾಖೋತ್ಪನ್ನ ಹಾಗೂ ಶಾಖರಹಿತ ಎಂಬ ಎರಡು ವಿಧ ಇದ್ದು, ಇದು ಯಾವ ರೀತಿಯಲ್ಲಾದರೂ ನಮ್ಮ ಮೇಲೆ ಪರಿಣಾಮ ಬೀರಬಹುದು.

ಶಾಖೋತ್ಪನ್ನ ವಿಕಿರಣದಿಂದ ಆಗುವ ಪರಿಣಾಮ ಇನ್ನೂ ದೃಢಪಟ್ಟಿಲ್ಲ. ಆದರೆ ಶಾಖರಹಿತ ಮೊಬೈಲ್ ಬಳಕೆಯಿಂದ ಏನೆಲ್ಲ ಕಾಯಿಲೆ ನಮ್ಮನ್ನು ಆವರಿಸಿಕೊಂಡಿದೆ ಎಂಬುದು ತಿಳಿಯುತ್ತದೆ. ಇತ್ತೀಚೆಗೆ 14 ದೇಶಗಳ 31 ವಿಜ್ಞಾನಿಗಳು ಅಧ್ಯಯನ ನಡೆಸಿ, ಹೆಚ್ಚು ಮೊಬೈಲ್ ಫೋನ್ ಬಳಸಿದರೆ ಕ್ಯಾನ್ಸರ್ ಖಚಿತ ಎಂದು ಹೇಳಿಕೆ ನೀಡಿದ್ದಾರೆ. ಅದನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಒಪ್ಪಿಕೊಂಡಿದೆ.

ಮೆದುಳು ಕ್ಯಾನ್ಸರ್, ನರಮಂಡಲದಲ್ಲಿ ತೊಂದರೆ, ನಿದ್ರಾಹೀನತೆ, ಸ್ಮರಣ ಶಕ್ತಿ ಕ್ಷೀಣಿಸುವಿಕೆ, ಹೃದಯಾಘಾತ, ಸಂತಾನೋತ್ಪತ್ತಿ ಶಕ್ತಿ ಕುಂಠಿತ, ನಿರ್ನಾಳ ಗ್ರಂಥಿ ತೊಂದರೆ, ಚರ್ಮದ ಕಾಯಿಲೆ, ಅಲರ್ಜಿ, ಎದೆ ಬಡಿತ ಹೆಚ್ಚುವಿಕೆ, ರಸ್ತೆ ಅಪಘಾತ, ಅಂಟುರೋಗ... ಹೀಗೆ ಪಟ್ಟಿ ಮಾಡುತ್ತಲೇ ಹೋದರೆ ನಾವ್ಯಾರೂ ಮೊಬೈಲ್ ಫೋನ್ ಅನ್ನು ಹೆಚ್ಚಾಗಿ ಬಳಸುವಂತೆಯೇ ಇಲ್ಲ. ಆದರೂ ದೇಶದಲ್ಲಿ ಈಗ ಶೇ 48ಕ್ಕೂ ಹೆಚ್ಚಿನ ಜನ ಮೊಬೈಲ್ ಫೋನ್ ಬಳಸುತ್ತಿದ್ದಾರೆ.

ಮೊಬೈಲ್ ತಯಾರಿಕಾ ಕಂಪೆನಿಗಳಂತೂ ದಿನನಿತ್ಯ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಹೆಚ್ಚು ಜನರನ್ನು ಆಕರ್ಷಿಸಿ ತಮ್ಮ ವರ್ತುಲದಲ್ಲಿ ಬೀಳುವಂತೆ ಮಾಡುತ್ತಿವೆ. ಸದ್ಯದ ಸ್ಥಿತಿಯಲ್ಲಿ ಬಹುತೇಕರ ಜೀವನದ ಅವಿಭಾಜ್ಯ ಅಂಗ ಆಗಿಹೋಗಿರುವ ಮೊಬೈಲ್ ಬಳಕೆ ಮೇಲೆ ನಿಷೇಧ ಹೇರುವುದು ಸುಲಭದ ಮಾತಲ್ಲ. ಆದರೆ ಅದರ ದುಷ್ಪರಿಣಾಮಗಳ ತಡೆಗೆ ನಾವು ಮುಂಜಾಗ್ರತೆ ವಹಿಸಲು ಯಾರದೂ ಅಡ್ಡಿಯಿಲ್ಲ. ಹೀಗಾಗಿ ಮೊಬೈಲ್ ಬಳಸುವ ಮುನ್ನ ಜಾಗೃತಿ ಇರಲಿ.

ಈ ಅಂಶಗಳ ಬಗ್ಗೆ ಎಚ್ಚರ ವಹಿಸಿ

ಮೊಬೈಲ್‌ನಲ್ಲಿ ಮಾತನಾಡುವಾಗ ಚಿಕ್ಕ ಉತ್ತರ ನೀಡಿ ಆದಷ್ಟು ಬೇಗ ಮುಗಿಸಿ.

ದೀರ್ಘಕಾಲದ ಮಾತುಕತೆಗೆ ಚ್ಞ ್ಛ್ಟಛಿಛಿ ಛಿಜ್ಚಿಛಿನಿಂದ ಮಾತನಾಡಿ.

ಉಚಿತ ಕರೆ ಎಂದು ಹೆಚ್ಚು ಸಂಭಾಷಣೆ ಮಾಡದಿರಿ.

ತಲೆದಿಂಬಿನ ಹತ್ತಿರ ಫೋನ್ ಇಟ್ಟುಕೊಳ್ಳಬೇಡಿ.

ಸಣ್ಣ ಮಕ್ಕಳಿಗೆ ಫೋನ್ ಉಪಯೋಗಿಸಲು ಉತ್ತೇಜಿಸಬೇಡಿ.

ಕರೆ ಆರಂಭವಾದ ಮೇಲೆ ಕಿವಿ ಹತ್ತಿರ ತರಬೇಕು.

ಸಂಪರ್ಕದ ಕೊರತೆ ಇದ್ದಾಗ ಫೋನ್ ಮಾಡಬೇಡಿ.

ವಾಹನದ ಒಳಗೆ ಉಪಯೋಗಿಸಿದರೆ ವಿಕರಣದ ಪ್ರಮಾಣ ಹೆಚ್ಚು.

ವೈರ್‌ಲೆಸ್ ಹೆಡ್ ಸೆಟ್ ಬಳಸಿ.

ಫೋನ್ ಜೇಬಿಗಿಂತ ಬ್ಯಾಗ್‌ನಲ್ಲಿ ಇಟ್ಟರೆ ಅಡ್ಡಿಯಿಲ್ಲ.

ಮಾತಿಗಿಂತ ಎಸ್.ಎಂ.ಎಸ್.ಗೆ ಆದ್ಯತೆ ನೀಡಿ.

ಓಡಾಡಿಕೊಂಡು ಮಾತನಾಡಬೇಡಿ.

ತಾಂತ್ರಿಕತೆ ಕಮ್ಮಿ ಇರುವ ಮೊಬೈಲ್ ಬಳಸಿ. ಆಗ ವಿಕಿರಣದ ಅಪಾಯ ಕಡಿಮೆ.

ಹಿಂಬದಿ ಮೆಟಲ್ ಬಳಕೆ ಮಾಡಿರುವ ಮೊಬೈಲ್ ಸ್ವಲ್ಪ ಮಟ್ಟಿಗೆ ವಿಕಿರಣವನ್ನು ತಡೆಗಟ್ಟುತ್ತದೆ.

ಮೊಬೈಲ್ ಚಾರ್ಜ್ ಆಗುವಾಗ ಮಾತನಾಡುವುದು ಸೂಕ್ತ ಅಲ್ಲ.

ಇ- ಮೇಲ್ ಅಭ್ಯಾಸ ರೂಢಿಸಿಕೊಳ್ಳಿ.

ಅಂಚೆ ಪತ್ರ ವ್ಯವಹಾರ ಅಭ್ಯಾಸ ಮಾಡಿ.

ಹತ್ತಿರದ ಸ್ಥಳಗಳಿಗೆ ಸೈಕಲ್ ಬಳಸಿ ಸುದ್ದಿ ಮುಟ್ಟಿಸಿ.

ಲ್ಯಾಂಡ್ ಲೈನ್ ದೂರವಾಣಿಗೆ ಆದ್ಯತೆ ನೀಡಿ.

ಊಟ, ತಿಂಡಿ ತಿನ್ನುವಾಗ ಮೊಬೈಲ್ ಬಳಕೆ ಬೇಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.