ಬುಧವಾರ, 24 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಹೊಸ ಕೆಲಸವನ್ನು ಆರಂಭ ಮಾಡುವುದಕ್ಕೆ ಈ ದಿನ ಶುಭ
Published 24 ಸೆಪ್ಟೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ತೆಗೆದುಕೊಂಡ ಹೊಸ ನಿರ್ಧಾರಕ್ಕೆ ಗ್ರಹಣದ ಛಾಯೆ ಎದುರಾಗಬಹುದು. ದುರ್ಗಾದೇವಿಯ ಆರಾಧನೆ ಮನಸ್ಸಿಗೆ ನೆಮ್ಮದಿ ಉಂಟುಮಾಡುವುದು.
ವೃಷಭ
ಹಗಳು ಪೂರಕವಾಗಿವೆ. ನಿಮ್ಮಿಚ್ಛೆಯಂತೆ ಚಟುವಟಿಕೆಗಳು ನಡೆಯಲಿವೆ. ಯಾವ ಕೆಲಸದಲ್ಲೂ ಅಡೆತಡೆಗಳೇನೂ ಇರದು. ಕುಟುಂಬದ ಸಂತೋಷ ವೃದ್ಧಿಯಾಗುವುದು.
ಮಿಥುನ
ಕೆಲಸದ ಒತ್ತಡ, ಸಮಯ, ಜವಾಬ್ದಾರಿಗಳು ಹೆಚ್ಚಲಿವೆ. ಏಕಾಂಗಿತನದಲ್ಲಿರುವವರು ಇತರರೊಂದಿಗೆ ಜೊತೆಗೂಡಿ ಕೆಲಸ ಮಾಡುವುದು, ನಾಲ್ಕಾರು ಜನರ ಜತೆಯಲ್ಲಿ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಕರ್ಕಾಟಕ
ಕೆಲಸಗಳ ಬಗ್ಗೆ ಪುನರಾವಲೋಕನ ಮಾಡುವಂಥ ಪದ್ಧತಿಯನ್ನು ರೂಢಿಸಿಕೊಳ್ಳಿರಿ. ಪ್ರಥಮ ದರ್ಜೆಯ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಂಭವವಿದೆ. ಹೊಸ ಕೆಲಸವನ್ನು ಆರಂಭ ಮಾಡುವುದಕ್ಕೆ ಈ ದಿನ ಶುಭ.
ಸಿಂಹ
ಶಸ್ತ್ರಚಿಕಿತ್ಸಾ ವೈದ್ಯರಿಗೆ ಪ್ರಶಂಸೆಯ ಮಾತುಗಳು ಕೇಳಿ ಬರಲಿವೆ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ. ಗಂಟಲುಬೇನೆ ಎದುರಾಗಬಹುದು.
ಕನ್ಯಾ
ಸಂಘ-ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸಿದವರು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿ. ಕಾರ್ಯರಂಗದಲ್ಲಿ ಅಪವಾದದ ಭೀತಿ ಎದುರಾಗಿ ಕಳವಳ ಮೂಡಿಸಲಿದೆ. ಶುದ್ಧಹಸ್ತರಾಗಿ ಕೆಲಸ ನಿರ್ವಹಿಸಿ.
ತುಲಾ
ವಿದೇಶ ವ್ಯಾಸಂಗದ ಅಭಿಲಾಷಿಗಳಿಗೆ ಶುಭ ಸುದ್ದಿ ಕೇಳಲಿದ್ದೀರಿ. ಹೊಸ ಹುದ್ದೆಯಲ್ಲಿ ಗೌರವ, ಸಂತೋಷ ಮತ್ತು ಹೊಸ ರೀತಿಯ ಅನುಭವ ದೊರೆಯುವುದು. ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.
ವೃಶ್ಚಿಕ
ಮನೆಯಲ್ಲಿ ನಡೆಯಬೇಕಿರುವ ಶುಭ ಕಾರ್ಯಕ್ಕೆ ಬಂಧುಗಳ ಆಗಮನವು ಸಂತೋಷವನ್ನು ಸೃಷ್ಟಿಸಲಿದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಂಭವವಿದೆ. ಕೃಷಿಗೆ ಸಂಬಂಧಪಟ್ಟ ಕಾರ್ಯಗಳು ಬಿಡುವಿಲ್ಲದೆ ನಡೆಯಲಿವೆ.
ಧನು
ಹಣ ಮತ್ತು ಗೌರವ ಎರಡರಲ್ಲಿ ಒಂದನ್ನು ಸಂಪಾದಿಸಬಹುದು, ತೀರ್ಮಾನ ನಿಮ್ಮದ್ದಾಗಿರುತ್ತದೆ. ಆರ್ಥಿಕ ಸಂಪತ್ತಿಗಿಂತ ಜನಸಂಪತ್ತು ಮುಖ್ಯವೆಂಬುದನ್ನು ಮರೆಯದಿರಿ. ಹೊಸ ಬಂಡವಾಳ ಹೂಡಿಕೆಗೆ ಉತ್ತಮ ಸಮಯ.
ಮಕರ
ಕರ್ತವ್ಯನಿಷ್ಠೆಯ ಗುಣದಿಂದ ಹೆಚ್ಚು ಹೆಸರುವಾಸಿಯಾಗುವಿರಿ. ಪರಿಸ್ಥಿತಿ ಹಾಗೂ ಅವಕಾಶಗಳನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆ ಪ್ರಾಪ್ತಿಯಾಗುವುದು. ಅವಿವಾಹಿತರಿಗೆ ಕಂಕಣ ಯೋಗ.
ಕುಂಭ
ಪರಿಸ್ಥಿತಿಗಳು ಕೊಂಚ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರುವುದು. ಸಹೋದರರಿಗೋಸ್ಕರವಾಗಿ ತ್ಯಾಗ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ. ಅನವಶ್ಯಕವಾಗಿ ಚಿಂತಿಸದಿರಿ.
ಮೀನ
ಕೌಟುಂಬಿಕವಾಗಿ ಕೆಟ್ಟುಹೋದಂತಹ ಸಂಬಂಧಗಳು ದೇವತಾನು ಗ್ರಹದಿಂದ ಮರಳಿ ಸರಿಯಾಗಬಹುದು. ಕ್ರೀಡಾಪಟುಗಳು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಅಪೇಕ್ಷಿತ ಜಯವನ್ನು ಹೊಂದುವಿರಿ.
ADVERTISEMENT
ADVERTISEMENT